HEALTH TIPS

'ಸಾಫ್ಟ್​ವೇರ್ ಹುಡುಗ ಬೇಡ' ಎಂದು ಮದ್ವೆ ಜಾಹೀರಾತು; ಐಟಿ ಇಂಡಸ್ಟ್ರಿಗೆ ಭವಿಷ್ಯ ಇಲ್ವಾ?

 

             ಬೆಂಗಳೂರು: ವಧು-ವರರ ಜಾಹೀರಾತು ಅಂಕಣ ಆಗಾಗ ಗಮನ ಸೆಳೆಯುತ್ತಿರುತ್ತದೆ. ಅದರಲ್ಲೂ ಒಮ್ಮೊಮ್ಮೆ ವಿಚಿತ್ರ ಬೇಡಿಕೆಗಳಿಂದಾಗಿ ಜಾಹೀರಾತು ಕೊಟ್ಟವರಿಗೆ ವಧು ಅಥವಾ ವರ ಸಿಕ್ಕಿರುತ್ತಾರೋ ಇಲ್ಲವೋ, ಆ ಬೇಡಿಕೆಗಳಿಂದಾಗಿಯೇ ಅಂಥ ಜಾಹೀರಾತುಗಳು ವೈರಲ್​ ಅಂತೂ ಆಗಿರುತ್ತವೆ.

                 ಅಂಥದ್ದೇ ಒಂದು ಮ್ಯಾಟ್ರಿಮೋನಿಯಲ್ ಜಾಹೀರಾತು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಮಾತ್ರವಲ್ಲ, 'ಸಾಫ್ಟ್​ವೇರ್ ಇಂಡಸ್ಟ್ರಿಗೆ ಭವಿಷ್ಯ ಇಲ್ಲವೇ?' ಎಂಬ ಪ್ರಶ್ನೆಯನ್ನೂ ಕೆಲವರ ಮನಸಲ್ಲಿ ಮೂಡಿಸಿದೆ.


                ಶ್ರೀಮಂತರ ಮನೆಯ ಎಂಬಿಎ ಪದವೀಧರೆಯೊಬ್ಬಳ ಮದುವೆಗಾಗಿ ಮ್ಯಾಟ್ರಿಮೋನಿಯಲ್​ನಲ್ಲಿ ಜಾಹೀರಾತು ಪ್ರಕಟವಾಗಿದ್ದು, ಆಕೆಗೆ ಸ್ವಜಾತಿಯ ಐಎಎಸ್​/ಐಪಿಎಸ್, ಪಿಜಿ ಡಾಕ್ಟರ್ ಅಥವಾ ಉದ್ಯಮಿ ಆಗಿರುವ ವರ ಬೇಕು ಎಂಬುದಾಗಿ ಬೇಡಿಕೆ ಇಡಲಾಗಿದೆ. ಅಲ್ಲದೆ 'ದಯವಿಟ್ಟು ಸಾಫ್ಟ್​ವೇರ್ ಇಂಜಿನಿಯರ್ ಕರೆ ಮಾಡಬೇಡಿ' ಎಂಬುದಾಗಿಯೂ ಈ ಜಾಹೀರಾತಲ್ಲಿ ಉಲ್ಲೇಖಿಸುವ ಮೂಲಕ, ಐಟಿ ಕ್ಷೇತ್ರದಲ್ಲಿರುವ ವರ ಬೇಡ ಎಂದು ಹೇಳಲಾಗಿದೆ.

            ಈ ಜಾಹೀರಾತಿನ ತುಣುಕು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಒಬ್ಬರು ಇದನ್ನು ಟ್ವಿಟರ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಮಾತ್ರವಲ್ಲ, ಐಟಿ ಕ್ಷೇತ್ರದ ಭವಿಷ್ಯ ಚೆನ್ನಾಗಿದ್ದಂತಿಲ್ಲ ಎಂಬುದಾಗಿಯೂ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

Future of IT does not look so sound.
Image

             

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


Qries