HEALTH TIPS

ಅಂತಾರ್ಜಲದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದ ಮಾಹಿತಿ ಸೋರಿಕೆ..!

            ನವದೆಹಲಿ : ಆನ್‍ಲೈನ್ ನಗದು ಪಾವತಿಯ ಅಪ್ಲಿಕೇಶನ್ ಆಗಿರುವ ಮೊಬಿವಿಕ್ ತನ್ನ ಬಳಕೆದಾರರ 3.5 ದಶಲಕ್ಷ ಮಾಹಿತಿಯನ್ನು ಡಾರ್ಕ್‍ವೆಬ್‍ಗೆ 1.5 ಬಿಟ್‍ಕಾಯಿನ್‍ಗೆ ಮಾರಾಟ ಮಾಡಿದೆ ಎಂಬ ಆರೋಪಗಳು ಬಾರೀ ಚರ್ಚೆಗೆ ಗ್ರಾಸವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಆರೋಪ ಅಲ್ಲೋಲಕಲ್ಲೋಲ ಸೃಷ್ಟಿಸಿದೆ. ಖಾಸಗಿ ಆನ್‍ಲೈನ್ ಮೊಬೈಲ್ ಪೇಮೆಂಟ್ ಅಪ್ಲಿಕೇಶನ್ ಬಳಸುತ್ತಿರುವವರ ಆತಂಕಹೆಚ್ಚಿಸಿದೆ. ಮೊಬಿವಿಕ್ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿ ಗ್ರಾಹಕರಿಗೆ ನಂಬಿಕೆ ದ್ರೋಹ ಮಾಡಿದ್ದು, ತಮ್ಮ ಬಳಕೆದಾರರ ಖಾಸಗಿ ಮಾಹಿತಿಯನ್ನು ಡಾರ್ಕ್‍ವೆಬ್‍ಗೆ ಮಾರಾಟ ಮಾಡಿದೆ.


         ಡಾರ್ಕ್ ವೆಬ್‍ನಲ್ಲಿ ಫೋನ್ ನಂಬರ್ ದಾಖಿಸಿದರೆ ಸಾಕು ಬಳಕೆದಾರರ ಕೆವೈಎಸಿ ಮಾಹಿತಿಗಳು, ವಿಳಾಸ, ಫೋನ್ ನಂಬರ್, ಆಧಾರ್ ಸಂಖ್ಯೆ ಸೇರಿದಂತೆ ಸಮಗ್ರ ವಿವರಗಳು ಕಾಣಸಿಗುತ್ತಿವೆ ಎಂದು ಅಂತರ್ಜಾಲದ ಭದ್ರತಾ ವಿಶ್ಲೇಷಕ ರಾಜಶೇಖರಯ್ಯ ಆರೋಪಿಸಿದ್ದಾರೆ. ಇದಕ್ಕೆ ದನಿಗೂಡಿಸಿರುವ ಮತ್ತೊಬ್ಬ ಅಂತರ್ಜಾಲ ವಿಶ್ಲೇಷಕ ಎಲಿಯೋಟ್ ಅಯಂಡ್ರೋಸನ್, ಇದು ಸಾಮಾಜಿಕ ಜಾಲತಾಣದ ಇತಿಹಾಸದಲ್ಲಿ ಅತಿದೊಡ್ಡ ಮಾಹಿತಿ ಸೋರಿಕೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

           ಟೆಕ್‍ನಡು ವರದಿಯ ಪ್ರಕಾರ ಡಾರ್ಕ್ ವೆಬ್‍ನಲ್ಲಿ ಬಳಕೆದಾರರ ಇ-ಮೇಲ್ ಐಡಿ, ಫೋನ್ ನಂಬರ್, ಪಾಸ್‍ವರ್ಡ್‍ಗಳು, ಯಾವೆಲ್ಲಾ ಅಪ್ಲಿಕೇಶನನ್ನು ಅವರ ಫೋನ್‍ನಲ್ಲಿ ಇನ್‍ಸ್ಟಾಲ್ ಮಾಡಿಕೊಳ್ಳಲಾಗಿದೆ ಎಂಬ ಮಾಹಿತಿ, ಗ್ರಾಹಕರು ಬಳಸುವ ಉತ್ಪಾದಕರ ಮಾಹಿತಿ, ಐಪಿ ಅಡ್ರಸ್ ಜಿಪಿಎಸ್ ಮಾಹಿತಿ ಸೇರಿದಂತೆ ಸಮಗ್ರ ಮಾಹಿತಿಗಳು ಸೋರಿಕೆಯಾಗಿವೆ. ಒಟ್ಟು 8.2ಟಿಬಿ ಗ್ರಾತ್ರದ ಮಾಹಿತಿ ಸೋರಿಕೆಯಾಗಿದೆ ಎಂದು ದಾಖಲಿಸಲಾಗಿದೆ.

           ಮೊಬಿವಿಕ್ ಕಂಪೆನಿ ಈ ಆರೋಪವನ್ನು ಸಾರಾಸಗಟಾಗಿ ತಳ್ಳಿ ಹಾಕಿದೆ. ಕಂಪೆನಿಯ ವಕ್ತಾರರು ಅಧಿಕೃತ ಪ್ರಕಟಣೆ ನೀಡಿ, ಕೆಲವರು ಪ್ರಚಾರದ ಆಸೆಗಾಗಿ ಭದ್ರತಾ ವಿಶ್ಲೇಷಕರು ಎಂದು ಹೇಳಿಕೊಂಡು ಪದೇ ಪದೇ ಗ್ರಾಹಕರಲ್ಲಿ ಅಪನಂಬಿಕೆ ಹುಟ್ಟಿಸುವಂತಹ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ನಮ್ಮ ಸಂಸ್ಥೆಯಲ್ಲಿ ಯಾವುದೇ ಭದ್ರತೆಯ ಲೋಪವಾಗಿಲ್ಲ. ಬಳಕೆದಾರರ ಮತ್ತು ಕಂಪೆನಿಯ ದತ್ರಾಂಶಗಳು ಸುರಕ್ಷಿತವಾಗಿದೆ ಎಂದಿದ್ದಾರೆ.

           ಆದರೆ, ಇದಕ್ಕೆ ತಿರುಗೇಟು ನೀಡಿರುವ ಭದ್ರತಾ ವಿಶ್ಲೇಷಕರು, ಸುಮಾರು 86 ಸಾವಿರ ಡಾಲರ್ (1.5ಬಿಟ್‍ಕಾಯಿನ್‍ಗೆ) ಮೊಬಿವಿಕ್ ದತ್ತಾಂಶವನ್ನು ಸೋರಿಕೆ ಮಾಡಿದೆ. ಪ್ರಸ್ತುತ ಡಾರ್ಕ್‍ವೆಬ್‍ನಲ್ಲಿ 9,22,24,559ಮಂದಿಯ ಫೋನ್ ನಂಬರ್, ಪಾರ್ಸ್‍ವರ್ಡ್ ಸೇರಿದಂತೆ ಪ್ರಮುಖ ದತ್ತಾಂಶಗಳು ಸುಲಭವಾಗಿ ಸಿಗುತ್ತಿವೆ. ಇದನ್ನು ಬಳಸಿಕೊಂಡು ಹ್ಯಾಕರ್ಸ್‍ಗಳು ಯಾವ ಅನಾಹುತವನ್ನಾದರೂ ಮಾಡಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ದತ್ತಾಂಶ ಲಭ್ಯವಿರುವುದಕ್ಕೆ ಪುರಾವೆ ಎಂಬಂತೆ ಡಾರ್ಕ್‍ವೆಬ್‍ನಲ್ಲಿರು ಸ್ಕೀನ್ ಸಾರ್ಟ್ ಕೂಡ ಫೋಸ್ಟ್ ಮಾಡಿದ್ದಾರೆ. ಇದು ಅಂತರ್ಜಾಲದಲ್ಲಿ ಬಾರೀ ಚರ್ಚೆಗೆ ಗ್ರಾಸವಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries