HEALTH TIPS

ನಕ್ಸಲ್‍ಗಳ ಹತ್ಯೆ-ವಿಧಾನಸಭೆಯಲ್ಲಿ ಆಡಳಿತ, ಪ್ರತಿಪಕ್ಷಗಳ ಮಧ್ಯೆ ವಾಗ್ವಾದ-ವಾಲಯಾರ್ ಅಂಜಿಕಂಡಿ ಅರಣ್ಯಪ್ರದೇಶದಲ್ಲಿ ಮುಂದುವರಿದ ಕಾರ್ಯಾಚರಣೆ: ಹೆಚ್ಚಿನ ಭದ್ರತೆ


     ತಿರುವನಂತಪುರ: ಪಾಲಕ್ಕಾಡ್ ಅಟ್ಟಪ್ಪಾಡಿ ಮಂಜಿಕಂಡಿಯಲ್ಲಿ ನಾಲ್ವರು ನಕ್ಸಲರ ಹತ್ಯೆ ವಿಷಯ ಕೇರಳ ವಿಧಾನಸಭೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು. ಪೊಲೀಸ್ ಇಲಾಖೆಯ ನಕ್ಸಲ್ ನಿಗ್ರಹ ಪಡೆ ಥಂಡರ್ ಬೋಲ್ಟ್ ಕಮಾಂಡೋ ಪಡೆ ನಕಲಿ ಎನ್‍ಕೌಂಟರ್ ಮೂಲಕ ನಾಲ್ಕು ಮಂದಿ ನಕ್ಸಲರನ್ನು ಹತ್ಯೆಗೈಯಲಾಗಿದ್ದು, ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಸುವಂತೆ ಮುಸ್ಲಿಂಲೀಗ್ ಶಾಸಕ ಶಂಸುದ್ದೀನ್ ಸದನದಲ್ಲಿ ಆಗ್ರಹಿಸಿದರು. ಪ್ರತಿಪಕ್ಷ ಸದಸ್ಯರ ಆರೋಪ ಅಲ್ಲಗಳೆದ ಸಿಎಂ ಪಿಣರಾಯಿ ವಿಜಯನ್, ಥಂಡರ್‍ಬೋಲ್ಟ್ ಪಡೆಯ ಮೇಲೆ  ಮೊದಲು ನಕ್ಸಲರು ಗುಂಡು ಹಾರಿಸಿದ್ದು, ಈ ಸಂದರ್ಭ ಸ್ವಯಂ ರಕ್ಷಣೆಗಾಗಿ ಪ್ರತಿದಾಳಿ ನಡೆಸಲಾಗಿದೆ. ನಕ್ಸಲರಿಂದ ತಲಾ ಒಂದು 303 ಬಂದೂಕು, ಎ.ಕೆ 47, ಸ್ಥಳೀಯ ನಿರ್ಮಿತ ಬಂದೂಕು, ಇಲೆಕ್ಟ್ರಾನಿಕ್ ಉಪಕರಣಗಳ  ಸಹಿತ ಮಾರಕ ಆಯುಧಗಳನ್ನು ಪತ್ತಹಚ್ಚಲಾಗಿದೆ. ನಾಲ್ಕು ಮಂದಿ ನಕ್ಸಲರ ಸಾವು ಖೇದ ತಂದೊಡ್ಡಿದೆ. ಆದರೆ, ನಕ್ಸಲ್ ಚಟುವಟಿಕೆ ಹತ್ತಿಕ್ಕುವ  ಹೊಣೆ ಸರ್ಕಾರಕ್ಕಿದೆ. ಪೊಲೀಸರಿಂದ ತಪ್ಪು ಉಂಟಾಗಿದ್ದಲ್ಲಿ ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
              ಮುಂದುವರಿದ ಕಾರ್ಯಾಚರಣೆ:
     ಪಾಲಕ್ಕಾಡ್ ಅಟ್ಟಪ್ಪಾಡಿ ವಲಯದ ಮಂಜಿಕಂಡಿ ಅರಣ್ಯದಲ್ಲಿ ಚದುರಿಕೊಂಡಿರುವ ನಕ್ಸಲರ ಪತ್ತೆಗಾಗಿ ಥಂಡರ್‍ಬೋಲ್ಟ್ ಕಮಾಂಡೋ ಪಡೆ ಶೋಧಕಾರ್ಯ ಮುಂದುವರಿಸಿದೆ. ಸೋಮವಾರ ನಡೆದ ಕಾರ್ಯಾಚರಣೆಯಲ್ಲಿ ಮೂವರು ನಕ್ಸಲರು ಮೃತಪಟ್ಟಿದ್ದರು. ಮೃತಪಟ್ಟವರಲ್ಲಿ  ಚಿಕ್ಕಮಗಳೂರಿನ ಶ್ರೀಮತಿ ಮತ್ತು ಸುರೇಶ್ ಎಂದು ಆರಂಭದಲ್ಲಿ ಪೊಲೀಸರು ತಿಳಿಸಿದ್ದು, ನಂತರ ಸಾವನ್ನಪ್ಪಿದವರು ರಮಾ ಮತ್ತು ಅರವಿಂದ್ ಎಂದು ಖಚಿತಪಡಿಸಿದ್ದಾರೆ. ತಮಿಳ್ನಾಡು ನಿವಾಸಿ ಕಾರ್ತಿಕ್ ಹಾಗೂ ಮಣಿವಾಸಗಂ ಸಹಿತ ನಾಲ್ಕು ಮಂದಿ ಕಾರ್ಯಾಚರಣೆಯಲ್ಲಿ ಹತರಾಗಿದ್ದಾರೆ.
         ಮಣಿವಾಸಗಂ ನಕ್ಸಲ್ ನೇತಾರ:
    ನಕ್ಸಲ್ ವಿರುದ್ಧ ಕಾರ್ಯಾಚರಣೆಯಲ್ಲಿ ಥಂಡರ್‍ಬೋಲ್ಟ್ ಪಡೆಯಿಮದ ಹತನಾಗಿರುವ ಮಣಿವಾಸಕಂ ಯಾನೆ ಅಪ್ಪು ಪಶ್ಚಿಮಘಟ್ಟ ವಲಯದಲ್ಲಿ ಕಾರ್ಯಾಚರಿಸುತ್ತಿರುವ ಸಿಪಿಐ(ಮಾವೋಯಿಸ್ಟ್)ಭವಾನಿದಳದ ದಕ್ಷಿಣ ವಲಯ ಸಮಿತಿಯ ಪ್ರಮುಖ ನೇತಾರನಾಗಿದ್ದಾನೆ. ಕೇರಳ, ಕರ್ನಾಟಕ, ತಮಿಳ್ನಾಡು ರಾಜ್ಯಗಳ ನಕ್ಸಲ್ ಚಟುವಟಿಕೆಗಳ ನೇತೃತ್ವವನ್ನು ಈತನೇ ವಹಿಸಿಕೊಂಡಿದ್ದನು. 2016 ನವೆಂಬರ್ 24ರಂದು ಮಲಪ್ಪುರಂ ಜಿಲ್ಲೆಯ ನಿಲಂಬೂರ್ ಕರುಳಾಯಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಹತರಾದ ಕುಪ್ಪಂ ದೇವರಾಜು ಹಾಗೂ ಅಜಿತಾ ಅವರ ಜತೆ ಮಣಿವಾಸಕಂ ಸಹಿತ ಎಂಟು ಮಂದಿ ಒಳಗೊಂಡಿದ್ದು, ನಂತರ ಅಟ್ಟಪ್ಪಾಡಿ ಅರಣ್ಯಪ್ರದೇಶಕ್ಕೆ ತಮ್ಮ ಕ್ಯಾಂಪ್ ಬದಲಾಯಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
              ಕಣ್ಣೂರು ವರೆಗೂ ವಿಸ್ತರಣೆ:
     ಕರ್ನಾಟಕ ಹಾಗೂ ತಮಿಳ್ನಾಡಿನಲ್ಲಿ ನಕ್ಸಲ್ ವಿರುದ್ಧ ಕಾರ್ಯಾಚರಣೆ ಬಿಗುಗೊಳ್ಳುತ್ತಿದ್ದಂತೆ, ನಕ್ಸಲ್ ತಂಡ ಕೇರಳದತ್ತ ಮುಖಮಾಡಿದೆ. ಕಬಿನಿ ದಳ, ನಾಡುಕಾಣಿ ದಳ, ಭವಾನಿ ದಳ, ಶಿರುವಾಣಿ ದಳ ಈಗಾಗಲೇ ಕೇರಳದಲ್ಲಿ ಕಾರ್ಯಾಚರಿಸುತ್ತಿದ್ದು, ಇದರೊಂದಿಗೆ ಐದನೇ ತಂಡ ರಚಿಸುವ ಬಗ್ಗೆ ಸಭೆ ನಡೆಸಲು ಮಂಜಿಕಂಡಿಯಲ್ಲಿ ಸಿದ್ಧತೆ ನಡೆಸುವ ಮಧ್ಯೆ ಥಂಡರ್‍ಬೋಲ್ಟ್ ಕಾರ್ಯಾಚರಣೆ ನಡೆಸಿದೆ. ನಕ್ಸಲ್ ಭೀತಿ ಹಿನ್ನೆಲೆಯಲ್ಲಿ ಪಾಲಕ್ಕಾಡ್, ಮಲಪ್ಪುರಂ, ವಯನಾಡ್, ಕೋಯಿಕ್ಕೋಡ್ ಜಿಲ್ಲೆಗಳ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಪೊಲೀಸ್ ಠಾಣೆಗಳಿಗೆ ಸಶಸ್ತ್ರ ನಕ್ಸಲ್ ವಿರುದ್ಧ ಕಾರ್ಯಾಚರಣೆ ಪಡೆಯನ್ನು ನಿಯೋಜಿಸಲಾಗಿದೆ.
     ಕಣ್ಣೂರು-ಕಾಸರಗೋಡು ಜಿಲ್ಲೆಯ ಗಡಿಪ್ರದೇಶದ ಅರಣ್ಯ ಪ್ರದೇಶದ ಪೊಲೀಸ್ ಠಾಣೆಗಳಲ್ಲೂ ಜಾಗ್ರತಾ ನಿರ್ದೇಶ ಹೊರಡಿಸಲಾಗಿದೆ. ನಕ್ಸಲ್ ತಂಡದಲ್ಲಿ ಸುಮಾರು 15ಮಂದಿ ಸದಸ್ಯರಿದ್ದು, ಇವರಲ್ಲಿ ನಾಲ್ಕು ಕೇರಳೀಯರೂ ಒಳಗೊಂಡಿದ್ದಾರೆ ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries