ಕಾಸರಗೋಡು: ಕಾಞಂಗಾಡ್ ಐಂಗೋತ್ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ತಪಾಸಣೆ ವೇಳೆ ಕಾರು ಡಿಕ್ಕಿಯಾಗಿ, ಇಬ್ಬರು ಪೊಲೀಸರು ಗಂಭೀರ ಗಾಯಗೊಂಡಿದ್ದಾರೆ. ಸಿವಿಲ್ ಪೆÇಲೀಸ್ ಅಧಿಕಾರಿಗಳಾದ ವಲಿಯಪರಂಬ ನಿವಾಸಿ ಸೂರಜ್ (32) ಮತ್ತು ಕುನ್ನುಂಕಾಯಿ ನಿವಾಸಿ ಅಲೋಶಿಯಸ್ (39) ಅಪಘಾತದಲ್ಲಿ ಗಾಯಗೊಂಡಿದ್ದು, ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿಯಂತ್ರಣ ತಪ್ಪಿದ ಕಾರು ಇಬ್ಬರು ಪೆÇಲೀಸರನ್ನು ಡಿಕ್ಕಿ ಹೊಡೆದು ನಂತರ ಪೆÇಲೀಸ್ ವಾಹನಕ್ಕೆ ಡಿಕ್ಕಿ ಹೊಡೆದು ನಿಂತಿದೆ.
ಗಂಭೀರ ಗಾಐಗಳುಂಟಾಘಿರುವ ಹಿನ್ನೆಲೆಯಲ್ಲಿ ಒಬ್ಬ ಪೊಲೀಸ್ ಅಧಿಕಾರಿಯ ಕಾಳು ಹಾಗೂ ಇನ್ನೊಬ್ಬರ ಪಾದವನ್ನು ಕತ್ತರಿಸಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇವರಲ್ಲಿ ಸೂರಜ್ ಪೆÇಲೀಸ್ ಕ್ಲಬ್ನ ಮಾಜಿ ಫುಟ್ಬಾಲ್ ಆಟಗಾರನಾಗಿದ್ದಾರೆ. ಗೃಹ ಸಚಿವ ರಮೇಶ್ ಚೆನ್ನಿತ್ತಲ ಅವರು ಇಬ್ಬರೂ ಪೆÇಲೀಸರಿಗೆ ಅಗತ್ಯ ಚಿಕಿತ್ಸಾ ಸಹಾಯ ಒದಗಿಸುವಂತೆ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗೆ ನಿರ್ದೇಶ ನೀಡಿದ್ದಾರೆ.

