ದುಬೈ: ಒಮಾನ್ ಕರಾವಳಿಯಲ್ಲಿ ಭಾರತದ ವಾಣಿಜ್ಯ ಹಡಗಿನ ಇಂಜಿನ್ ವಿಫಲಗೊಂಡಿದ್ದು, ಸಿಬ್ಬಂದಿ ಸ್ಥಳಾಂತರ ಕಾರ್ಯ ನಡೆಯುತ್ತಿದೆ ಎಂದು ಮಸ್ಕತ್ನ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ಭಾರತದ ಧ್ವಜವಿರುವ ವಾಣಿಜ್ಯ ಹಡಗು ವಿರಾಟ್-1ರಲ್ಲಿ ದೋಷ ಕಂಡುಬಂದಿದ್ದು, ಇದರಲ್ಲಿ 4 ಸಿಬ್ಬಂದಿ ಇದ್ದಾರೆ ಎಂದು ವರದಿ ತಿಳಿಸಿದೆ.
ಗಲ್ಫ್ ವಲಯದಲ್ಲಿ ಅಮೆರಿಕ ಮತ್ತು ಇರಾನ್ ಸಂಘರ್ಷದ ನಡುವೆ ಈ ಘಟನೆ ನಡೆದಿದೆ.
'ಹಡಗಿನ ಇಂಜಿನ್ ವೈಫಲ್ಯ ಕಂಡುಬಂದಿದೆ. ಸಿಬ್ಬಂದಿಯನ್ನು ಕ್ರಮೇಣ ಲೈಫ್ ರಾಫ್ಟ್ಗೆ ಸ್ಥಳಾಂತರಿಸಲಾಗಿದೆ. ಒಮಾನ್ ಅಧಿಕಾರಿಗಳ ಸಹಯೋಗದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ' ಎಂದು ಭಾರತದ ರಾಯಭಾರ ಕಚೇರಿ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದೆ.
ಒಮಾನ್ ಕಡಲಲ್ಲಿ ಕಳೆದ ವಾರ ಭಾರಿ ಉದ್ವಿಗ್ನತೆ ಏರ್ಪಟ್ಟಿತ್ತು. ಭಾರತದ ಮೂರು ಹಡಗುಗಳ ಮೇಲೆ ಅಮೆರಿಕ ಸೇನೆ ಕ್ಷಿಪಣಿ ಹಾಳಿ ನಡೆಸಿತ್ತು. ಈ ದಾಳಿಯಲ್ಲಿ ಭಾರತದ ಮೂವರು ಸಿಬ್ಬಂದಿ ಮೃತಪಟ್ಟಿದ್ದರು.
ಈ ಸಂಬಂಧ ಅಮೆರಿಕ ರಾಯಭಾರಿಯನ್ನು ಕರೆಸಿ ಪ್ರತಿಭಟನೆ ವ್ಯಕ್ತಪಡಿಸಿದ್ದ ಭಾರತ, ನಮ್ಮ ಹಡಗಿನ ಮೇಲೆ ದಾಳಿ ಮತ್ತು ಸಿಬ್ಬಂದಿ ಹತ್ಯೆಯು ಸ್ವೀಕಾರಾರ್ಹವಲ್ಲ. ಕೂಡಲೇ ದಾಳಿಯನ್ನು ಸ್ಥಗಿತಗೊಳಿಸುವ ಮೂಲಕ ಅಂತರರಾಷ್ಟ್ರೀಯ ನೌಕಾಯಾನ ಭದ್ರತೆಗೆ ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿತ್ತು.

