HEALTH TIPS

ವಿದ್ಯಾಭ್ಯಾಸ ಹಕ್ಕು ಖಚಿತಪಡಿಸಲು ದಿವ್ಯಾಂಗ ಮಕ್ಕಳ ಸಮೀಕ್ಷೆ ಆರಂಭ

ಮಂಜೇಶ್ವರ: ದಿವ್ಯಾಂಗ ಮಕ್ಕಳ ಶಿಕ್ಷಣವನ್ನು ಖಚಿತಪಡಿಸುವ ಉದ್ದೇಶದಿಂದ ಸಮಗ್ರ ಶಿಕ್ಷಣ ಕಾಸರಗೋಡು ಮಂಜೇಶ್ವರ ಬಿ.ಆರ್.ಸಿ ನೇತೃತ್ವದಲ್ಲಿ ಮಂಜೇಶ್ವರ ಉಪಜಿಲ್ಲೆಯ ಅಂಗನವಾಡಿಗಳನ್ನು ಕೇಂದ್ರವಾಗಿಸಿ ಸಮೀಕ್ಷೆ ಆರಂಭಿಸಲಾಗಿದೆ. 


ದಿವ್ಯಾಂಗ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಖಚಿತಪಡಿಸುವುದರ ಜೊತೆಗೆ, ಅವರನ್ನು ಸಮಾಜದ ಮುಂಚೂಣಿಗೆ ತರಲು ಸಿದ್ಧಗೊಳಿಸುವುದೇ ಈ ಸಮೀಕ್ಷೆಯ ಮುಖ್ಯ ಉದ್ದೇಶವಾಗಿದೆ. ಮಂಜೇಶ್ವರ ಬಿ.ಆರ್.ಸಿ ಅಡಿಯಲ್ಲಿ 178 ಅಂಗನವಾಡಿಗಳನ್ನು ಕೇಂದ್ರವಾಗಿಸಿಕೊಂಡು ನಡೆಯುತ್ತಿರುವ ಈ ಸಮೀಕ್ಷೆಯ ಉದ್ಘಾಟನೆ ಗುರುವಾರ ಉಪ್ಪಳ ಟೌನ್ ಅಂಗನವಾಡಿಯಲ್ಲಿ ನಡೆಯಿತು. ಮಂಜೇಶ್ವರ ಎ.ಇ.ಒ ಜಾರ್ಜ್ ಕ್ರಾಸ್ಟ್ ಉದ್ಘಾಟಿಸಿದರು. ಮಂಜೇಶ್ವರ ಬಿ.ಆರ್.ಸಿ.ಯ ಬಿ.ಪಿ.ಸಿ ರಾಜಗೋಪಾಲನ್ ಅಧ್ಯಕ್ಷತೆ ವಹಿಸಿದ್ದರು. ಮುಳಿಂಜ ಜಿ.ಎಲ್.ಪಿ.ಶಾಲೆಯ ಮುಖ್ಯ ಶಿಕ್ಷಕಿ ಚಿತ್ರಾವತಿ ಚಿಗುರುಪಾದೆ, ಬಿ.ಆರ್.ಸಿ ತರಬೇತುದಾರೆ ಸುಮಯ್ಯ, ವಿಶೇಷ ಶಿಕ್ಷಕರು ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಬಿ.ಆರ್.ಸಿ.ಯ ವಿಶೇಷ ಹಾಗೂ ತಜ್ಞ ಶಿಕ್ಷಕರಾದ ಬಿಂದ್ಯ ಎನ್, ರೀಮ ಜೆಸಿಂತ ಮೊಂತೆರೊ, ಅನಿತ ವೇಗಸ್, ಅನುಶ್ರೀ ಕೆ.ವಿ, ಭವ್ಯ ಬಿ.ಎಸ್, ಸರಿತ ಹಾಗೂ ಸಿ.ಆರ್.ಸಿ ಸಂಯೋಜಕರು ಸೇರಿ ಈ ಸಮೀಕ್ಷೆಯನ್ನು ಪೂರ್ಣಗೊಳಿಸಲಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries