HEALTH TIPS

ಪಾಪ್ಯುಲರ್ ಫ್ರಂಟ್ ಗೆ ಪಿಣರಾಯಿ ಸರ್ಕಾರದ ಬೆಂಬಲ-ಬಿಜೆಪಿ


               ಕಾಸರಗೋಡು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯ(ಪಿಎಫ್‍ಐ) ಗುರುವಾರ ನಡೆಸಿದ ಹರತಾಳಕ್ಕೆ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರದ ಸಂಪೂರ್ಣ ಬೆಂಬಲ ಲಭಿಸಿದ್ದರೂ, ಕೇರಳದ ಜನತೆ ಹರತಾಳವನ್ನು ವಿಫಲಗೊಳಿಸಿರುವುದಾಗಿ ಬಿಜೆಪಿ ರಾಜ್ಯ ಕಾರ್ಯದರ್ಶಿ, ವಕೀಲ ಕೆ ಶ್ರೀಕಾಂತ್ ತಿಳಿಸಿದ್ದಾರೆ.
          ಹೈಕೋರ್ಟ್ ಆದೇಶ ಉಲ್ಲಂಘಿಸಿ ಹರತಾಳಕ್ಕೆ ಕರೆ ನೀಡಿದಾಗ ಅದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದ್ದ ರಾಜ್ಯ ಸರ್ಕಾರ ಹಾಗೂ ಪೆÇಲೀಸರು ಹರತಾಳಕ್ಕೆ ಮೌನ ಸಮ್ಮತಿ ನೀಡಿದ್ದರು. ಕಾನೂನುಬಾಹಿರವಾಗಿ ಹರತಾಳ ಹಮ್ಮಿಕೊಳ್ಳಲಾಗಿದ್ದು, ಈ ಸಂಘಟನೆ ಬೆಂಬಲಿಗರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬದಲು ಹಲವೆಡೆ ಜನರನ್ನು ಸಂಕಷ್ಟಕ್ಕೆ ತಳ್ಳುವ ಸನ್ನಿವೇಶವನ್ನು ಎಡರಂಗ ಸರ್ಕಾರ ಸೃಷ್ಟಿಸಿದೆ. ಕೆಲವೆಡೆ ಹರತಾಳ ಬೆಂಬಲಿಗರ ಹಿಂಸಾಚಾರವನ್ನು ಪೊಲೀಸರು ಕೈಕಟ್ಟಿ ನೋಡುವ ಸ್ಥಿತಿ ನಿರ್ಮಾಣವಾಗಿತ್ತು.ಕೆಲವೆಡೆ  ದಾಂಧಲೆ ನಡೆಸುತ್ತಿದ್ದ ಹರತಾಳ ಬೆಂಬಲಿಗರನ್ನು ಸಾರ್ವಜನಿಕರು ಗೂಸಾ ನೀಡಿ ಓಡಿಸಿದ್ದರು
ಹರತಾಳದ ವಿರುದ್ಧ ಮಾತನಾಡುವ ವ್ಯಾಪಾರಿಗಳು, ಕೈಗಾರಿಕೋದ್ಯಮಿಗಳು ಮತ್ತು ಸಾಂಸ್ಕøತಿಕ ಮುಖಂಡರು ಪಾಪ್ಯುಲರ್ ಫ್ರಂಟ್‍ನ ಭಯದಿಂದ ಮೌನವಾಗಿದ್ದಾರೆ. ಶಬರಿಮಲೆ ವಿಚಾರವಾಗಿ ಶಬರಿಮಲೆ ಭಕ್ತರು ಕರೆ ನೀಡಿರುವ ಹರತಾಳದ ವಿರುದ್ಧ ರಂಗಕ್ಕೆ ಬಂದಿದ್ದ ಐಕ್ಯರಂಗ-ಎಡರಂಗ ಕೂಡ ಪಾಪ್ಯುಲರ್ ಫ್ರಂಟ್‍ನ ಹರತಾಳದ ಪರವಾಗಿ ನಿಲ್ಲಲುಪ್ರಯತ್ನಿಸುತ್ತಿದೆ. ಪಾಪ್ಯುಲರ್ ಫ್ರಂಟ್ ವಿರುದ್ಧ ರಾಷ್ಟ್ರವ್ಯಾಪಿ ಕಠಿಣ ಕ್ರಮ ಕೈಗೊಳ್ಳಲಾಗಿದ್ದರೂ, ಕೇರಳದಲ್ಲಿ ಮಾತ್ರ ಹರತಾಳ ನಡೆಸುತ್ತಿರುವುದು ಭಯೋತ್ಪಾದಕರ ಸ್ವರ್ಗ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಎಂದು ಶ್ರೀಕಾಂತ್ ತಿಳಿಸಿದ್ದಾರೆ.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


Qries