ಕಾಸರಗೋಡು: ಕೋಡೋಂ ಬೇಳೂರ್ ಪಂಚಾಯಿತಿ ಎಣ್ಣೆಪ್ಪಾರ ಮಲಯಾಟ್ಟುಕ್ಕರ ಪ್ರದೇಶದಲ್ಲಿ ಚಿರತೆ ಸಂಚಾರದ ಬಗ್ಗೆ ವದಂತಿ ಹಬ್ಬಿರುವ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ಸಥಳಕ್ಕೆ ಭೇಟಿನೀಡಿ ಹುಡುಕಾಟ ನಡೆಸಿದ್ದಾರೆ.
ಮಂಗಳವಾರ ಚಿರತೆ ಸಂಚರಿಸುತ್ತಿದ್ದ ಬಗ್ಗೆ ನಾಗರಿಕರು ನೀಡಿದ ಮಾಹಿತಿಯನ್ವಯ ಪರುದೋಂ ಸೆಕ್ಷನ್ ಅರಣ್ಯಾಧಿಕಾರಿ ಎಚ್.ಆರ್ ಬಾಬು ನೇತೃತ್ವದ ಅಧಿಕಾರಿಗಳ ತಂಡ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದೆ. ಆದರೆ, ಚಿರತೆ ಸಂಚಾರದ ಯಾವುದೇ ಕುರುಕ ಕಂಡುಬಂದಿಲ್ಲ. ಆಸುಪಾಸಿನ ನಿವಾಸಿಗಳು ಜಾಗ್ರತೆ ಪಾಲಿಸುವಂತೆ ಅಧಿಕಾರಿಗಳು ತಿಳಿಸಿದ್ದಾರೆ.

