ಕಾಸರಗೋಡು: ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ "ಶಿಕ್ಷಕ ದಿನಾಚರಣೆ"ಯನ್ನು ಶನಿವಾರ ಆಚರಿಸಲಾಯಿತು. ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಸಂಚಾಲಕಿ ರಾಜಯೋಗಿನಿ ಬ್ರಹ್ಮಕುಮಾರಿ ವಿಜಯಲಕ್ಷ್ಮಿ ಪ್ರಾಸ್ತಾವಿಕವಾಗಿ ಮಾತನಾಡಿ, ಶಿಕ್ಷಕರಿಂದಲೇ ರಾಷ್ಟ್ರ ನಿರ್ಮಾಣದ ಕಾರ್ಯ ಪ್ರಾರಂಭವಾಗುವುದು ಹಾಗೂ ಪರಮ ಶಿಕ್ಷಕ ಜ್ಞಾನಸಾಗರನಾದ ಶಿವ ಪರಮಾತ್ಮನು ಅಜ್ಞಾನದ ಅಂಧಕಾರವನ್ನು ದೂರ ಮಾಡಿ ಜ್ಞಾನದ ಪ್ರಕಾಶವನ್ನು ಕೊಡುವವರು ಆಗಿದ್ದಾರೆ. ದಿನನಿತ್ಯ ರಾಜಯೋಗ ಅಭ್ಯಾಸದಿಂದ ಒತ್ತಡ ಮುಕ್ತರಾಗುತ್ತೇವೆ ಎಂಬ ಸಂದೇಶವನ್ನು ನೀಡಿದರು.
ವೇದಿಕೆಯಲ್ಲಿ ಶಿಕ್ಷಕಿಯರಾದ ರೋಹಿತಾಕ್ಷಿ, ಲೀಲಾ, ರಕ್ಷಿತಾ ಮಲ್ಯ, ಸುಜಾತ ಟೀಚರ್, ಸುನಿತಾ ಡಿಸೋಜಾ, ಬ್ರಹ್ಮಕುಮಾರಿ ಚಂದ್ರಾವತಿ, ಭ್ರಮರಾಂಬಿಕ ಭಾಗವಹಿಸಿದರು.
ಮುಖ್ಯ ಅತಿಥಿಗಳಾದ ಬಿ.ಕೆ. ಡಾ. ವಾಣಿಶ್ರೀ, ಮಾತನಾಡಿ ರಾಜಯೋಗ ಅಭ್ಯಾಸದಿಂದ ಪರಮಾತ್ಮನ ಶಕ್ತಿಯಿಂದ ಆತ್ಮ ವಿಶ್ವಾಸದಿಂದ ಮಾನಸಿಕ ಒತ್ತಡವನ್ನು ಎದುರಿಸುವುದು ಸುಲಭವಾಗುತ್ತದೆ. ಪರಮಾತ್ಮನ ಜ್ಞಾನದ ಬೆಳಕಿನಿಂದ ಮನಸ್ಸು ಸದೃಢವಾಗಿರಲು ಸಾಧ್ಯ ಎಂದು ತಿಳಿಸಿದರು. ಅತಿಥಿಗಳನ್ನು ರಾಜಯೋಗಿನಿ ಬ್ರಹ್ಮಕುಮಾರಿ ಮಂಗಳಾ ಹಾಗೂ ಬ್ರಹ್ಮಕುಮಾರಿ ಪ್ರೇಮಾ ನೆನಪಿನ ಕಾಣಿಕೆ, ಶಾಲು ಹೊದಿಸಿ ಗೌರವಿಸಿದರು.
ಬಿ ಕೆ ಬಿಂದು ಟೀಚರ್ ಇದಾಯತ್ ನಗರ್, ಪ್ರಾರ್ಥನಾ ಗೀತೆ ಹಾಡಿದರು. ಬಿ.ಕೆ. ಶ್ವೇತಾ, ಟೀಚರ್ ಸ್ವಾಗತಿಸಿ, ಸಂಸ್ಥೆಯ ಪರಿಚಯವನ್ನು ಬಿ.ಕೆ. ರೇಷ್ಮಾ ನೀಡಿದರು. ಬಿ.ಕೆ. ಕವಿತಾ ವಂದಿಸಿದರು.

.jpg)
.jpg)
