HEALTH TIPS

ನೂತನ ವಿಶ್ವ ಚಾಂಪಿಯನ್ ಸ್ಪೇನ್ ಗೆಲುವಿನ ಗುಟ್ಟೇನು?

 ನ್ಯೂ ಜರ್ಸಿ: ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ಅರ್ಜೆಂಟೀನದ ವಿರುದ್ಧ ರೋಚಕ ಜಯ ಗಳಿಸಿದ ಸ್ಪೇನ್ ತಂಡವು ಎರಡನೇ ಬಾರಿ ಫಿಫಾ ವಿಶ್ವಕಪ್ ಪ್ರಶಸ್ತಿ ಬಾಚಿಕೊಂಡಿತು.

ಫೈನಲ್ ಗೆಲ್ಲುವ ಮೂಲಕ 38 ಪಂದ್ಯಗಳ ಅಜೇಯ ಓಟ ಮುಂದುವರಿಸಿರುವ ಸ್ಪೇನ್ ತಂಡ ಚಾಂಪಿಯನ್ಪಟ್ಟಕ್ಕೇರಲು ಕಾರಣವಾದ ಅಂಶಗಳತ್ತ ಒಂದು ಕಿರು ನೋಟ.. 


*ಟೂರ್ನಿಯಲ್ಲಿ ಒಂದೇ ಒಂದು ಗೋಲು ಬಿಟ್ಟುಕೊಟ್ಟ ಚಾಂಪಿಯನ್ನರು: ಸ್ಪೇನ್ ತಂಡ ಈ ಬಾರಿ ಚಾಂಪಿಯನ್ಪಟ್ಟಕ್ಕೇರಲು ಕಾರಣವಾಗಿದ್ದು ರಕ್ಷಣಾತ್ಮಕ ಪ್ರದರ್ಶನ. ಅದು ಇಡೀ ಟೂರ್ನಿಯಲ್ಲಿ ಆಡಿರುವ 8 ಪಂದ್ಯಗಳಲ್ಲಿ ಕೇವಲ ಒಂದೇ ಒಂದು ಗೋಲು ಬಿಟ್ಟುಕೊಟ್ಟಿದೆ. ಇದು ಚಾಂಪಿಯನ್ ತಂಡವೊಂದು ಫಿಫಾ ವಿಶ್ವಕಪ್ನಲ್ಲಿ ಬಿಟ್ಟುಕೊಟ್ಟ ಅತಿ ಕಡಿಮೆ ಗೋಲಾಗಿದೆ. ರಕ್ಷಣಾತ್ಮಕ ಆಟದ ಮೂಲಕ ಎದುರಾಳಿ ತಂಡದ ಆಟಗಾರರಿಗೆ ಗೋಲು ಗಳಿಸುವ ಅವಕಾಶವನ್ನೇ ಸ್ಪೇನ್ ಮಾಡಿ ಕೊಡಲಿಲ್ಲ. ಈ ಹಿಂದಿನ ವಿಶ್ವಕಪ್ಗಳಲ್ಲಿ ಫ್ರಾನ್ಸ್(1998), ಇಟಲಿ(2006),ಸ್ಪೇನ್(2010)ತಂಡಗಳು ಜಂಟಿಯಾಗಿ ಹೊಂದಿದ್ದ ಅತಿ ಕಡಿಮೆ(2 ಗೋಲುಗಳು)ಗೋಲು ಬಿಟ್ಟುಕೊಟ್ಟ ದಾಖಲೆ ಈ ವಿಶ್ವಕಪ್ನಲ್ಲಿ ಪತನವಾಗಿದೆ.

*ಚಾಂಪಿಯನ್ನರ ಭದ್ರಕೋಟೆ ಸೀಮೋನ್: ಸ್ಪೇನ್‌ನ ಗೋಲ್ಕೀಪರ್ ಉನೈ ಸೀಮೋನ್ ಅವರು ವಿಶ್ವಕಪ್ ಟೂರ್ನಿಯಲ್ಲಿ ಆಡಿರುವ 8 ಪಂದ್ಯಗಳಲ್ಲಿ 7 ಬಾರಿ ಒಂದೂ ಗೋಲು ಕೂಡ ಬಿಟ್ಟುಕೊಡದೆ 'ಗೋಲ್ಡನ್ ಗ್ಲವ್'ಪ್ರಶಸ್ತಿಗೆ ಭಾಜನರಾದರು. ಟೂರ್ನಿಯಲ್ಲಿ ಸತತವಾಗಿ 650 ನಿಮಿಷಗಳ ಕಾಲ ಎದುರಾಳಿಗಳಿಗೆ ಒಂದೂ ಗೋಲು ಗಳಿಸಲು ಬಿಡದೆ ಸಾರ್ವಕಾಲಿಕ ವಿಶ್ವಕಪ್ ದಾಖಲೆ ನಿರ್ಮಿಸಿದರು.

*ಗೆಲುವಿನ ಹಿಂದಿದೆ ನಾಯಕನ ಆಟ: ಸ್ಪೇನ್ ಗೆಲುವಿನ ಹಿಂದೆ ನಾಯಕ ರೋಡ್ರಿ ಅವರ ಕಾಲ್ಚಳಕ ಕೂಡ ಕೆಲಸ ಮಾಡಿದೆ. ಮಿಡ್ ಫೀಲ್ಡರ್ ಆಗಿರುವ ರೋಡ್ರಿ ಈ ಟೂರ್ನಿಯಲ್ಲಿ 650ಕ್ಕೂ ಅಧಿಕ ಪಾಸ್‌ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು. ಈ ಮೂಲಕ 2022ರ ಖತರ್ ವಿಶ್ವಕಪ್‌ನಲ್ಲಿ ತಾವೇ ನಿರ್ಮಿಸಿದ್ದ 638 ಪಾಸ್‌ಗಳ ದಾಖಲೆಯನ್ನು ಮುರಿದರು. 'ಗೋಲ್ಡನ್ ಬಾಲ್' ಪ್ರಶಸ್ತಿ ಪಡೆದ ರೋಡ್ರಿ ಮುಂದಾಳತ್ವದ ಸ್ಪೇನ್‌ನ ಮಿಡ್ ಫೀಲ್ಡ್ ವಿಭಾಗ ಟೂರ್ನಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದೆ.

*ಯುವ ಆಟಗಾರರ ಮೇಲಿನ ನಂಬಿಕೆ: ಎಲ್ಲ ಪ್ರಮುಖ ತಂಡಗಳು ಸ್ಟಾರ್ ಆಟಗಾರರನ್ನು ನೆಚ್ಚಿಕೊಂಡಿದ್ದರೆ, ಸ್ಪೇನ್ ತಂಡವು ತನ್ನ ಯುವ ಆಟಗಾರರ ಮೇಲೆ ಹೆಚ್ಚಿನ ನಂಬಿಕೆ ಇಟ್ಟಿತ್ತು. ಒಬ್ಬ ಆಟಗಾರನನ್ನು ಅವಲಂಬಿಸದೆ ಒಂದು ತಂಡವಾಗಿ ಆಡಿದ್ದು ಸ್ಪೇನ್‌ನ ಗೆಲುವಿಗೆ ಪ್ರಮುಖ ಕಾರಣ. 19 ವರ್ಷದ ಲಾಮನ್ ಯಮಾಲ್ ಆಕ್ರಮಣಕಾರಿ ಆಟ ಪ್ರದರ್ಶಿಸಿದರೆ, ಅದೇ ವಯಸ್ಸಿನ ಪೌ ಕುಬರ್ಸೀ 'ಅತ್ಯುತ್ತಮ ಯುವ ಆಟಗಾರ ಪ್ರಶಸ್ತಿ' ಮುಡಿಗೇರಿಸಿಕೊಂಡರು. ಫೈನಲ್ ಪಂದ್ಯದಲ್ಲಿ ಹೆಚ್ಚುವರಿ ಸಮಯದಲ್ಲಿ ಬದಲಿ ಆಟಗಾರನಾಗಿ ಕಣಕ್ಕಿಳಿದಿದ್ದ ಫೆರನ್ ಟೊರಿಸ್ 106ನೇ ನಿಮಿಷದಲ್ಲಿ ಗೋಲು ಗಳಿಸಿ ತಂಡಕ್ಕೆ ಜಯ ತಂದುಕೊಟ್ಟರು. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries