ಬದಿಯಡ್ಕ: ಕುರುಮುಜ್ಜಿಕಟ್ಟೆ ಶ್ರೀ ಧರ್ಮಶಾಸ್ತಾ ಭಜನ ಮಂದಿರದಲ್ಲಿ ಲೋಕ ಕಲ್ಯಾಣಾರ್ಥವಾಗಿ ಶ್ರೀಮದ್ ಭಾಗವತ ಸಪ್ತಾಹ ಪುಣ್ಯ ಕಾರ್ಯಕ್ರಮ ಜರಗುತ್ತಿದ್ದು ಪಂಚಮ ದಿನ ಮಂಗಳವಾರ ಶ್ರೀಕೃಷ್ಣಲೀಲೆ, ಕಾಳೀಯ ಮರ್ಧನ, ಕಾತ್ರ್ಯಾಯಿನೀ ಪೂಜೆ, ಗೋವರ್ಧನೋದ್ಧಾರ, ರಾಸಲೀಲೆ, ಕಂಸವಧೆ, ಉದ್ಧವ ದೌತ್ಯ, ರುಕ್ಮಿಣೀ ಸ್ವಯಂವರ ಜರಗಿತು. ರುಕ್ಮಿಣೀ ಸ್ವಯಂವರದ ಭಾಗವಾಗಿ ಮವ್ವಾರು ಶ್ರೀಕೃಷ್ಣ ಭಜನ ಮಂದಿರದಿಂದ ಆಗಮಿಸಿದ ವೈಭವದ ದಿಬ್ಬಣ ಮೆರವಣಿಗೆ ಆಕರ್ಷಣೀಯವಾಗಿತ್ತು. ನೂರಾರು ಭಗವ್ಭಕ್ತರು ಪಾಲ್ಗೊಂಡಿದ್ದರು.
ಬುಧವಾರ ಬೆಳಗ್ಗೆ ಗಣಪತಿ ಹೋಮ, ಬೆಳ್ತಮ್ಮ ಪಾವೂರುಮೂಲೆ ಅವರಿಂದ ದೀಪಪ್ರಜ್ವಲನೆ, ಸಾಮೂಹಿಕ ಶ್ರೀ ವಿಷ್ಣುಸಹಸ್ರನಾಮ ಪಾರಾಯಣ, ಶ್ರೀಮದ್ ಭಾಗವತ ಪಾರಾಯಣ ಪ್ರವಚನ ನಡೆಯಿತು. ಸ್ಯಮಂತಕೋಪಾಖ್ಯಾನ, ಬಾಣಯುದ್ಧ, ರಾಜಸೂಯ, ಕುಚೇಲ ಚರಿತೆ, ಸಂತಾನಗೋಪಾಲ, ಭಾಗವತ ಧರ್ಮಕಥಾನಕ, ಉದ್ಭವೋಪದೇಶ ಕಥಾಭಾಗದಲ್ಲಿ ಭಾಗವತಾಚಾರ್ಯ ಬ್ರಹ್ಮಶ್ರೀ ಶಂಕರನ್ ನಂಬೂದಿರಿ ಚೇದಮಂಗಲಂ ಪಯ್ಯನ್ನೂರು ಹಾಗೂ ತಂಡದವರು ಪಾರಾಯಣ ಪ್ರವಚನ ನಡೆಸಿಕೊಟ್ಟರು.

.jpg)
.jpg)
