HEALTH TIPS

119 ವರ್ಷಗಳ ದಾಖಲೆ ಮುರಿದ ದೆಹಲಿಯ ಡಿಸೆಂಬರ್ ಚಳಿ!

 
    ನವದೆಹಲಿ: ಈ ಬಾರಿ ಚಳಿಗಾಲ ಉತ್ತರ ಭಾರತವನ್ನು ಇನ್ನಿಲ್ಲದಂತೆ ಕಾಡುತ್ತಿದ್ದು, ರಾಜಧಾನಿ ದೆಹಲಿಯಲ್ಲಿ ಇಂದು ತಾಪಮಾನ 119 ವರ್ಷಗಳ ಹಳೆಯ ದಾಖಲೆಯನ್ನೂ ಮುರಿದಿದೆ.
    ರಾಷ್ಟ್ರ ರಾಜಧಾನಿ ದೆಹಲಿ ಚಳಿ ಬರೊಬ್ಬರಿ 119 ವರ್ಷಗಳ ದಾಖಲೆಯನ್ನು ಮುರಿದಿದ್ದು, ಈ ಕುರಿತಂತೆ ಕೇಂದ್ರ ಹವಮಾನ ಇಲಾಖೆ ಮಾಹಿತಿ ನೀಡಿದೆ. 1901ರಲ್ಲಿ ದಾಖಲಾಗಿದ್ದ ಕನಿಷ್ಛ ತಾಪಮಾನಕ್ಕಿಂತಲೂ ಇಂದು ದೆಹಲಿಯಲ್ಲಿ ಕನಿಷ್ಠ ತಾಪಮಾನ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
     ಈ ಕುರಿತಂತೆ ಟ್ವಿಟರ್ ನಲ್ಲಿ ಮಾಹಿತಿ ನೀಡಿರುವ ಹವಾಮಾನ ಇಲಾಖೆ, 1901ರಲ್ಲಿ ದೆಹಲಿಯಲ್ಲಿ ಮಧ್ಯಾಹ್ನ 02:30ರ ವೇಳೆಗೆ  9.4 ಡಿಗ್ರಿ ಯಷ್ಟು ತಾಪಮಾನ ದಾಖಲಾಗಿತ್ತು. ಆದರೆ ಇಂದು ದೆಹಲಿಯಲ್ಲಿ ಮಧ್ಯಾಹ್ನ 02:30ರ ವೇಳೆಗೆತಾಪಮಾನ 9ಡಿಗ್ರಿಗೆ ಳಿಯುವ ಮೂಲಕ ಆ 119 ವರ್ಷಗಳ ಹಳೆಯ ಶತಮಾನದ ದಾಖಲೆಯನ್ನು ಹಿಂದಿಕ್ಕಿದೆ. ಆ ಮೂಲಕ ದೆಹಲಿಯ 119 ವರ್ಷಗಳ ಇತಿಹಾಸದಲ್ಲಿಯೇ ಡಿಸೆಂಬರ್ ನ ಅತ್ಯಂತ ಚಳಿಯ ದಿನವಾಗಿದೆ. ಇನ್ನು ದೆಹಲಿಯ ಪಾಲಂನಲ್ಲಿ 9 ಡಿಗ್ರಿ ತಾಪಮಾನ ದಾಖಲಾಗಿದ್ದು, ಸಫ್ದರ್ ಜಂಗ್ ಪ್ರದೇಶದಲ್ಲಿ 9.4 ಡಿಗ್ರಿ ತಾಪಮಾನ ದಾಖಲಾಗಿದೆ.
    ಈ ಹಿಂದೆ ವಾರದ ಹಿಂದಯಷ್ಟೇ ದೆಹಲಿಯಲ್ಲಿ ಕನಿಷ್ಠ ತಾಪಮಾನ 2.4 ಡಿಗ್ರಿಗೆ ಇಳಿಕೆಯಾಗಿ ದಾಖಲೆ ನಿರ್ಮಾಣವಾಗಿತ್ತು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries