ಮುಳ್ಳೇರಿಯ: ಗೇರುಬೀಜ ಸಂಗ್ರಹಿಸಲು ತೆರಳಿದ್ದ ವೃದ್ಧರೊಬ್ಬರು ಗೇರು ತೋಟದಲ್ಲಿ ಬಿದ್ದು ಮೃತಪಟ್ಟಿದ್ದು, ಸೂರ್ಯಾಘಾತದಿಂದ ಸಾವು ಸಂಭವಿಸಿರಬೇಕೆಂದು ಸಂಶಯಿಸಲಾಗಿದೆ. ಕಣ್ಣೂರು ಜಿಲ್ಲೆಯ ಉದಯಗಿರಿ ಆಲಕ್ಕೋಡ್ ನಿವಾಸಿ ಹಾಗೂ ಕಾರಡ್ಕ ಪಂಚಾಯಿತಿಯ ನೆಚ್ಚಿಪ್ಪಡ್ಪು ನೀರೋಳಿಪಾರದಲ್ಲಿ ವಾಸವಾಗಿರುವ ಎ.ಡಿ. ದೇವಸ್ಯ (72)ಮೃತಪಟ್ಟವರು. ಗುರುವಾರ ಮಧ್ಯಾಹ್ 3ಕ್ಕೆ ಮನೆಯಿಂದ ಗೇರುತೋಟಕ್ಕೆ ತೆರಳಿದ್ದ ದೇವಸ್ಯ ಬಹಳ ಹೊತ್ತಿನ ವರೆಗೂ ವಾಪಸಾಗಿರಲಿಲ್ಲ. ಸಂಜೆ ವೇಳೆಗೆ ಈ ಹಾದಿಯಾಗಿ ಸಂಚರಿಸಿದವರು ದೇವಸ್ಯ ಅವರನ್ನು ಅಸೌಖ್ಯದಿಂದ ಬಿದ್ದಿರುವುದನ್ನು ಕಂಡು ನೀಡಿದ ಮಾಹಿತಿಯನ್ವಯ ಇವರನ್ನು ತಕ್ಷಣ ಆಸ್ಪತ್ರೆಗೆ ತಲುಪಿಸಿದರೂ ಪ್ರಯೋಜನವಾಗಿರಲಿಲ್ಲ. ಆದೂರು ಠಾಣೆ ಪೆÇಲೀಸರು ಅಸಹಜ ಸಾವಿಗೆ ಸಂಬಂಧಿಸಿ ಕೇಸು ದಾಖಲಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕ ಮಾತ್ರವೇ ಸಾವಿಗೆ ಕಾರಣವೇನೆಂದು ದೃಢೀಕರಿಸಲು ಸಾಧ್ಯವೆಂದು ಪೆÇಲೀಸರು ತಿಳಿಸಿದ್ದಾರೆ.

