ಮಂಜೇಶ್ವರ: ಮಾದಕವಸ್ತು ಸಾಗಾಟದ ಕುಖ್ಯಾತ ಆರೋಪಿ, ಮೀಂಜ ಕಳಾಯಿ ಅಡ್ಕ ಕೊಳ್ಚಪ್ಪು ನಿವಾಸಿ ಹುಸೇನ್ ಯಾನೆ ಮುಹ್ಮದ್ ಹುಸೈನ್(32) ಎಂಬಾತನನ್ನು ಮಂಜೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಐಆಂಗ ಬಂಧನ ವಿಧಿಸಲಾಗಿದೆ.
ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುತ್ತಿದ್ದ ಸಂದರ್ಭ ಈ ವ್ಯಕ್ತಿಯನ್ನು ವಶಕ್ಕೆ ತೆಗೆದು ವಿಚಾರಿಸಿದಾಗ ಮೂರು ವಾರಂಟು ಹೊಂದಿರುವ ಕುಖ್ಯಾತ ಆರೋಪಿ ಎಂಬುದು ಖಚಿತವಾಗಿತ್ತು. ಈತನನ್ನು ತಪಾಸಣೆಗೊಳಪಡಿಸಿದಾಗ ಎಂಡಿಎಂಎ ಸೇವನೆಯ ಗುಂಗಿನಲ್ಲಿರುವುದು ಪತ್ತೆಯಾಗಿತ್ತು. ಈತ ಘರ್ಷಣೆ, ಆಕ್ರಮಣ, ಗಾಂಜಾ, ಅಬಕಾರಿ ಪ್ರಕರಣಗಳಲ್ಲೂ ಆರೋಪಿಯಾಗಿದ್ದು, ತಲೆಮರೆಸಿಕೊಂಡು ತಿರುಗಾಡುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ.

