ಬದಿಯಡ್ಕ: ನೀರ್ಚಾಲು ಸಾಯಿಮಂದಿರ ಮುಗುರಸ್ತೆ ಹಾಗೂ ಉರ್ಲಿತ್ತಡ್ಕ ಬೇಳ ರಸ್ತೆಯು ತೀರಾ ಶೋಚನೀಯಾವಸ್ಥೆಯಲಿದೆ ಎಂದು ನಾಗರಿಕರು ದೂರುತ್ತಿದ್ದಾರೆ. 20 ವರ್ಷಗಳ ಹಿಂದೆ ಲೋಕೋಪಯೋಗಿ ಇಲಾಖೆಯು ಈ ರಸ್ತೆಯನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿತ್ತು. ಆದರೆ ಯಾವುದೇ ಅಭಿವೃದ್ಧಿಕಾರ್ಯವನ್ನು ನಡೆಸದಿರುವುದರಿಂದ ರಸ್ತೆಯು ಸಂಚಾರಕ್ಕೆ ಅಯೋಗ್ಯವಾಗಿದೆ.
ಇತ್ತೀಚೆಗೆ ಕೇರಳ ಜಲಪ್ರಾಧಿಕಾರವು ರಸ್ತೆಯ ಎರಡೂ ಬದಿಗಳಲ್ಲಿ ಫೈಪ್ ಅಳವಡಿಸಲು ಹೊಂಡಗಳನ್ನು ತೋಡಿ ಅದನ್ನು ಸಮರ್ಪಕವಾದ ರೀತಿಯಲ್ಲಿ ಮುಚ್ಚದಿರುವುದು ವಾಹನ ಸಂಚಾರಕ್ಕೆ ಕಷ್ಟಕರವಾಗಿದೆ. ಸವಾರರು ಸ್ವಲ್ಪವೇ ಎಚ್ಚರ ತಪ್ಪಿದರೂ ಅಪಾಯಕಾರಿ ಅವಘಡಗಳಿಗೆ ಕಾರಣವಾಗುತ್ತದೆ. ಇನ್ನು ಮಳೆಗಾಲ ಪ್ರಾರಂಭವಾದಲ್ಲಿ ಈ ರಸ್ತೆ ಸಂಚಾರ ದುಸ್ತರವಾಗಲಿದೆ.
20 ವರ್ಷಗಳಿಂದ ರಸ್ತೆಯ ಯಾವುದೇ ಗುಂಡಿ ಮುಚ್ಚುವ ಕೆಲಸ ಅಥವಾ ದುರಸ್ತಿ ಕಾರ್ಯ ಇದುವರೆಗೆ ನಡೆದಿಲ್ಲ. ಈ ಬಗ್ಗೆ ಈಗಾಗಲೇ ಮಾಧ್ಯಮಗಳಲ್ಲಿ ವರದಿಗಳು ಪ್ರಕಟಗೊಂಡಿದ್ದರೂ ಇಲಾಖೆಯು ಮೌನವಹಿಸುತ್ತಿದೆ. ಲೋಕೋಪಯೋಗಿ ಇಲಾಖೆಯು ಎರಡು ತಿಂಗಳ ಹಿಂದೆಯೇ ಹಣ ಮಂಜೂರಾಗಿದೆ ಮತ್ತು ಟೆಂಡರ್ ಪ್ರಕ್ರಿಯೆ ಮುಗಿದಿದೆ ಎಂದು ಮಾಹಿತಿಯನ್ನು ನೀಡಿದ್ದರೂ, ಇದುವರೆಗೆ ಯಾವುದೇ ಕಾಮಗಾರಿ ನಡೆದಿಲ್ಲ. ರಸ್ತೆ ದುರಸ್ತಿಗೆ ತಕ್ಷಣ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ಗ್ರಾಮಸ್ಥರು ಮತ್ತು ವಾಹನ ಮಾಲೀಕರು ಲೋಕೋಪಯೋಗಿ ಇಲಾಖೆಯ ಕಚೇರಿ ಮುಂದೆ ಅಧಿಕಾರಿಗಳ ಅಸಡ್ಡೆಯ ಕಾರ್ಯವೈಖರಿಯ ವಿರುದ್ಧ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

.jpg)
.jpg)
