ಬೀಜಿಂಗ್ : ತೀಸ್ತಾ ಮತ್ತು ಇತರ ನದಿಗಳ ನಿರ್ವಹಣೆಯಲ್ಲಿ ಸಹಕಾರವನ್ನು ಬಲಪಡಿಸಲು ಬಾಂಗ್ಲಾದೇಶ ಮತ್ತು ಚೀನಾ ಗುರುವಾರ ಒಪ್ಪಿಕೊಂಡಿವೆ.
ಬೀಜಿಂಗ್ ಪ್ರವಾಸದಲ್ಲಿರುವ ಬಾಂಗ್ಲಾದೇಶದ ಪ್ರಧಾನಿ ತಾರಿಕ್ ರೆಹಮಾನ್ ಅವರು, ಚೀನಾದ ಜಲಸಂಪನ್ಮೂಲ ಸಚಿವ ಲೀ ಕುವೋಯಿಂಗ್ ಅವರನ್ನು ಭೇಟಿ ಮಾಡಿದಾಗ ಈ ಒಪ್ಪಂದಕ್ಕೆ ಬರಲಾಯಿತು ಎಂದು ಬಾಂಗ್ಲಾದ ಸರ್ಕಾರಿ ಮಾಧ್ಯಮ ವರದಿ ಮಾಡಿದೆ.
ಈ ವರ್ಷದ ಆರಂಭದಲ್ಲಿ ಅಧಿಕಾರ ವಹಿಸಿಕೊಂಡಿದ್ದ ರೆಹಮಾನ್ ಅವರು, ಪ್ರಧಾನಿಯಾಗಿ ತಮ್ಮ ಮೊದಲ ವಿದೇಶ ಪ್ರವಾಸವನ್ನು ಮಲೇಷ್ಯಾಕ್ಕೆ ಕೈಗೊಂಡಿದ್ದರು. ಜೂನ್ 22ರಂದು ಮಲೇಷ್ಯಾದ ಕೌಲಾಲಂಪುದಿಂದ ಚೀನಾದ ದಾಲಿಅನ್ ನಗರಕ್ಕೆ ತೆರಳಿ, ಅಲ್ಲಿ ಅವರು ವಿಶ್ವ ಆರ್ಥಿಕ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಬುಧವಾರ ದಾಲಿಅನ್ನಿಂದ ಹೈಸ್ಪೀಡ್ ರೈಲಿನ ಮೂಲಕ ಬೀಜಿಂಗ್ಗೆ ಆಗಮಿಸಿದರು. ಇಲ್ಲಿ ಅವರು ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್, ಪ್ರಧಾನಿ ಲೀ ಕಿಯಾಂಗ್ ಮತ್ತು ಇತರ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸುವ ನಿರೀಕ್ಷೆಯಿದೆ.

