HEALTH TIPS

ಬಾಯಿಕಟ್ಟೆ- ಕೋರಿಕ್ಕಾರ್ ಪೆಗ್ಗಕಟ್ಟೆ ರಸ್ತೆ ಶೋಚನೀಯ: ವಾಹನ ಸಂಚಾರ ದುಸ್ತರ

ಉಪ್ಪಳ: ಪೈವಳಿಕೆ ಪಂಚಾಯತಿಯ 21ನೇ ವಾರ್ಡ್ ವ್ಯಾಪ್ತಿಯ ಬಾಯಿಕ್ಕಟ್ಟೆ-ಕೊರಿಕ್ಕಾರ್ ಪೆಗ್ಗಕಟ್ಟೆ ರಸ್ತೆ ಅತ್ಯಂತ ಶೋಚನೀಯಾವಸ್ಥೆಯಲ್ಲಿದೆ. ವಾಹನ ಸಂಚಾರ ಮಾತ್ರವಲ್ಲದೆ ವಿದ್ಯಾರ್ಥಿಗಳ ಸಹಿತ ಸಾರ್ವಜನಿಕರು ಕಾಲ್ನಡಿಗೆಯಲ್ಲಿ ಸಂಚರಿಸಲು ಕೂಡಾ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕಳೆದ ವರ್ಷ ಈ ರಸ್ತೆಯ ಮರು ಡಾಮರೀಕರಣಕ್ಕೆ ಹಣ ಮಂಜೂರು ಮಾಡಲಾಗಿದ್ದರೂ, ಪಂಚಾಯತಿ ಚುನಾವಣೆ ಹಾಗೂ ವಿಧಾನಸಭೆ ಚುನಾವಣೆಯ ಕಾರಣದಿಂದ ಕಾಮಗಾರಿಗೆ ಅಡಚಣೆ ಉಂಟಾಗಿ ಈವರೆಗೂ ಕಾಮಗಾರಿ ಆರಂಭಗೊಂಡಿಲ್ಲ. ಪೈವಳಿಕೆ ಮತ್ತು ಮೀಂಜ ಪಂಚಾಯತಿಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದ್ದು, ಸುಮಾರು 50 ರಷ್ಟು ಮನೆಗಳ ನಿವಾಸಿಗಳು ಈ ರಸ್ತೆಯನ್ನೇ ಅವಲಂಬಿಸಿದ್ದಾರೆ.

ಈ ರಸ್ತೆಗೆ ಮರು ಡಾಮರೀಕರಣಗೊಳಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಬೇಕೆಂದು ಆಗ್ರಹಿಸಿ ಊರವರು ಪಂಚಾಯತಿ ಅಧಿಕಾರಿಗಳಿಗೆ ಮನವಿ ಈಗಾಗಲೇ ನೀಡಿದ್ದು, ಈ ಭಾರಿಯಾದರೂ ರಸ್ತೆ ದುರಸ್ಥಿಗೆ ಕ್ರಮಗೊಳ್ಳಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟಕ್ಕೆ ಮುಂದಾಗುವುದಾಗಿ ಸ್ಥಳೀಯರು ತಿಳಿಸಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries