ಪ್ಯಾರಿಸ್ : ಭಾರತದ ದೂರದ ಓಟಗಾರ್ತಿ ಪಾರುಲ್ ಚೌಧರಿ ಮಹಿಳೆಯರ 5,000 ಮೀಟರ್ ಓಟದಲ್ಲಿ ತನ್ನದೇ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದಾರೆ.
ಫ್ರಾನ್ಸ್ ನ ನೈಸ್ ನಲ್ಲಿ ಶನಿವಾರ ನಡೆದ ಕ್ರೀಡಾಕೂಟದಲ್ಲಿ 31 ವರ್ಷದ ಪಾರುಲ್ 15 ನಿಮಿಷ 04.26 ಸೆಕೆಂಡ್ ನಲ್ಲಿ ಗುರಿ ತಲುಪಿ, 2023ರಲ್ಲಿ ತಾವು ನಿರ್ಮಿಸಿದ್ದ 15 ನಿಮಿಷ 10.35 ಸೆಕೆಂಡ್‌ನ ರಾಷ್ಟ್ರೀಯ ದಾಖಲೆಯನ್ನು ಉತ್ತಮಪಡಿಸಿಕೊಂಡರು.
ಇಥಿಯೋಪಿಯಾದ ಬೆರೆಕಾ ಸೆನಿಯಾ ಮುಹಮ್ಮದ್ 15 ನಿಮಿಷ 03.85 ಸೆಕೆಂಡ್‌ನಲ್ಲಿ ಗುರಿ ತಲುಪಿ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದರು.
ಕಳೆದ ತಿಂಗಳು ನಡೆದ ಶಾಂಘೈ ಡೈಮಂಡ್ ಲೀಗ್ ನಲ್ಲಿ 3,000 ಮೀಟರ್ ಸ್ಟೀಪಲ್‌ಚೇಸ್ ಸ್ಪರ್ಧೆಯಲ್ಲಿ ಪಾರುಲ್ ಎರಡನೇ ಶ್ರೇಷ್ಠ ಪ್ರದರ್ಶನ ನೀಡಿದ ಭಾರತೀಯ ಓಟಗಾರ್ತಿಯಾಗಿ ಗುರುತಿಸಿಕೊಂಡಿದ್ದರು.

