HEALTH TIPS

ಒಂದು ಕುಟುಂಬದ ಒಬ್ಬರು ಮಾತ್ರ ಸಾಮಾಗ್ರಿ ಖರೀದಿಗೆ ಹೊರಗಿಳಿಯಬೇಕು-ವಿಶೇಷ ಅಧಿಕಾರಿ ಸೂಚನೆ

   
       ಕಾಸರಗೋಡು:  ಅನಿವಾರ್ಯ ಸಾಮಾಗ್ರಿಗಳ ಖರೀದಿಗೆ ವ್ಯಾಪಾರ ಸಂಸ್ಥೆಗಳಿಗೆ ತೆರಳುವವರು ಒಂದು ಕುಟುಂಬದಿಂದ ಒಬ್ಬರೇ ಆಗಿರಬೇಕು ಎಂದು ಕೊರೋನಾ ಪ್ರತಿರೋಧ ಚಟುವಟಿಕೆಗಳ ಅವಲೋಕನ ನಡೆಸಲು ಜಿಲ್ಲೆಗೆ ಆಗಮಿಸಿರುವ ವಿಶೇಷ ಅಧಿಕಾರಿ , ರಾಜ್ಯ ಉದ್ದಿಮೆ ಇಲಾಖೆ ಕಾರ್ಯದರ್ಶಿ ಅಲ್ ಕೇಷ್ ಶರ್ಮ ತಿಳಿಸಿದರು. ಒಂದು ಕುಟುಂಬದ ಒಬ್ಬರಿಗಿಂತ ಅಧಿಕ ಮಂದಿ ಸಾಮಾಗ್ರಿ ಖರೀದಿಗೆ ಮನೆಯಿಂದ ಹೊರಗಿಳಿಯುತ್ತಿರುವುದು ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ. ಆಟೋರಿಕ್ಷಾದಲ್ಲಿ ಒಬ್ಬರಿಗೆ, ಕಾರಿನಲ್ಲಿ ಇಬ್ಬರಿಗೆ ಸಂಚಾರ ನಡೆಸಲು ಅನುಮತಿ ಇದೆ. ಈ ಆದೇಶ ಉಲ್ಲಂಘಿಸಿದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಐ.ಜಿ.ವಿಜಯ್ ಸಖಾರೆ ತಿಳಿಸಿದರು. 
         ವಯೋವೃದ್ಧರು ಸಹಾಯಕ್ಕಾಗಿ ಕರೆ ಮಾಡಬಹುದು :
   ಜಿಲ್ಲೆಯಲ್ಲಿ ಲಾಕ್ ಡೌನ್ ಆದೇಶ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಏಕಾಂಗಿಯಾಗಿ ಬದುಕುತ್ತಿರುವ ವಯೋವೃದ್ಧರ ಬಗ್ಗೆ ಜಿಲ್ಲಾಡಳಿತೆ ಹೆಚ್ಚುವರಿ ಕಾಳಜಿ ವಹಿಸುತ್ತಿದೆ. ಇಂಥವರಿಗೆ ಅಗತ್ಯದ ಔಷಧ, ಇನ್ನಿತರ ಸೇವೆಗಳ ಅಗತ್ಯವಿದ್ದರೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಚಟುವಟಿಕೆ ನಡೆಸುತ್ತಿರುವ ಕರೋನಾ ವಿಶೇಷ ನಿಯಂತ್ರಣ ಕೊಠಡಿಯಲ್ಲಿ ಸೌಲಭ್ಯ ಏರ್ಪಡಿಸಲಾಗಿದೆ. ದೂರವಾಣಿ ಸಂಖ್ಯೆ: 938708887.
           ಕಾರ್ಮಿಕರಿಗೆ ವೇತನ, ಭೋಜನ ನೀಡಬೇಕು:
     ಜಿಲ್ಲೆಯ ನೌಕರಿ ಮಾಲೀಕರು ಅವರ ವ್ಯಾಪ್ತಿಯಲ್ಲಿ ನೌಕರಿ ನಡೆಸುತ್ತಿರುವ ಕಾರ್ಮಿಕರಿಗೆ ಕಡ್ಡಾಯವಾಗಿ ವೇತನ ಮತ್ತು ಭೋಜನ ನೀಡಬೇಕು. ಈ ಆದೇಶ ಉಲ್ಲಘಿಸಿದಲ್ಲಿ ನೌಕರಿ ಮಾಲೀಕರ ವಿರುದ್ಧ ಡಿಸಾಸ್ಟರ್ ಮೆನೆಜ್ಮೆಂಟ್ ಕಾಯಿದೆ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
           ಸಂಸ್ಥೆಗಳನ್ನು ಶುಚೀಕರಣಗೊಳಿಸಬೇಕು:
     ಜಿಲ್ಲೆಯಲ್ಲಿ ಮುಚ್ಚುಗಡೆಯಲ್ಲಿರುವ ವ್ಯಾಪಾರ ಸಂಸ್ಥೆಗಳು, ಕಚೇರಿಗಳು ಇನ್ನಿತರ ಸಂಸ್ಥೆಗಳನ್ನು ತೆರೆದು ಕಾರ್ಯಾಚರಿಸುವ 24 ತಾಸುಗಳ ಮುನ್ನ ರೋಗಾಣು ನಾಶಕ ಬಳಸಿ ಶುಚೀಕರಣನಡೆಸಬೇಕು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
                    ಗುರುತು ಚೀಟಿ ಹೊಂದಿರಬೇಕು:
     ಆರ್ಥಿಕ ವರ್ಷದ ಕೊನೆಯ ದಿನವಾಗಿರುವ ಇಂದು(ಮಾ.31) ಬ್ಯಾಂಕ್, ಖಜಾನೆ ಸಿಬ್ಬಂದಿ ತಡವಾದರೂ ಕಚೇರಿಯಲ್ಲಿ ಕರ್ತವ್ಯ ನಡೆಸಬೇಕಾಗಿ ಬರಬಹುದು. ಇವರು ಗುರುತುಚೀಟಿ ಹೊಂದಿದ್ದಲ್ಲಿ ಸಂಚಾರಕ್ಕೆ ಪೆÇಲೀಸರು ಅನುಮತಿ ನೀಡುವರು.
                 ಎಲ್ಲ ಗ್ರಾಮಪಂಚಾಯತ್ ಗಳಲ್ಲಿ ಸಮುದಾಯ ಅಡುಗೆಮನೆ ಆರಂಭ: 
     ಈ ವರೆಗೂ ಸಮುದಾಯ ಅಡುಗೆಮನೆ  ಆರಂಭಿಸದೇ ಇರುವ ಜಿಲ್ಲೆಯ ಗ್ರಾಮಪಂಚಾಯತ್ ಗಳಲ್ಲಿ ಈ ಯೋಜನೆ ಆರಂಭಿಸಲಾಗುವುದು. ಜಿಲ್ಲೆಯ ಇತರ ರಾಜ್ಯಗಳ ಕಾರ್ಮಿಕರ ಆಹಾರ, ಸುರಕ್ಷೆ, ವೈದ್ಯ ಸಹಾಯ  ಖಚಿತಪಡಿಸಲಾಗುವುದು. ಅಡುಗೆಗೆ ಅಗತ್ಯವಾಗಿರುವ ತಲಾ 10 ಲೀಟರ್ ಸೀಮೆಎಣ್ಣೆ 38 ಕೇಂದ್ರಗಳಲ್ಲಿ ವಿತರಣೆ ನಡೆಸಲಾಗುವುದು ಎಂದು ಜಿಲ್ಲಾ ಸಪ್ಲೈ ಅಧಿಕಾರಿ ತಿಳಿಸಿದರು. ಎಫ್.ಸಿ.ಐ.ಯಲ್ಲಿ ಅಗತ್ಯವಿರುವ ಆದಾರ ಧಾನ್ಯ ಸಂಗ್ರಹವಿದೆ ಎಂದು ಅವರು ಹೇಳಿದರು. ಕೃಷಿಕರಿಂದ ತರಕಾರಿಗಳನ್ನು ಗ್ರಾಮಪಂಚಾಯತ್ ಮಟ್ಟದಲ್ಲಿ ಸಂಗ್ರಹಿಸಿ ಸಮುದಾಯ ಅಡುಗೆಮನೆಗಳಿಗೆ ಸಲ್ಲಿಸಲಾಗುವುದು.
             ಎಲ್ಲ ಸೌಲಭ್ಯ ಸಿದ್ಧತೆಗೆ ಆದೇಶ:
     ಜಿಲ್ಲೆಯ ಕೋವಿಡ್ ಆಸ್ಪತ್ರೆಗಳಲ್ಲಿ ಮತ್ತು ಕೇರ್ ಸೆಂಟರ್ ಗಳಲ್ಲಿ ಅಗತ್ಯವಿರುವ ಎಲ್ಲ ಚಿಕಿತ್ಸಾ ಸೌಲಭ್ಯ ಸಿದ್ಧಗೊಳಿಸಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಅವಲೋಕನ ಸಭೆ ಆದೇಶ ನೀಡಿದೆ. ಜಿಲ್ಲೆಯಲ್ಲಿ ಅಗತ್ಯವಿರುವ ಔಷಧಗಳು ಸರ್ಜಿಕಲ್ ಉಪಕರಣಗಳು ಲಭ್ಯವಿವೆ.
          ಪೆÇಲೀಸ್ ತಂಡ ನೇಮಕ:
    ಮನೆಗಳಲ್ಲಿ ನಿಗಾದಲ್ಲಿರುವವರನ್ನು ಸೂಕ್ಷ್ಮವಾಗಿ ಗಮನಿಸುವ ನಿಟ್ಟಿನಲ್ಲಿ ಪೆÇಲೀಸ್ ತಂಡವನ್ನು ನೇಮಿಸಲಾಗಿದೆ. ನಿಗಾದಲ್ಲಿರುವವರು ಮನೆಗಳಿಂದ ಹೊರಗಿಳಿದರೆ ಅಂಥವರನ್ನು ಕೊರೋನಾ ನಿಗಾ ಕೇಂದ್ರಗಳಿಗೆ ವರ್ಗಾಯಿಸಲಾಗುವುದು ಎಂದು ಐ.ಜಿ.ವಿಜಯ್ ಸಖಾರೆ ತಿಳಿಸಿದರು. ಉದಯಗಿರಿ ಮಹಿಳಾ ಹಾಸ್ಟೆಲ್, ಸೆಂಚುರಿ ಪಾರ್ಕ್,ಏರ್ ಲೇನ್ಸ್ ವಸತಿಗೃಹಗಳಲ್ಲಿ ನಿಗಾದಲ್ಲಿರುವವರನ್ನು ವರ್ಗಾಯಿಸುವ ವೇಳೆ ಭೋಜನ ಸಹಿತ ಸೌಲಭ್ಯ ಒದಗಿಸಲಾಗುವುದು.
              ವಾಹನ ಸೌಲಭ್ಯ:
      ಜಾನುವಾರುಗಳ ತಿನಿಸು, ಕೋಳಿ ತಿನಿಸು ಇತ್ಯಾದಿ ಲಭ್ಯತೆಗೆ 4 ದೊಡ್ಡ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ನಿಗಾದಲ್ಲಿರುವ ಮನೆಗಳ ಸಾಕು ಮೃಗಗಳಿಗೆ ಆಹಾರ ಒದಗಿಸುವ ಕ್ರಮದ ಹೊಣೆಯನ್ನು ಜಿಲ್ಲಾ ಮೃಗಸಂರಕ್ಷಣೆ ಇಲಾಖೆಗೆ ನೀಡಲಾಗಿದೆ.
              ವಿಶೇಷ ಅಧಿಕಾರಿಯ ಭೇಟಿ:
    ವಿಶೇಷ ಅಧಿಕಾರಿ ಅಲಕೇಷ್ ಕುಮಾರ್ ಶರ್ಮ ಮಧೂರು, ಚೆಮ್ನಾಡ್ ಗ್ರಾಮಪಂಚಾಯತ್ ಗಳ ವ್ಯಾಪ್ತಿಯ ಸಮುದಾಯ ಅಡುಗೆ ಮನೆಗಳಿಗೆ ಸೋಮವಾರ ಭೇಟಿ ನೀಡಿದರು. ಅಗತ್ಯದ ಸಲಹೆ-ಸೂಚನೆಗಳನ್ನು ಈ ವೇಳೆ ಅವರು ನೀಡಿದರು. ಚಟ್ಟಂಚಾಲ್, ಉದಯಗಿರಿ ಪ್ರದೇಶಗಳ ಇತರ ರಾಜ್ಯಗಳಕಾರ್ಮಿಕರಿರುವ ಕೇಂದ್ರಗಳಿಗೆ ಭೇಟಿ ನೀಡಿದ ಅವರು ಅವರೊಂದಿಗೆ ಮಾತುಕತೆ ನಡೆಸಿದರು. ಐಸೊಲೇಷನ್ವಾರ್ಡ್ ಆಗಿರಿಉವ ಉದಯಗೊರೊ ಮಹಿಳಾ ಹಾಸ್ಟೆಲ್ ಗೆ ಭೇಟಿ ನೀಡಿ ಅಲ್ಲಿನ ಸೌಲಭ್ಯಗಳ ಅವಲೋಕನ ನಡೆಸಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries