HEALTH TIPS

ಮೋಹಿನಿಯಾಟ್ಟಂನಲ್ಲಿ ಎಂಎ ಪದವಿ ಪಡೆದ ಕೇರಳದ ಮುಸ್ಲಿಂ ವಿದ್ಯಾರ್ಥಿನಿ ಜಂಶೀನಾ

 ತಿರುವನಂತಪುರ: ಕೇರಳದ ಮುಸ್ಲಿಂ ವಿದ್ಯಾರ್ಥಿನಿಯೊಬ್ಬರು ಮೋಹಿನಿಯಟ್ಟಂ ನೃತ್ಯ ಕಲೆಯಲ್ಲಿ ಎಂಎ ಪದವಿ ಪಡೆದಿದ್ದು, ಮಹಾತ್ಮ ಗಾಂಧಿ ವಿಶ್ವವಿದ್ಯಾಲಯಕ್ಕೆ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. 


ಅವರೇ ಜಂಶೀನಾ ಜಮಾಲ್. ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಸ್ನೇಹಿತರು ಶುಭಕೋರಿದ ಪೋಸ್ಟ್‌ಗಳನ್ನೂ ರೀಶೇರ್ ಮಾಡಿಕೊಂಡಿದ್ದಾರೆ.

ಜಂಶೀನಾ ಕೊಚ್ಚಿ ಮೂಲದವರು. ಮೂರನೇ ವಯಸ್ಸಿನಲ್ಲಿಯೇ ನೃತ್ಯಾಭ್ಯಾಸ ಆರಂಭಿಸಿದ್ದ ಅವರು, ಕಲಾಮಂಡಲಂ ಗೀತಾ ಎನ್ನುವ ಅವರ ಬಳಿ ಭರತನಾಟ್ಯವನ್ನು ಕಲಿಯಲು ಆರಂಭಿಸಿದ್ದರು. 7ನೇ ತರಗತಿಯಲ್ಲಿದ್ದಾಗ ಮೋಹಿನಿಯಟ್ಟಂನತ್ತ ಆಕರ್ಷಿತರಾದ ಇವರು, ಪ್ರಸ್ತುತ ಪದ್ಮಶ್ರೀ ಕಲಾಮಂಡಲಂ ಕ್ಷೇಮಾವತಿ ಅವರ ಬಳಿ ತರಬೇತಿ ಪಡೆಯುತ್ತಿದ್ದಾರೆ.

ಜಂಶೀನಾ ಅವರ ತಂದೆ ಟಿ.ಎ ಜಮಾಲ್‌ ರಂಗಭೂಮಿ ಕಲಾವಿದ. ತಾಯಿ ಶೀಬಾ ಕೂಡ ಭರತನಾಟ್ಯ ಕಲಿತಿದ್ದಾರೆ. ಈ ಬಗ್ಗೆ ಮಾತನಾಡಿರುವ ಜಂಶೀನಾ, 'ನನ್ನ ಕುಟುಂಬ ಅಥವಾ ನನ್ನ ಸುತ್ತಲಿನವರು ಎಂದಿಗೂ ನನ್ನ ಆಯ್ಕೆಯ ಬಗ್ಗೆ ಪ್ರಶ್ನೆ ಮಾಡಲಿಲ್ಲ. ನಾನೇಕೆ ಇದನ್ನು ಮಾಡುತ್ತಿದ್ದೇನೆ ಎನ್ನುವ ಬಗ್ಗೆ ವಿವರಿಸುವ ಪ್ರಸಂಗವೇ ಎದುರಾಗಲಿಲ್ಲ. ನಿರ್ಬಂಧಗಳು ಮತ್ತು ತಡೆಗಳ ಕುರಿತು ವಿವಿಧ ಕಡೆಗಳಿಂದ ನಾವು ಆಗಾಗ್ಗೆ ಕೇಳುತ್ತಲೇ ಇರುತ್ತೇವೆ. ಆದರೆ ನನ್ನ ಅನುಭವ ಹಾಗಿರಲಿಲ್ಲ. ನನಗೆ ಯಾವಾಗಲೂ ಪ್ರೋತ್ಸಾಹವೇ ಸಿಗುತ್ತಿದೆ' ಎಂದು ಖುಷಿ ಹಂಚಿಕೊಂಡಿರುವುದಾಗಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ತಿಳಿಸಿದೆ.

ಜಂಶೀನಾ, ಖುಜುರಾಹೋ ಡ್ಯಾನ್ಸ್‌ ಫೆಸ್ಟಿವಲ್‌, ಕೇರಳ ಸಂಗೀತ ನಾಟಕ ಅಕಾಡೆಮಿ ಸೇರಿದಂತೆ ಹಲವು ಪ್ರತಿಷ್ಠಿತ ವೇದಿಕೆಗಳಲ್ಲಿ ಪ್ರದರ್ಶನ ನೀಡಿದ್ದಾರೆ.

ಅಲ್ಲದೆ, ದೂರದರ್ಶನದಿಂದ ಮಾನ್ಯತೆ ಪಡೆದ ಕಲಾವಿದೆಯಾಗಿದ್ದಾರೆ. ಕೇರಳ ಕಲಾಮಂಡಲಂನ ಯುವಪ್ರತಿಭಾ ಪ್ರಶಸ್ತಿಯನ್ನೂ ಪಡೆದಿದ್ದಾರೆ. ನೃತ್ಯದ ಜತೆಗೆ, ಅವರು ವಲಿಯಪೆರುನ್ನಾಳ್, ಪಾಪಂ ಚೆಯ್ಯತಾವರ್ ಕಲ್ಲೇರಿಯಾಟ್ಟೆ, ಪರವು, ಮಾನಸವಾಚಾ ಸೇರಿದಂತೆ ಹಲವು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries