ಕಾಸರಗೋಡು: ಎಸ್.ಎಸ್.ಎಫ್ 33ನೇ ಪಳ್ಳಂಗೋಡ್ ಸೆಕ್ಟರ್ ಸಾಹಿತ್ಯೋತ್ಸವದ ಅಧಿಕೃತ ಘೋಷಣೆಯು ಅಡೂರು ಪೇಟೆಯಲ್ಲಿ ನಡೆಯಿತು. ದಫ್ ಮುಟ್ಟು, ಭಾಷಣ ಮತ್ತು ಹಾಡು ಸೇರಿದಂತೆ ಮೂಲಕ ವೈವಿಧ್ಯಮಯ ಕಲೆಗಳಿಂದ ಜನರ ಗಮನ ಸೆಳೆಯಿತು.
ಸ್ವಾಗತ ಸಮಿತಿಯ ಅಧ್ಯಕ್ಷರಾದ ಡಿ.ಎಂ.ಎ ಕುಞÂ ಮದನಿ ಅವರು ಸಾಹಿತ್ಯೋತ್ಸವ ಆಮಂತ್ರಣಪತ್ರಿಕೆ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಹನೀಫಾ ಹಾಜಿ ಟಿ.ಕೆ, ಸಿದ್ದೀಕ್ ದರ್ಕಾಸ್, ರಜಾಕ್ ಸಖಾಫಿ ಪಳ್ಳಂಗೋಡ್, ಅಸ್ಲಂ ಅಡೂರು, ಮಮ್ಮಿ ಹಾಜಿ, ಬೀರನ್ ಟಿ, ಕಾದರ್ ಕುವೈತ್, ತಾಜು ಯು.ಎಂ, ಅಮೀರ್ ಮತ್ತು ಮುಸ್ತಫಾ ಕರ್ನೂರು ಮೊದಲಾದವರು ಭಾಗವಹಿಸಿದ್ದರು. ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಇದ್ರೀಸ್ ವಂದಿಸಿದರು.


