ತಿರುವನಂತಪುರಂ: ಪ್ರಿಯದರ್ಶಿನಿ ಯೋಜನೆಯು ಕೇರಳದ ಸಾರ್ವಜನಿಕ ಸಾರಿಗೆ ಕ್ಷೇತ್ರದಲ್ಲಿ ಒಂದು ಮೈಲಿಗಲ್ಲು ಎಂದು ಸಾರಿಗೆ ಸಚಿವ ಸಿಪಿ ಜಾನ್ ಹೇಳಿದರು.
ತಂಬಾನೂರು ಕೆ.ಎಸ್.ಆರ್.ಟಿ.ಸಿ. ಸಂಕೀರ್ಣದಲ್ಲಿ ನಡೆದ ಪ್ರಿಯದರ್ಶಿನಿ ಯೋಜನೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಸಚಿವರು ಮಾತನಾಡುತ್ತಿದ್ದರು.
ಪ್ರಸ್ತುತ, 3,125 ಸಾಮಾನ್ಯ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶವಿದೆ. ಸ್ಥಳೀಯಾಡಳಿತ ಸಂಸ್ಥೆಗಳ ಸಹಯೋಗದೊಂದಿಗೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸಲು ಕ್ರಮಗಳು ಕೂಡಾ ಪ್ರಗತಿಯಲ್ಲಿವೆ.
ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಬಸ್ಗಳನ್ನು ಪ್ರಾಯೋಜಿಸುವ ಮಾರ್ಗಸೂಚಿಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದವರು ಈ ಸಂದರ್ಭ ತಿಳಿಸಿದರು.

