ಕಾಸರಗೋಡು: ಜಿಲ್ಲೆಯಲ್ಲಿ ಭಾರತ ಜನಗಣತಿ 2027 ರ ಮೊದಲ ಹಂತ ಪ್ರಗತಿಯಲ್ಲಿದ್ದು, ಜಿಲ್ಲಾ ಪೆÇಲೀಸ್ ವರಿಷ್ಠಾದಿಕಾರಿ ಪಿ. ನಿತಿನ್‍ರಾಜ್ ಅವರು ಮಾಹಿತಿಯನ್ನು ಆನ್‍ಲೈನ್‍ನಲ್ಲಿ ಸಲ್ಲಿಸುವ ಮೂಲಕ ಸ್ವಯಂ-ಗಣತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಪಿ. ನಿತಿನ್‍ರಾಜ್ ಅವರು ತಮ್ಮ ಲ್ಯಾಪ್‍ಟಾಪ್‍ನಲ್ಲಿ ಜನಗಣತಿಯ ಎಲ್ಲಾ 34 ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಸ್ವಯಂ-ಗಣತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು. ನಂತರ ಅವರಿಗೆ 11 ಅಂಕಿಗಳ ಸ್ವಯಂ-ಗಣತಿ ಐಡಿ ನೀಡಲಾಯಿತು.
ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರು ಸ್ವಯಂ ಗಣತಿಯನ್ನು ನಡೆಸಿ ಜನಗಣತಿ ಪೆÇೀರ್ಟಲ್‍ನಲ್ಲಿ ಡಿಜಿಟಲ್ ಮಾಹಿತಿಯನ್ನು ಒದಗಿಸಿದರು. ಮಠದ ಮುಖ್ಯಸ್ಥರು ಸ್ವಯಂ ಗಣತಿಗೆ ಸಂಬಂಧಿಸಿದ 34 ಮಾಹಿತಿಯನ್ನು ತಮ್ಮ ಮೊಬೈಲ್ ಫೆÇೀನ್‍ನಲ್ಲಿ ಭರ್ತಿ ಮಾಡುವ ಮೂಲಕ ಸ್ವಯಂ ಗಣತಿಯನ್ನು ಪೂರ್ಣಗೊಳಿಸಿದರು.
ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ(ಎಡಿಎಂ)ಪಿ. ಉದಯಕುಮಾರ್ ಪೆರ್ಲ, ಕಲೆಕ್ಟರೇಟ್ ಹಿರಿಯ ಸೂಪರಿಂಟೆಂಡೆಂಟ್ ಕೆ. ರಮೇಶ್, ಜನಗಣತಿ ವಿಭಾಗದ ಜೂನಿಯರ್ ಸೂಪರಿಂಟೆಂಡೆಂಟ್ ಕೆ. ಜಗದೀಶ್ ಮತ್ತು ಜನಗಣತಿ ವಿಭಾಗ ಗುಮಾಸ್ತ ಪಿ. ರಾಕೇಶ್ ನೇತೃತ್ವದ ತಂಡ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಕಚೇರಿ ಹಾಗೂ ಶ್ರೀಎಡನೀರು ಮಠಕ್ಕೆ ತೆರಳಿ ಸ್ವಯಂ ಗಣತಿ ಪ್ರಕ್ರಿಯೆ ಪೂರ್ತಿಗೊಳಿಸಿದರು.




