HEALTH TIPS

ಪ್ರತಿಭೆ ಅನಾವರಣಕ್ಕೆ ವೇದಿಕೆ ಬೇಕು : ಸಾ„್ವ ಶ್ರೀ ಮಾತಾನಂದಮಯಿ: ನಾರಿ ಚಿನ್ನಾರಿ ಸಂಸ್ಥೆಗೆ ಚಾಲನೆ ನೀಡಿ ಆಶೀರ್ವಚನ

 


         ಕಾಸರಗೋಡು: ಎಲ್ಲರಲ್ಲೂ ಪ್ರತಿಭೆ ಇದೆ. ಸುಪ್ತವಾಗಿರುವ ಪ್ರತಿಭೆ ಅನಾವರಣಗೊಳ್ಳಲು ಸೂಕ್ತ ವೇದಿಕೆ ಬೇಕು. ಈ ನಿಟ್ಟಿನಲ್ಲಿ ರಂಗಚಿನ್ನಾರಿ ಸಂಸ್ಥೆ ವೇದಿಕೆ ಕಲ್ಪಿಸಿ ಸುಪ್ತ               ಪ್ರತಿಭೆಗಳನ್ನು ಬೆಳಕಿಗೆ ತರುವ ಶ್ಲಾಘನೀಯ ಕೆಲಸ ಮಾಡುತ್ತಿದೆ. ವೇದ ಕಾಲದಿಂದಲೇ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯವಿತ್ತು. ಮಹಿಳೆಯರನ್ನು ಮುಖ್ಯವಾಹಿನಿಗೆ ತರುವುದಕ್ಕಾಗಿ ನಾರಿ ಚಿನ್ನಾರಿ ಸಂಸ್ಥೆಯನ್ನು ಹುಟ್ಟು ಹಾಕಿದ್ದು, ಈ ಮೂಲಕ ಮಹಿಳೆಯರಿಗೆ ಇನ್ನೂ ಹೆಚ್ಚಿನ ಪ್ರಾತಿನಿಧ್ಯ ನೀಡುವ ಸಂಕಲ್ಪ ಮಾಡಿರುವುದು ಸ್ತುತ್ಯಾರ್ಹ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನ ಪರಮಪೂಜ್ಯ ಸಾದ್ವಿ ಶ್ರೀ ಮಾತಾನಂದಮಯಿ ಅವರು ಹೇಳಿದರು.
             ಸಾಮಾಜಿಕ - ಸಾಂಸ್ಕøತಿಕ ಸಂಸ್ಥೆಯಾದ ರಂಗಚಿನ್ನಾರಿ ಕಾಸರಗೋಡು ನೇತೃತ್ವದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಸಹಯೋಗದೊಂದಿಗೆ ರಂಗಚಿನ್ನಾರಿ ಕಾಸರಗೋಡು ಇದರ ಮಹಿಳಾ ಘಟಕ ನಾರಿ ಚಿನ್ನಾರಿಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಸಾದ್ವಿ ಅವರು ಆಶೀರ್ವಚನವಿತ್ತರು.
               ಪೆÇ್ರೀತ್ಸಾಹದಿಂದ ವ್ಯಕ್ತಿತ್ವ ನಿರ್ಮಾಣವಾಗತ್ತದೆ. ಸಂಸ್ಕಾರ ಲಭಿಸಿದಾಗ ಕಲೆ, ಸಾಹಿತ್ಯ ಪ್ರಜ್ವಲವಾಗುತ್ತದೆ ಎಂದು ನುಡಿದ ಸಾದ್ಯಿ ಅವರು ನಿರಂತರವಾಗಿ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕøತಿಯನ್ನು ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿರುವ ರಂಗಚಿನ್ನಾರಿ ಸಂಸ್ಥೆಗೆ ರಾಜ್ಯ-ರಾಷ್ಟ್ರ ಪ್ರಶಸ್ತಿ ಲಭಿಸಲಿ ಎಂದು ಹಾರೈಸಿದರು.
             ಕರಂದಕ್ಕಾಡ್‍ನ ಪದ್ಮಗಿರಿ ಕಲಾಕುಟೀರದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾರಿ ಚಿನ್ನಾರಿ ಅಧ್ಯಕ್ಷೆ ಸವಿತಾ ಟೀಚರ್ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಡಾ. ಮಂಜುನಾಥ್, ಖ್ಯಾತ ವೈದ್ಯೆ ಡಾ|. ೀಣಾ ಮಂಜುನಾಥ್, ಕಲಾವಿದೆ ಕುಸುಮಾ ಕಾಮತ್ ಶುಭಹಾರೈಸಿದರು. ರಂಗಚಿನ್ನಾರಿ ನಿರ್ದೇಶಕ ಕಾಸರಗೋಡು ಚಿನ್ನಾ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಿರ್ದೇಶಕ ಕೋಳಾರು ಸತೀಶ್ಚಂದ್ರ ಭಂಡಾರಿ ಉಪಸ್ಥಿತರಿದ್ದರು. ಮಾಲತಿ ಮಾಧವ ಕಾಮತ್ ಪ್ರಾರ್ಥನೆ ಹಾಡಿದರು. ಸ್ನೇಹಲತಾ ಸ್ವಾಗತಿಸಿದರು. ವಿಜಯಲಕ್ಷ್ಮೀ ಶ್ಯಾನುಭೋಗ್ ಕಾರ್ಯಕ್ರಮ ನಿರೂಪಿಸಿದರು. ವೀಣಾ ಅರುಣ್ ಶೆಟ್ಟಿ ವಂದಿಸಿದರು.
          ಸಭಾ ಕಾರ್ಯಕ್ರಮದ ಬಳಿಕ ಸಂಸ್ಕøತಿ ಕಲರವ ನಡೆಯಿತು. ಡಾ|ಮಹೇಶ್ವರಿ ಯು, ವೇದಾವತಿ, ಬಬಿತಾ ಎ(ಆಶಯಗೀತೆ), ಶಿವಾನಿ ಕಾಸರಗೋಡು(ಮೋಹಿನಿಯಾಟ್ಟಂ), ಶೈಲಜಾ ಕೂಡ್ಲು(ಭಕ್ತಿ ಸಂಗೀತ), ತೇಜ ಕುಮಾರಿ(ಮಿಮಿಕ್ರಿ), ಶಾಲಿಕಾ ಎ.ಆರ್(ತಮಿಳುಗಾನ), ಮೀರಾ ಕಾಮತ್(ಹಾಸ್ಯ ಕವಿತೆ), ವರ್ಷಾ ಪ್ರವೀಣ್(ಭಕ್ತಿಗೀತೆ), ಶಿಲ್ಪಾ ವಾಶೆ(ಶಾಸ್ತ್ರೀಯ ಸಂಗೀತ), ಲತೀಶ್(ತಬಲಾ ವಾದನ), ಗೀತಾ ಎಂ.ಭಟ್(ಭಾವಗೀತೆ), ಅನುಶ್ರೀ ಕೆ(ಜಾನಪದ ನೃತ್ಯ), ತೇಜಸ್ವಿನಿ ಕೆ.ಆರ್(ಕವಿತಾ ವಾಚನ), ಅಭಿಜ್ಞಾ ಕರಂದಕ್ಕಾಡ್, ಕೌಸ್ತುಭ್ ಕೆ.ಯು(ಯೋಗ ನೃತ್ಯ), ವಿಜಯಲಕ್ಷ್ಮಿ ಶ್ಯಾನುಭೋಗ್, ಸ್ನೇಹಲತಾ ದಿವಾಕರ್ ಕುಂಬ್ಳೆ, ಮಾಲತಿ ಜಗದೀಶ್, ಗೀತಾ ಎಂ.ಭಟ್(ಪ್ರಹಸನ) ಮೊದಲಾದವರಿಂದ ವಿವಿಧ ಸಾಂಸ್ಕøತಿ ಕಾರ್ಯಕ್ರಮಗಳು ನಡೆಯಿತು.
Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


Qries