HEALTH TIPS

ಸರ್ಕಾರಿ ಶಾಲೆಗಳನ್ನು ಶ್ರೇಷ್ಠ ಕೇಂದ್ರಗಳನ್ನಾಗಿ ಮಾಡುವುದು ಸರ್ಕಾರದ ಗುರಿ: ಸಚಿವ ವಿ.ಶಿವನ್ ಕುಟ್ಟಿ: ಪಾಂಡಿ ಸರ್ಕಾರಿ ಪ್ರೌಢಶಾಲೆಯ ನೂತನ ಕಟ್ಟಡ ಉದ್ಘಾಟಿಸಿ ಅಭಿಮತ


          ಮುಳ್ಳೇರಿಯ: ಸಾರ್ವಜನಿಕ ಶಿಕ್ಷಣ ಸಂಸ್ಥೆಗಳನ್ನು ಶ್ರೇಷ್ಠ ಕೇಂದ್ರಗಳನ್ನಾಗಿ ಮಾಡುವುದು ಸರ್ಕಾರದ ಘೋಷಿತ ಗುರಿಯಾಗಿದ್ದು, ಈ ಗುರಿಯಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ರಾಜ್ಯ ಶಿಕ್ಷಣ ಸಚಿವ ವಿ.ಶಿವನ್ ಕುಟ್ಟಿ ತಿಳಿಸಿದ್ದಾರೆ.
       ದೇಲಂಪಾಡಿ ಪಂಚಾಯತಿಯ ಪಾಂಡಿ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಕಟ್ಟಡವನ್ನು ಉದ್ಘಾಟಿಸಿ ಸಚಿವರು ಮಾತನಾಡುತ್ತಿದ್ದರು.
        ಸಾರ್ವಜನಿಕ ಶಿಕ್ಷಣವನ್ನು ಬಲಪಡಿಸಿದಾಗ ಎರಡು ರೀತಿಯ ಬದಲಾವಣೆಗಳಾಗುತ್ತವೆ. ಸಾಮಾನ್ಯ ಜನರ ಮಕ್ಕಳು ಓದುವ ಶಾಲೆಗಳು ಸುಧಾರಿಸುತ್ತವೆ ಮತ್ತು ಶೈಕ್ಷಣಿಕ ಗುಣಮಟ್ಟವು ಹೆಚ್ಚಾಗುತ್ತದೆ. ಖಾಸಗಿ ವಲಯದ ಶಾಲೆಗಳು ಸಮಾನಾಂತರವಾಗಿ ತಮ್ಮ ಗುಣಮಟ್ಟವನ್ನು ಹೆಚ್ಚಿಸಬೇಕು ಎಂದು ಸಚಿವರು ಹೇಳಿದರು. ಕೇಂದ್ರ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿರುವ ಪರ್ಫಾರ್ಮೆನ್ಸ್ ಗ್ರೇಡಿಂಗ್ ಇಂಡೆಕ್ಸ್ ನಲ್ಲಿ ಈ ವರ್ಷವೂ ಕೇರಳ ಅಗ್ರಸ್ಥಾನದಲ್ಲಿದೆ. ಕೋವಿಡ್ ಕಾಲಘಟ್ಟದಲ್ಲಿ ಕೇರಳದ ಅಪ್ರತಿಮ ಶೈಕ್ಷಣಿಕ ಚಟುವಟಿಕೆಗಳಿಗೆ ಇದು ಮನ್ನಣೆಯಾಗಿದೆ. ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಅಭಿಯಾನ ಮತ್ತು ವಿದ್ಯಾಕಿರಣಂ ಯೋಜನೆಯು ನಮ್ಮ ಸಾರ್ವಜನಿಕ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿ ಮತ್ತು ಶೈಕ್ಷಣಿಕ ಗುಣಮಟ್ಟದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿತು. ಆ ಬದಲಾವಣೆಗಳಿಗೆ ಪಾಂಡಿ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ ಉದಾಹರಣೆಯಾಗಿದ್ದು, ಗುಡ್ಡಗಾಡು ಪ್ರದೇಶದಲ್ಲಿ ಶೈಕ್ಷಣಿಕ ಕ್ರಾಂತಿಗೆ ಪಾಂಡಿ ಶಾಲೆ ಸಾಕ್ಷಿಯಾಗಿದೆ ಎಂದರು.           ಶಾಸಕ ಸಿ.ಎಚ್.ಕುಂಞಂಬು ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿದ್ದರು.
            ಲೋಕೋಪಯೋಗಿ ಕಟ್ಟಡ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ರವಿಕುಮಾರ್ ವರದಿ ಮಂಡಿಸಿದರು. ದೇಲಂಪಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಡಿ.ಎ.ಅಬ್ದುಲ್ಲ ಕುಂಞÂ, ಅಭಿವೃದ್ಧಿ ಕಾರ್ಯಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ಪ್ರಿಯಾ, ಕ್ಷೇಮಾಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಎ.ಸುರೇಂದ್ರನ್, ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ನಳಿನಾಕ್ಷಿ, ಕಾರಡ್ಕ ಬ್ಲಾಕ್ ಪಂಚಾಯಿತಿ ಸದಸ್ಯ ಚನಿಯ ನಾಯಕ್, ದೇಲಂಪಾಡಿ ಗ್ರಾಮ ಪಂಚಾಯಿತಿ ಸದಸ್ಯರಾದ ಟಿ.ಕೆ.ದಾಮೋದರನ್, ಶಾರದ, ಗೋಪಾಲಕೃಷ್ಣ, ರಾಧಾಕೃಷ್ಣನ್, ಕೆ.ಬಿಂದು, ಬಿ.ಮಣಿ, ಇಕ್ಬಾಲ್, ವೆಂಕಟರಮಣ, ಸಿ.ಪ್ರಮೀಳಾ ನಾಯ್ಕ್, ಸಿ.ಎನ್.ನಿಶಾ, ದೇಲಂಪಾಡಿ ಗ್ರಾಮ ಪಂಚಾಯತಿ ಯೋಜನಾ ಸಮಿತಿ ಉಪಾಧ್ಯಕ್ಷ ಎ.ಚಂದ್ರಶೇಖರ, ದೇಲಂಪಾಡಿ ಗ್ರಾಮ ಪಂಚಾಯತಿ ಸಿಡಿಎಸ್ ಅಧ್ಯಕ್ಷೆ ಸುಮಾ, ಸರ್ವಶಿಕ್ಷಾ ಕೇರಳ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಡಿ.ನಾರಾಯಣ, ಜಿಎಚ್‍ಎಸ್‍ಎಸ್ ಪಾಂಡಿ ಮುಖ್ಯಶಿಕ್ಷಕ ರಾಧಾಕೃಷ್ಣನ್, ಪಿಟಿಎ. ಅಧ್ಯಕ್ಷ ಶಂಸುದ್ದೀನ್, ಎಸ್‍ಎಂಡಿಸಿ ಅಧ್ಯಕ್ಷ ರತನ್‍ಕುಮಾರ್ ನಾಯ್ಕ್, ಶಾಲಾ ಆಡಳಿತ ಸಮಿತಿ ಅಧ್ಯಕ್ಷ ದಿವಾಕರನ್, ಮಾತೃ ಸಂಘದ  ಅಧ್ಯಕ್ಷೆ ತುಳಸಿ, ಹಿರಿಯ ಸಹಾಯಕಿ ರೇಖಾ ಸ್ಮಿತಾ, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಸಿ.ಕೆ.ಕುಮಾರನ್, ಸನೋಜ್ ಕಾರಡ್ಕ, ಗೋಪಾಲನ್ ಮಣಿಯಾಣಿ, ಅಶ್ರಫ್ ಚೆಂದಮೂಲೆ ಇತರರು ಮಾತನಾಡಿದರು. ದೇಲಂಪಾಡಿ ಗ್ರಾ.ಪಂ.ಅಧ್ಯಕ್ಷೆ ನ್ಯಾಯವಾದಿ.ಎ.ಪಿ.ಉಷಾ ಸ್ವಾಗತಿಸಿ, ಪಾಂಡಿ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲ ಕೆ.ವಿ.ಪ್ರಕಾಶನ್ ವಂದಿಸಿದರು.


   ನೂತನ ಕಟ್ಟಡವು 21500 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ ಮತ್ತು 21 ತರಗತಿ ಕೊಠಡಿಗಳನ್ನು ಹೊಂದಿದೆ. ತರಗತಿ ಕೊಠಡಿಗಳು ರ್ಯಾಂಪ್ ಸೇರಿದಂತೆ ಆಧುನಿಕ ಸೌಲಭ್ಯಗಳನ್ನು ಹೊಂದಿವೆ. 2.07 ಕೋಟಿ ವೆಚ್ಚದಲ್ಲಿ 3 ಅಂತಸ್ತಿನ ಕಟ್ಟಡ ನಿರ್ಮಾಣ ಪೂರ್ಣಗೊಂಡಿದೆ. ಶಿಕ್ಷಣ ಇಲಾಖೆ 3 ಕೋಟಿ ರೂ. ಯೋಜನಾ ವೆಚ್ಚ ನಿರೀಕ್ಷಿಸಿತ್ತು.


 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


Qries