HEALTH TIPS

No title

          ಮತ್ತೆ ತಲೆಹರಟೆ-6 ಕನ್ನಡಿಗ ನೌಕರರಿಗೆ ಅನ್ಯ ಜಿಲ್ಲೆಗೆ ವರ್ಗ
    ಕಾಸರಗೋಡು: ಕಂದಾಯ ಇಲಾಖೆಯಲ್ಲಿ ಕನ್ನಡಿಗ ನೌಕರರಾದ ಆರು ಮಂದಿಯನ್ನು ಕಾಸರಗೋಡಿನಿಂದ ಅನ್ಯ ಜಿಲ್ಲೆಗಳಿಗೆ ವಗರ್ಾಯಿಸಲಾಗಿದೆ.
   ಗ್ರಾಮಾಧಿಕಾರಿಯಾಗಿ ಹುದ್ದೆ ಬಡ್ತಿ ಲಭಿಸಿ ವಗರ್ಾವಣೆಗೊಳಿಸುತ್ತಿದ್ದರೂ ಕನ್ನಡ ಭಾಷಾ ಅಲ್ಪಸಂಖ್ಯಾತ ಪ್ರದೇಶವಾದ ಕಾಸರಗೋಡಿನಿಂದ ಕನ್ನಡಿಗ ನೌಕರರನ್ನು ವಗರ್ಾಯಿಸಿರುವುದರಿಂದ ಇಲ್ಲಿನ ವಿವಿಧ ವಿಷಯಗಳಿಗೆ ಪರಿಣಾಮ ಬೀರಲಿದೆ.
   ಮಂಜೇಶ್ವರ ತಾಲೂಕು ಕಚೇರಿಯ ಮೂವರು, ಕಾಸರಗೋಡು ಗ್ರಾಮದ ಒಬ್ಬರು, ಕಾಸರಗೋಡು ತಾಲೂಕು ಕಚೇರಿಯ ಒಬ್ಬರು, ಜಿಲ್ಲಾಧಿಕಾರಿ ಕಚೇರಿಯ ಒಬ್ಬ ನೌಕರನನ್ನು ವಗರ್ಾಯಿಸಲಾಗಿದೆ.
   ವಗರ್ಾವಣೆಗೊಂಡವರ ಪೈಕಿ ಮೂವರನ್ನು ಪಾಲಕ್ಕಾಡ್ನಲ್ಲಿ, ಒಬ್ಬರನ್ನು ಮಲಪ್ಪುರದಲ್ಲಿ ಹಾಗೂ ಇಬ್ಬರನ್ನು ಇಡುಕ್ಕಿಯಲ್ಲಿ ನೇಮಿಸಲಾಗಿದೆ. ಇತರ ಜಿಲ್ಲೆಯವರಾದ ಹಲವಾರು ಮಂದಿ ಕಾಸರಗೋಡು ಜಿಲ್ಲೆಯಲ್ಲಿ ನೌಕರಿ ನಿರ್ವಹಿಸುತ್ತಿದ್ದು, ಇವರಿಗೆ ಕನ್ನಡ ಭಾಷೆಯ ಗಂಧಗಾಳಿ ಇಲ್ಲದಿರುವುದು ಇವರೊಂದಿಗೆ ವ್ಯವಹರಿಸುವುದು ಜನಸಾಮಾನ್ಯರಿಗೆ ಕಷ್ಟವಾಗುತ್ತಿದೆ. ಇದರಿಂದ ಜಿಲ್ಲೆಯ ಅಭಿವೃದ್ದಿಗೆ, ಜನರ ನಿತ್ಯ ವ್ಯವಹಾರಗಳಿಗೆ ದುಷ್ಪರಿಣಾಮ ಬೀರುತ್ತಿದೆ. ಈ ಕಾರಣದಿಂದ ಕನ್ನಡ ಅಲ್ಪಸಂಖ್ಯಾತ ನೆಲೆಯಲ್ಲಿ ಕಾಸರಗೋಡಿಗೆ ಕನ್ನಡ ಬಲ್ಲ ನೌಕರರು ಮತ್ತು ದ್ವಿಭಾಷೆ ಜ್ಞಾನವಿರುವವರನ್ನು ಆಯ್ಕೆಮಾಡಬೇಕೆಂಬ ನಿಯಮಗಳನ್ನು ಇತ್ತೀಚಿನ ವರ್ಷಗಳಲ್ಲಿ ಸರಕಾರ ಉಲ್ಲಂಘಿಸುತ್ತಿರುವುದು ಕನ್ನಡಿಗರನ್ನು ರೊಚ್ಚಿಗೇಳುವಂತೆ ಮಾಡುತ್ತಿದ್ದು, ಇದು ಮುಂದೊಂದು ದಿನ ಯಾವುದೇ ಮಟ್ಟಕ್ಕೂ ತೆರೆದುಕೊಳ್ಳುವ ಸಾಧ್ಯತೆ ಇದೆ. 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries