HEALTH TIPS

ಕೃತ್ಯ ಸಂಘಟಿಸಲು ಉಗ್ರರ ಹೊಸ ತಂತ್ರ: ಪೋರ್ನ್ ವೇದಿಕೆಗಳಲ್ಲಿ ರಹಸ್ಯ ಸಂದೇಶ ರವಾನೆ

ಶ್ರೀನಗರ / ನವದೆಹಲಿ: ಉಗ್ರ ಸಂಘಟನೆಗಳು ಆನ್‌ಲೈನ್‌ ಗೇಮಿಂಗ್‌ ವೇದಿಕೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದನ್ನು ಇತ್ತೀಚೆಗ‌ಷ್ಟೇ ಬಹಿರಂಗ ಮಾಡಿದ್ದ ಭದ್ರತಾ ಸಂಸ್ಥೆಗಳು, ಇದೀಗ ಸಂಘಟನೆಗಳ ಹಿಂದೆ ಇರುವವರ ಹೊಸ ತಂತ್ರವನ್ನೂ ಬಟಾಬಯಲಾಗಿಸಿವೆ.


ಉಗ್ರರೊಂದಿಗೆ ರಹಸ್ಯವಾಗಿ ಸಂವಹನ ನಡೆಸಲು ನೀಲಿ ಚಿತ್ರಗಳ (ಪೋರ್ನ್‌) ವೆಬ್‌ಸೈಟ್‌ಗಳು, ವಿಶೇಷ ಎನ್‌ಕ್ರಿಪ್ಟೆಡ್‌ ಆಯಪ್‌ಗಳನ್ನು ಬಳಸುತ್ತಿದ್ದಾರೆ ಎಂಬುದಾಗಿ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಭಯೋತ್ಪಾದಕ ಸಂಘಟನೆಗಳು ಮತ್ತು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ, ಜನರು ಸಾಮಾನ್ಯವಾಗಿ ಬಳಸುವ ಸಾಮಾಜಿಕ ಮಾಧ್ಯಮಗಳ ಮೇಲಿನ ಕಣ್ಗಾವಲನ್ನು ತಪ್ಪಿಸಲು ಈ ಮಾರ್ಗ ಅನುಸರಿಸುತ್ತಿವೆ. ಇದರ ಮೂಲಕ ಜಮ್ಮು ಮತ್ತು ಕಾಶ್ಮೀರದಲ್ಲಿ ಹೊಸ ನೇಮಕ ಪ್ರಕ್ರಿಯೆಗೆ ಸೂಚನೆಗಳನ್ನು ರವಾನಿಸುತ್ತಿವೆ ಎಂದಿದ್ದಾರೆ.

ನೀಲಿ ಚಿತ್ರಗಳಿಗೆ ಸಂಬಂಧಿಸಿದ ವೇದಿಕೆಗಳ ಮೂಲಕ, ತಮಗೆ ಹತ್ತಿರದಲ್ಲಿ ಇರುವವರನ್ನು ಹುಡುಕುವ ನೆಪದಲ್ಲಿ ಉಗ್ರರು ರಿಯಲ್ ಟೈಮ್ ಚಾಟ್ ಸೌಲಭ್ಯ ಬಳಸುತ್ತಿದ್ದಾರೆ. ಅವರ (ಉಗ್ರರ) ಹಿಂದೆ ಇರುವವರು ಅದರ ಮೂಲಕವೇ ಸಂದೇಶಗಳನ್ನು ರವಾನಿಸಿ, ಚಟುವಟಿಕೆಗಳನ್ನು ಸಂಘಟಿಸುತ್ತಿದ್ದಾರೆ ಎಂದು ವಿವರಿಸಿದ್ದಾರೆ.

ಭದ್ರತಾ ಸಂಸ್ಥೆಗಳು ಹಲವು ಡಿಜಿಟಲ್ ಸಾಧನಗಳ ಮೇಲೆ ನಿಗಾ ಇಟ್ಟಿವೆ. ಆದಾಗ್ಯೂ, ಉಗ್ರ ಸಂಘಟನೆಗಳ ನಾಯಕರು ಕೋಟೆಕ್ಸ್ ಮತ್ತು ಕೋನಿಯನ್‌ನಂತಹ ಟಾರ್ ಆಧಾರಿತ ಮೆಸೇಜಿಂಗ್ ಆಯಪ್‌ಗಳನ್ನು ಬಳಸಿ, ಎನ್‌ಕ್ರಿಪ್ಟೆಡ್‌ ಜಾಲದ ಮೂಲಕ ಡೇಟಾವನ್ನು ರವಾನಿಸಿ ಬಳಕೆದಾರರ ಗುರುತನ್ನು ಮರೆಮಾಚುತ್ತಿದ್ದಾರೆ ಎನ್ನಲಾಗಿದೆ.

ಕೋನಿಯನ್ ಅಪ್ಲಿಕೇಷನ್‌ನ 'ಎಪಿಕೆ' (ಆಂಡ್ರಾಯ್ಡ್ ಪ್ಯಾಕೇಜ್ ಕಿಟ್) ಫೈಲ್‌ಗೆ ಭಾರತದಲ್ಲಿ ನಿರ್ಬಂಧವಿದೆ. ಎಪಿಕೆ ಫೈಲ್ ಎಂಬುದು ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಮೂಲಕ ಮೊಬೈಲ್ ಆಯಪ್‌ಗಳನ್ನು ಹಂಚಿಕೊಳ್ಳಲು ಮತ್ತು ಇನ್‌ಸ್ಟಾಲ್‌ ಮಾಡಿಕೊಳ್ಳಲು ಬಳಸುವ ಫೈಲ್‌ ಫಾರ್ಮ್ಯಾಟ್‌ ಆಗಿದೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries