ಕಾಸರಗೋಡು: ಪಯ್ಯನ್ನೂರು ಬಳಿಯ ಪಿಲಾತ್ತರ ಹೋಪ್ ಪುನರ್ವಸತಿ ಕೇಂದ್ರದಲ್ಲಿ ವಾಸಿಸುತ್ತಿದ್ದ ಕಾಸರಗೋಡು ನಿವಾಸಿ ಗೋಕುಲ್ದಾಸ್ (62) ಎಂಬವರು ಮೃತಪಟಟಿದ್ದಾರೆ. ಪರಿಯಾರಂ ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಇವರ ಜವಾಬ್ದಾರಿಗಳನ್ನು ವಹಿಸಿಕೊಳ್ಳಲು ಯಾರೂ ಮುಂದಾಗದಿದ್ದ ಹಿನ್ನೆಲೆಯಲ್ಲಿ ಮೂರು ವರ್ಷಗಳ ಹಿಂದೆ ಕಾಸರಗೋಡು ನಗರ ಪೆÇಲೀಸ್ ಠಾಣೆಯ ಎಸ್.ಎಚ್.ಒ ಅವರ ನಿರ್ದೇಶನದ ಪ್ರಕಾರ ವ್ಯಕ್ತಿಯನ್ನು ಪುನರ್ವಸತಿ ಕೇಂದ್ರಕ್ಕೆ ದಾಖಲಿಸಲಾಗಿತ್ತು.
ಅಸೌಖ್ಯ ಬಾಧಿಸಿ ಹಾಸಿಗೆ ಹಿಡಿದಿದ್ದ ಇವರು ಮಂಗಳವಾರ ಮೃತಪಟ್ಟಿದ್ದು, ಮೃತದೇಹವನ್ನು ಪಯ್ಯನ್ನೂರು ಪ್ರಿಯದರ್ಶಿನಿ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ.
ಇವರ ಸಂಬಂಧಿಕರು ಅಥವಾ ಸ್ಟೇಕ್ ಹೋಲ್ಡರ್ ಗಳು ಜುಲೈ 10ರ ಮಧ್ಯಾಹ್ನ 12 ಗಂಟೆಗೆ ಮುಂಚಿತವಾಗಿ ಕಾಸರಗೋಡು ನಗರ ಠಾಣೆಯ ಪೆÇಲೀಸರನ್ನು ಅಥವಾ ಪುನರ್ವಸತಿ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಬೇಕು. ವಾರಸುದಾರರು ಯಾರೂ ಬಾರದಿದ್ದಲ್ಲಿ, ಜನಪ್ರತಿನಿಧಿಯ ಅಭಿಪ್ರಾಯದ ಪ್ರಕಾರ ಮೃತದೇಹದ ಅಂತ್ಯಸಂಸ್ಕಾರ ನಡೆಸಲಾಗುವುದಾಗಿ ಪೋಲೀಸರು ತಿಳಿಸಿದ್ದಾರೆ.

