ಕಾಸರಗೋಡು: ಜಿಲ್ಲಾ ಎನ್‍ಫೆÇೀರ್ಸ್‍ಮೆಂಟ್ ಸ್ಕ್ವಾಡ್ ಚೆಂಗಳ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಸಿದ ತಪಾಸಣೆಯಲ್ಲಿ ಭಾರೀ ಪ್ರಮಾಣದ ನಿಷೇಧಿತ ಪ್ಲಾಸ್ಟಿಕ್ ಪ್ಲೇಟ್, ಗ್ಲಾಸ್‍ಗಳನ್ನು ವಶಪಡಿಸಿಕೊಂಡಿದೆ. ಚೆರ್ಕಳ ರಖಂ ವ್ಯಾಪಾರ ಸಂಸ್ಥೆಯ ಗೋದಾಮಿಗೆ ದಾಳಿ ನಡೆಸಿ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನ ವಶಪಡಿಸಲಾಗಿದ್ದು ಮಾಲಕನಿಗೆ 25,000 ರೂ. ದಂಡ ವಿಧಿಲಾಗಿದೆ. ನಿಷೇಧಿತ ಉತ್ಪನ್ನಗಳ ಉಪಯೋಗ, ಸಂಗ್ರಹ, ಮಾರಾಟ ತಡೆಯುವುದರ ಅಂಗವಾಗಿ ತಪಾಸಣೆ ಮತ್ತಷ್ಟು ಚುರುಕುಗೊಳಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಅನ್ಯರಾಜ್ಯ ಕಾರ್ಮಿಕರು ವಾಸಿಸುವ ಚಟ್ಟಂಚಾಲ್‍ನ ಕ್ವಾರ್ಟರ್ಸ್‍ನಿಂದ ಸಾರ್ವಜನಿಕ ಪ್ರದೇಶಕ್ಕೆ ಮಲಿನ ಜಲ ಹರಿಯಬಿಟ್ಟ ಹಾಗೂ ಅಜೈವಿಕ ತ್ಯಾಜ್ಯಗಳನ್ನು ಹಸಿರು ಕ್ರಿಯಾಸೇನೆಗೆ ಹಸ್ತಾಂತರಿಸದೆ ನಿರ್ಲಕ್ಷ್ಯದಿಂದ ಪರಿಸರದಲ್ಲಿ ರಾಶಿ ಹಾಕಿದ ಹಿನ್ನೆಲೆಯಲ್ಲಿ ಕಟ್ಟಡ ಮಾಲಕಗೆ 15,000 ರೂ. ದಂಡ ಹೇರಲಾಯಿತು. ಪ್ಲಾಸ್ಟಿಕ್ ತ್ಯಾಜ್ಯ ಸಾರ್ವಜನಿಕ ಸ್ಥಳದಲ್ಲಿ ಎಸೆದಿರುವ ಹಿನ್ನೆಲೆಯಲ್ಲಿ ಪೆÇಯಿನಾಚಿಯ ಸೂಪರ್ ಮಾರ್ಕೆಟ್ ಮಾಲಿಕನಿಂದ 5,000 ರೂ. ದಂಡ ವಸೂಲು ಮಾಡಲಾಗಿದೆ. ಅದೇ ರೀತಿ ಮುಳಿಯಾರು ಸರ್ಕಾರಿ ಯುಪಿ ಶಾಲಾ ಅಧಿಕಾರಿಗಳಿಗೂ ಪ್ಲಾಸ್ಟಿಕ್ ಒಳಗೊಂಡ ತ್ಯಾಜ್ಯ ಉರಿಸಿದ ಹಿನ್ನೆಲೆಯಲ್ಲಿ ದಂಡ ವಿಧಿಸಲಾಗಿದೆ.
ಕಾರ್ಯಾಚಣೆಯಲ್ಲಿ ಕೆ.ವಿ. ಮುಹಮ್ಮದ್ ಮದನಿ, ಜೋಸ್ ವಿ.ಎಂ, ಹೆಲ್ತ್ ಇನ್ಸ್‍ಪೆಕ್ಟರ್‍ಗಳಾದ ಅಶ್ವತಿ ಸಿ. ನಾಯರ್, ರಶ್ಮಿ ಕೆ, ಸಜಿತಾ ಎಂ, ಲತಾ ಪಿ. ಭಾಗವಹಿಸಿದ್ದರು.

