HEALTH TIPS

ಕೂತುಪರಂ ಹುತಾತ್ಮರನ್ನು ನಾಚಿಸಿದ ಸಿಪಿಎಂ; ಹುತಾತ್ಮ ಮಂಟಪಕ್ಕೆ ಕೆಂಬಣ್ಣದ ಬದಲು ಕಡು ಹಸಿರು ಬಣ್ಣ ಬಳಿದ ಸಿಪಿಎಂ


           ಕಣ್ಣೂರು: ಸರ್ಕಾರದ ವಿರುದ್ದ ನಡೆದ ಪ್ರತಿಭಟನೆಯಲ್ಲಿ ಪೋಲೀಸರ ಗುಂಡಿಗೆ ಬಲಿಯಾದವರ ನೆನಪಿಗಾಗಿ ಕೂತುಪರಬಂನಲ್ಲಿ  ಸಿಪಿಎಂ ನಿರ್ಮಿಸಿರುವ ಹುತಾತ್ಮರ ಮಂಟಪದ ಕೆಂಪು ಬಣ್ಣವನ್ನು ಕಡು ಹಸಿರು ಬಣ್ಣಕ್ಕೆ ಬದಲಾಯಿಸಲಾಗಿದೆ.
          ನವೆಂಬರ್ 25, 1994 ರಂದು, ಕೂತುಪರಂಬಂನಲ್ಲಿ ಪೋಲೀಸರ ಗುಂಡಿನ ದಾಳಿಯಲ್ಲಿ ಐದು ಡಿವೈಎಫ್‍ಐಗಳು ಕೊಲ್ಲಲ್ಪಟ್ಟರು. ಯುಡಿಎಫ್ ಸರ್ಕಾರದ ಸ್ವಾವಲಂಬನೆ ಧೋರಣೆ ವಿರುದ್ಧ ಡಿವೈಎಫ್ ಐ ನೇತೃತ್ವದಲ್ಲಿ ಎಂವಿಆರ್ ತಡೆದದ್ದೇ ಪೆÇಲೀಸ್ ಗೋಲಿಬಾರ್ ಗೆ ಕಾರಣ. ಬಳಿಕ ಮರುವರ್ಷ ಸಿಪಿಎಂ ನಾಯಕತ್ವವು ಕೂತುಪರಂಬ ನಗರಸಭೆಯ ಮರೋಳಿಘಾಟ್‍ನಲ್ಲಿ ಕೆಂಪು ಹುತಾತ್ಮ ಮಂಟಪವನ್ನು ನಿರ್ಮಿಸಿತು. ಪ್ರಸ್ತುತ ಇದೀಗ ಹುತಾತ್ಮರ ಸ್ಮರಣೆಯ ಪೂರ್ವಭಾವಿಯಾಗಿ ಕೆಂಪು ಬಣ್ಣವನ್ನು ಹಸಿರು ಬಣ್ಣಕ್ಕೆ ಬದಲಾಯಿಸಲಾಯಿತು.
          ಮುಸ್ಲಿಂ ಲೀಗ್ ಕಚೇರಿಗೂ ಇಲ್ಲದ ಬಣ್ಣ ಹುತಾತ್ಮ ಮಂಟಪಕ್ಕೆ ನೀಡಿ ವಿವಾದಕ್ಕೆಡೆಯಾಗಿದೆ. ಪಕ್ಷದ ಮುಖಂಡರು ಈ ವಿಚಾರವನ್ನು ಮರೆಮಾಚಿದ್ದಾರೆ. ಇದೇ ಪಕ್ಷ ಕಣ್ಣೂರಿನಲ್ಲಿ ಎಂವಿಆರ್ ಸ್ಮೃತಿ ದಿನವನ್ನು ಕೂತುಪರಂ ಹುತಾತ್ಮರ ದಿನ ಆಚರಿಸುತ್ತಿರುವುದನ್ನು ಈ ಹಿಂದೆ ಕಾರ್ಯಕರ್ತರು ಪ್ರಶ್ನಿಸಿದ್ದರು. ಆ ಬಳಿಕ ಇದೀಗ ಹುತಾತ್ಮರ ಭವನಕ್ಕೆ ಹಸಿರು ಬಣ್ಣ ಬಳಿದು ಸಿಪಿಎಂ ನಾಯಕತ್ವ ಮುಜುಗರಕ್ಕೀಡಾಗಿದೆ.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries