ಸ್ವಾತಂತ್ರ್ಯ ಸಂಭ್ರಮಕ್ಕೆ ಉಗ್ರರ ಕರಿನೆರಳು: ಇಂಟೆಲಿಜೆನ್ಸ್​ ಬ್ಯೂರೋದಿಂದ ದೆಹಲಿ ಪೊಲೀಸರಿಗೆ ಎಚ್ಚರಿಕೆ ಸಂದೇಶ

 

         ನವದೆಹಲಿ: ಇಡೀ ದೇಶದ ಜನರು ಆಗಸ್ಟ್​ 15ರಂದು ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವ ಆಚರಣೆ ಮಾಡಲು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ. ಇದರ ನಡುವೆ ದೇಶದ ಜನತೆಗೆ ಎಚ್ಚರಿಕೆ ಕರೆಗಂಟೆಯೊಂದು ಬಂದಿದೆ.

               ಸ್ವಾತಂತ್ರ್ಯ ದಿನದಂದು ಲಷ್ಕರ್​ ಎ ತೊಯ್ಬಾ (ಎಲ್​ಇಟಿ), ಜೈಷ್​ ಇ ಮೊಹಮ್ಮದ್​ (ಜೆಇಎಂ) ಮತ್ತು ಇತರೆ ಉಗ್ರ ಸಂಘಟನೆಗಳ ಭಯೋತ್ಪಾದಕರು ದೇಶವನ್ನು ಗುರಿಯಾಗಿಸಿಕೊಂಡು ದಾಳಿ ಮಾಡುವ ಸಾಧ್ಯತೆ ಇದೆ ಎಂದು ಇಂಟೆಲಿಜೆನ್ಸ್​ ಬ್ಯೂರೋ (ಐಬಿ) ದೆಹಲಿ ಪೊಲೀಸರಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ.

                  ಕೇಂದ್ರ ಸರ್ಕಾರಕ್ಕೆ 10 ಪುಟಗಳ ವರದಿ ಸಲ್ಲಿಸಿರುವ ಐಬಿ, ಎಲ್​ಇಟಿ, ಜೆಇಎಂ ಮತ್ತು ಇತರೆ ಭಯೋತ್ಪಾದಕ ಸಂಘಟನೆಗಳಿಂದ ಬೆದರಿಕೆ ಇದೆ. ಆಗಸ್ಟ್​ 15ರಂದು ದೆಹಲಿಯ ಕೆಂಪುಕೋಟೆಯ ಪ್ರವೇಶಕ್ಕೆ ಕಠಿಣ ನಿಯಮಗಳನ್ನು ಜಾರಿಗೆ ತರುವಂತೆ ದೆಹಲಿ ಪೊಲೀಸರಿಗೆ ಐಬಿ ನಿರ್ದೇಶಿಸಿದೆ.

                  ಐಬಿ ವರದಿಯಲ್ಲಿ ಜಪಾನ್‌ನ ಮಾಜಿ ಪ್ರಧಾನಿ ಶಿಂಜೋ ಅಬೆ ಮೇಲಿನ ದಾಳಿ ಮತ್ತು ಉದಯಪುರ ಮತ್ತು ಅಮರಾವತಿಯಲ್ಲಿ ನಡೆದ ಘಟನೆಗಳನ್ನು ಉಲ್ಲೇಖಿಸಲಾಗಿದೆ.

                 ವರದಿಯ ಪ್ರಕಾರ, ಪಾಕ್​ ಗುಪ್ತಚರ ಸಂಸ್ಥೆ ಐಎಸ್‌ಐ, ಜೈಷ್​ ಮತ್ತು ಲಷ್ಕರ್ ಭಯೋತ್ಪಾದಕರಿಗೆ ಲಾಜಿಸ್ಟಿಕ್ಸ್ ಬೆಂಬಲ ನೀಡುವ ಮೂಲಕ ಭಯೋತ್ಪಾದಕ ದಾಳಿಗಳನ್ನು ಪ್ರಚೋದಿಸುತ್ತಿದೆ. ದೊಡ್ಡ ನಾಯಕರು ಮತ್ತು ಪ್ರಮುಖ ಸ್ಥಳಗಳನ್ನು ಗುರಿಯಾಗಿಸಲು ಜೆಎಂ ಮತ್ತು ಎಲ್‌ಇಟಿಗೆ ಸೂಚನೆ ನೀಡಲಾಗುತ್ತಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


grama rajya

Qries