HEALTH TIPS

ಫೇಸ್ ಬುಕ್ ಮುಖ್ಯಸ್ಥ ಮಾರ್ಕ್‌ ಜುಕರ್‌ ಬರ್ಗ್‌ 'ವಾಂಟೆಡ್‌ ಕ್ರಿಮಿನಲ್‌'..? ಹಿಡಿದುಕೊಟ್ಟರೆ 22 ಕೋಟಿ ರೂ.!

         ಬೊಗೋಟಾಫೇಸ್ ಬುಕ್ ಮುಖ್ಯಸ್ಥ ಮಾರ್ಕ್‌ ಜುಕರ್‌ ಬರ್ಗ್‌ 'ವಾಂಟೆಡ್‌ ಕ್ರಿಮಿನಲ್‌' ಅಂತೆ.. ಅವರನ್ನು ಹಿಡಿದುಕೊಟ್ಟರೆ 22 ಕೋಟಿ ಬಹುಮಾನ ನೀಡುತ್ತಾರೆ ಎನ್ನಲಾಗಿದೆ.

        ಜಗತ್ತಿನಲ್ಲಿ ಪ್ರತಿಯೊಬ್ಬ ವ್ಯಕ್ತಿಯನ್ನು ಹೋಲುವ ಏಳು ಮಂದಿ ಇರುತ್ತಾರೆ ಎಂಬ ಮಾತಿದೆ. ಇದು ಎಷ್ಟು ಸತ್ಯವೋ... ಸುಳ್ಳೋ ಗೊತ್ತಿಲ್ಲ. ಆದರೆ ವ್ಯಕ್ತಿಗಳನ್ನು ಹೋಲುವ ಹಲವು ಮಂದಿ ಅಲ್ಲಲ್ಲಿ ಮುಖಾಮುಖಿಯಾಗುತ್ತಾರೆ. ಅವರು ಒಳ್ಳೆಯವರಾಗಿದ್ದರೆ ಪರವಾಗಿಲ್ಲ.. ಆದರೆ ಅಪರಾಧಿಗಳು ಹಾಗೂ ಪೊಲೀಸ್‌ ಹಿಟ್ ಲಿಸ್ಟ್‌ನಲ್ಲಿರುವುವರಾದರೆ ಸಮಸ್ಯೆ ಖಂಡಿತ.

          ಈಗ ಫೇಸ್‌ಬುಕ್ ಸಂಸ್ಥಾಪಕ ಹಾಗೂ ಅಮೆರಿಕಾ ಮಾಧ್ಯಮ ಉದ್ಯಮಿ ಮಾರ್ಕ್ ಜುಕರ್‌ಬರ್ಗ್ ಅವರಿಗೆ ಇದೇ ರೀತಿಯ ಪರಿಸ್ಥಿತಿ ಎದುರಾಗಿದೆ. ಥೇಟ್‌ ಅವರ ಹೋಲಿಕೆ ಇರುವ ಅಪರಾಧಿಯೊಬ್ಬನಿಗಾಗಿ ಕೊಲಂಬಿಯಾದ ಪೊಲೀಸರು ಗಾಳ ಬೀಸುತ್ತಿದ್ದಾರೆ. ಆತನನ್ನು ಸೆರೆ ಹಿಡಿದು ಕೊಟ್ಟರೆ 3 ಮಿಲಿಯನ್ ಡಾಲರ್‌ (ರೂ. 22,30,23,000) ಬಹುಮಾನ ನೀಡಲಾಗುವುದು ಎಂದು ಪ್ರಕಟಿಸಿದ್ದಾರೆ.


          ಮತ್ತೊಂದು ಆಶ್ಚರ್ಯವೆಂದರೆ ಈ ಜಾಹಿರಾತನ್ನು ಮಾರ್ಕ್ ಜುಕರ್ ಬರ್ಗ್ ಅವರ ಒಡೆತನದ  ಫೇಸ್‌ಬುಕ್‌ ಸಾಮಾಜಿಕ ಜಾಲತಾಣದಲ್ಲೇ ನೀಡಲಾಗಿದ್ದು, ಈ ಪೋಸ್ಟ್ ಇದೀಗ ಹೆಚ್ಚು ವೈರಲ್‌ ಆಗುತ್ತಿದೆ.

ಏನಿದು ಪ್ರಕರಣ?
            ಕಳೆದ ವಾರ, ಕೊಲಂಬಿಯಾದ ಅಧ್ಯಕ್ಷ ಇವಾನ್ ಡ್ಯೂಕ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಮೇಲೆ ಕೆಲವು ಹಂತಕರು ದಾಳಿ ನಡೆಸಿ, ಗುಂಡಿನ ಮಳೆ ಹರಿಸಿದ್ದರು. ಹೆಲಿಕಾಪ್ಟರ್ ನಲ್ಲಿ ಕೊಲಂಬಿಯಾದ ಅಧ್ಯಕ್ಷ ಡ್ಯೂಕ್ ಅವರೊಂದಿಗೆ ರಕ್ಷಣಾ ಸಚಿವ ಡಿಯಾಗೋ ಮೊಲಾನೊ, ಆಂತರಿಕ ಸಚಿವ ಡೇನಿಯಲ್ ಪಲಾಸಿಯೊಸ್, ನಾರ್ಟೆ ಡಿ ಸ್ಯಾಂಟ್ಯಾಂಡರ್ ಸಿಲ್ವಾನೋ ಸೆರಾನೊ ಸೇರಿದಂತೆ ಹಲವು ಅಧಿಕಾರಿಗಳಿದ್ದರು. ಅದೃಷ್ಟವಷಾತ್‌ ಯಾರಿಗೂ ಯಾವುದೇ ಅಪಾಯವಾಗಿರಲಿಲ್ಲ. ಈ ಘಟನೆಯ ತನಿಖೆ ಭಾಗವಾಗಿ ಕೊಲಂಬಿಯಾ ಪೊಲೀಸರು ಆರೋಪಿಗಳ ರೇಖಾಚಿತ್ರ ರಚಿಸಿದ್ದಾರೆ. ಅವರಲ್ಲಿ ಒಬ್ಬ ವ್ಯಕ್ತಿ ಥೇಟ್‌ ಫೇಸ್‌ಬುಕ್‌ನ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್‌ ನಂತೆ ಇದ್ದಾನೆ ಎಂದು ಹೇಳಲಾಗಿದೆ.

          ಕೊಲಂಬಿಯಾದ ಪೊಲೀಸರು ಆರೋಪಿಗಳ ರೇಖಾ ಚಿತ್ರಗಳನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡು "ಈ ಫೋಟೋದಲ್ಲಿರುವವರ ಹಿಡಿಯಲು ನಮಗೆ ಸಹಾಯ ಮಾಡಿ. ಅಧ್ಯಕ್ಷ ಇವಾನ್ ಡ್ಯೂಕ್, ಅವರ ಪರಿವಾರ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಮೇಲೆ ದಾಳಿ ಮಾಡಿದ ಅಪರಾಧಿಗಳ ಚಿತ್ರಗಳು ಇವು. ಅವರ ಸೆರೆಹಿಡಿದುಕೊಟ್ಟವರಿಗೆ 3 ಮಿಲಿಯನ್ ಡಾಲರ್‌ ಬಹುಮಾನ ನೀಡಲಾಗುವುದು. ಇವರ ಬಗ್ಗೆ ಯಾವುದೇ ಮಾಹಿತಿ ಹೊಂದಿರುವವರು ಸಂಖ್ಯೆ 3213945367 ಅಥವಾ 3143587212 ಗೆ ಕರೆ ಮಾಡಿ ಎಂದು ಸಂದೇಶ ರವಾನಿಸಿದ್ದಾರೆ. ಈ ಫೋಟೋದಲ್ಲಿರುವ ಒಬ್ಬ ವ್ಯಕ್ತಿ ಥೇಟ್‌ ಮಾರ್ಕ್ ಮಾರ್ಕ್ ಜುಕರ್‌ಬರ್ಗ್ ರಂತೆ ಇರುವುದರಿಂದ ಎಲ್ಲರ ಗಮನ ಸೆಳೆದಿದೆ. ಇದನ್ನು ನೋಡಿದ ನೆಟಿಜನ್‌ಗಳು ವಿವಿಧ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries