ಕಾಸರಗೋಡು: ಕೆಎಸ್ಸಾರ್ಟಿಸಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಕರ್ಯ ಒದಗಿಸಿರುವುದರಿಂದ ಭಾರೀ ಆರ್ಥಿಕ ನಷ್ಟ ಅನುಭವಿಸುತ್ತಿರರುವ ಹಿನ್ನೆಲೆಯಲ್ಲಿ ಬಹುತೇಕ ಖಾಸಗಿ ಬಸ್ಗಳು ತಮ್ಮ ಸಂಚಾರ ತಾತ್ಕಾಲಿಕ ರದ್ದುಕೋರಿ ಆರ್ಟಿಓಗೆ ಮನವಿ ಸಲ್ಲಿಸಲಾರಂಭಿಸಿದೆ.
ತಮ್ಮ ಬಸ್ಗಳ ಸಂಚಾರ ರದ್ದುಪಡಿಸಲು ಈಗಾಘಲೇ ಜಿಲ್ಲೆಯ 15 ಖಾಸಗಿ ಬಸ್ ಮಾಲಿಕರು ಮೋಟಾರು ವಾಹನ ಇಲಾಖೆಗೆ ಜಿ.ಪಿ.ಎಂ ಸಲ್ಲಿಸಿದೆ. ಕೋವಿಡ್ ಮಹಾಮಾರಿಯ ಮೊದಲು ಜಿಲ್ಲೆಯಲ್ಲಿ 500ರಷ್ಟು ಖಾಸಗಿ ಬಸ್ಗಳು ಸಂಚಾರ ನಡೆಸುತ್ತಿದ್ದರೆ, ಇಂದು ಜಿಲ್ಲೆಯಲ್ಲಿ ಖಾಸಗಿ ಬಸ್ಗಳ ಸಂಖ್ಯೆ 350ಕ್ಕೂ ಕಡಿಮೆಯಿದ್ದು, ಜಿಪಿಎಂ ಮೂಲಕ ಮತ್ತಷ್ಟು ಬಸ್ಗಳು ಸಂಚಾರ ಸ್ಥಗಿತಗೊಳ್ಳಲಿದೆ.
ಕೆಎಸ್ಆರ್ಟಿಸಿಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಕರ್ಯ ಏರ್ಪಡಿಸಿದ ಬಳಿಕ ಜಿಲ್ಲೆಯಲ್ಲಿ 50ರಷ್ಟು ಖಾಸಗಿ ಬಸ್ಗಳು ತಮ್ಮ ಬಸ್ ಸರ್ವೀಸ್ಗಳ ಸಂಖ್ಯೆ ಕಡಿತಗೊಳಿಸಬೇಕಾಗಿ ಬಂದಿರುವುದಾಗಿ ಖಾಸಗಿ ಬಸ್ ಮಾಲಿಕರು ತಿಳಿಸಿದ್ದಾರೆ.
ಕಾಸರಗೋಡು-ತಲಪಾಡಿ, ಕಾಸರಗೋಡು-ಕಣ್ಣೂರು, ಕಾಸರಗೋಡು-ಕಾಞಂಗಾಡ್, ಕಾಸರಗೋಡು-ಪಯ್ಯನ್ನೂರು ಸೇರಿದಂತೆ ಇತರ ಹಲವು ರೂಟ್ಗಳಲ್ಲಿ ಹೆಚ್ಚಿನ ಖಾಸಗಿ ಬಸ್ಗಳು ನಷ್ಟದಿಂದಾಗಿ ತಮ್ಮ ಸಂಚಾರ ಸಂಖ್ಯೆಯನ್ನು ಕಡಿತಗೊಳಿಸಲಾರಂಭಿಸಿದೆ. ಇನ್ನು ಭಾನುವಾರದ ದಿವಸಗಳಂದು ಕೆಲವೊಂದು ಖಾಸಗಿ ಬಸ್ಗಳು ರಸ್ತೆಗಿಳಿಯದೆ, ಸಂಚಾರ ಸ್ಥಗಿತಗೊಳಿಸುತ್ತಿದೆ.



