HEALTH TIPS

ಸೆಂಟ್ರಲ್ ವಿಸ್ಟಾ ಪುನರಾಭಿವೃದ್ಧಿಗಾಗಿ ಉದ್ಯೋಗ ಭವನ ಕೆಡವಲಾಗುತ್ತಿದೆ: ಕೇಂದ್ರ

 ನವದೆಹಲಿ: ಸೆಂಟ್ರಲ್ ವಿಸ್ಟಾ ಪುನರಾಭಿವೃದ್ಧಿ ಯೋಜನೆಯಡಿಯಲ್ಲಿ ಉದ್ಯೋಗ ಭವನವನ್ನು ಕೆಡವಲಾಗುತ್ತದೆ ಎಂದು ಕೇಂದ್ರ ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ. 


2026ರ ಮೇ ತಿಂಗಳಲ್ಲಿ ನಿರ್ಮಾಣ ಭವನ ಕಟ್ಟಡವನ್ನು ಕೂಡ ಕೆಡವಲಾಗಿತ್ತು. 1950 ಮತ್ತು 1970 ರ ನಡುವೆ ನಿರ್ಮಿಸಲಾದ ಶಾಸ್ತ್ರಿ ಭವನ ಮತ್ತು ಕೃಷಿ ಭವನದಂತಹ ಕಟ್ಟಡಗಳನ್ನು ಸಹ ಕೆಡವಲು ನಿರ್ಧರಿಸಲಾಗಿದೆ.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಸೆಂಟ್ರಲ್ ವಿಸ್ಟಾ ಪ್ರದೇಶದಕ್ಕೆ ಸರ್ಕಾರಿ ಕಚೇರಿಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ. ಇದರ ಭಾಗವಾಗಿ 1950ರ ಸುಮಾರಿಗೆ ನಿರ್ಮಾಣ ಮಾಡಿದ್ದ ಉದ್ಯೋಗ ಭವನದ ಕಟ್ಟಡವನ್ನು ಕೆಡವಲಾಗುತ್ತಿದೆ ಎಂದು ಹೇಳಿದ್ದಾರೆ.

ನಿರ್ಮಾಣ ಭವನ, ಉದ್ಯೋಗ ಭವನ ಕಟ್ಟಡಗಳು ಸ್ವಾತಂತ್ರ್ಯ ನಂತರದಲ್ಲಿ ನಿರ್ಮಾಣವಾಗಿದ್ದು, ದಶಕಗಳಿಂದ ಹಲವಾರು ಪ್ರಮುಖ ಸಚಿವಾಲಯಗಳು ಈ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದವು. ಅವುಗಳನ್ನು ಕರ್ತವ್ಯ ಭವನಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ. 10 ಹೊಸ ಕಟ್ಟಡಗಳ ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಸೆಂಟ್ರಲ್ ವಿಸ್ಟಾ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರವು ಈಗಾಗಲೇ ಹೊಸ ಸಂಸತ್ತಿನ ಕಟ್ಟಡ, ಕರ್ತವ್ಯ ಮಾರ್ಗವನ್ನು ಮರು ಅಭಿವೃದ್ಧಿಪಡಿಸಿದೆ.












ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries