HEALTH TIPS

ಡೆಲ್ಟಾ ಪ್ಲಸ್​ ಹೊರತಾಗಿಯೂ 4 ಅಪಾಯಕಾರಿ ರೂಪಾಂತರಿಗಳು ಮನುಕುಲವನ್ನು ಕಾಡಲಿದೆ; ಇಲ್ಲಿದೆ ಮಾಹಿತಿ!

             ನವದೆಹಲಿಕೊರೋನಾ ವೈರಸ್​ ಸೃಷ್ಟಿಸಿದ್ದ ಮೊದಲ ಮತ್ತು ಎರಡನೇ ಅಲೆ ಸೃಷ್ಟಿಸಿದ ಅನಾಹುತದಿಂದ ಭಾರತದ ಇನ್ನೂ ಸುಧಾರಿಸಿಕೊಂಡಿಲ್ಲ. ಅಷ್ಟರಲ್ಲೇ ಡೆಲ್ಟಾ ಪ್ಲಸ್ ರೂಪಾಂತರಿ ವೈರಸ್​ ಅಪ್ಪಳಿಸಿರುವುದು ಕೊರೊನಾ ಮೂರನೇ ಅಲೆಯ ಸಾಧ್ಯತೆ ಯ ಕುರಿತು ತಜ್ಞರು ಎಚ್ಚರಿಕೆಯನ್ನು ನೀಡಿದ್ದಾರೆ. ಇದಲ್ಲದೆ ಡೆಲ್ಟಾ ಪ್ಲಸ್ ರೂಪಾಂತರಿಯ ಜೊತೆಗೆ ಇತರ ನಾಲ್ಕು ಕೊರೋನಾ ರೂಪಾಂತರಿಗಳು ಮುಂದಿನ ದಿನಗಳಲ್ಲಿ ಮನುಕುಲಕ್ಕೆ ಅಪಾಯ ತರುವ ಸಾಧ್ಯತೆ ಇದೆ ಎಂದು ತಜ್ಞರು ತಿಳಿಸಿರು ವುದು ಇದೀಗ ಆತಂಕಕ್ಕೆ ಕಾರಣವಾಗಿದೆ. ಅಂತರರಾಷ್ಟ್ರೀಯ ವಿಮಾನಯಾನ ವನ್ನು ಪೂರ್ಣ ಪ್ರಮಾಣದಲ್ಲಿ ಆರಂಭಿಸುವ ಮೊದಲು ಜಗತ್ತನ್ನು ಕಾಡುತ್ತಿರುವ ಇತರ ನಾಲ್ಕು ರೂಪಾಂತರಿ ವೈರಸ್‌ಗಳು ದೇಶವನ್ನು ಪ್ರವೇಶಿಸದಂತೆ ವಿಮಾನ ನಿಲ್ಧಾಣಗಳಲ್ಲಿ ಕಟ್ಟುನಿಟ್ಟಿನ ನಿಗಾ ವಹಿಸುವಂತೆ ತಜ್ಞರು ಸರ್ಕಾರಕ್ಕೆ ಕಠಿಣ ಎಚ್ಚರಿಕೆಯನ್ನು ನೀಡಿದ್ದಾರೆ.

           ಹೊಸದಾಗಿ ಕಾಣಿಸಿಕೊಂಡಿರುವ B.1.617.3, B.1.1.318 ವೇರಿಯಂಟ್‌ಗಳು ಮತ್ತು ಲಾಂಬ್ಡಾ ಮತ್ತು ಕಾಪ್ಪಾ ರೂಪಾಂತರಿಗಳು ಯುರೋಪಿಯನ್ ದೇಶಗಳಲ್ಲಿ ವ್ಯಾಪಕವಾಗಿ ಹರಡುತ್ತಿವೆ ಈ ಕುರಿತು ದೇಶ ಮೊದಲೇ ಎಚ್ಚರಿಕೆಯನ್ನು ವಹಿಸಬೇಕು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
              ಹೈದರಾಬಾದ್‌ನ ಯಶೋಧಾ ಆಸ್ಪತ್ರೆಯ ಹಿರಿಯ ವೈದ್ಯ ಡಾ. ವಿಘ್ನೇಶ್ ನಾಯ್ಡು ಈ ಬಗ್ಗೆ ಮಾಹಿತಿ ನೀಡಿದ್ದು, "ಒಂದು ರೂಪಾಂತರಿ ತಳಿ ಇನ್ನೂ ಬೇರೆ ಬೇರೆ ರೀತಿಯಲ್ಲಿ ಹೊಸ ರೂಪಾಂತರ ಪಡೆದುಕೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಕೊರೊನಾ ವೈರಸ್‌ನ ಮೂಲಸ್ವರೂಪವೇ ಬದಲಾಗಿ ಹೊಸ ಸ್ವರೂಪದಲ್ಲಿ ಕಾಣಿಸಿಕೊಳ್ಳುತ್ತಿರುವುದು ಲಸಿಕೆ ಮತ್ತು ಚಿಕಿತ್ಸಾ ವಿಧಾನಗಳ ಪರಿಣಾಮವನ್ನು ಕುಂಠಿತಗೊಳಿಸುತ್ತಿವೆ" ಎಂದು ಅಭಿಪ್ರಾಯಪಟ್ಟಿದ್ದಾರೆ.
            ರೂಪಾಂತರಿ ತಳಿಗಳು ವೈರಸ್‌ನ ಹರಡುವಿಕೆಯ ಸಾಮರ್ಥ್ಯವನ್ನು ಅಗಾಧಗೊಳಿಸಿವೆ. ಮೂಲ ವೈರಸ್‌ಗಿಂತ ರೂಪಾಂತರಿಗಳು ಹಲವು ಪಟ್ಟು ಹೆಚ್ಚು ವೇಗವಾಗಿ ಹರಡುವ ಸಾಮರ್ಥ್ಯಗಳನ್ನು ಪಡೆದುಕೊಂಡಿರುವುದು ಗಮನಕ್ಕೆ ಬಂದಿದೆ ಎಂದು ಡಾ. ನಾಯ್ಡು ಎಚ್ಚರಿಕೆ ನೀಡಿದ್ದಾರೆ.
            ಭಾರತ ಸೇರಿದಂತೆ 16 ದೇಶಗಳಲ್ಲಿನ ಶೇ.25ರಷ್ಟು ಕೊರೋನಾ ಪ್ರಕರಣಗಳು ಡೆಲ್ಟಾ ಪ್ಲಸ್‌ಗೆ ಸಂಬಂಧಿಸಿದ್ದಾಗಿದೆ. ಆಸ್ಟ್ರೇಲಿಯಾ, ಬಹರಿನ್, ಬಾಂಗ್ಲಾದೇಶ್, ಭಾರತ, ಇಂಡೊನೇಷಿಯಾ, ಇಸ್ರೇಲ್, ಜಪಾನ್, ಕೀನ್ಯಾ, ಮಯನ್ಮಾರ್, ಪೆರು, ರಷ್ಯಾ, ಪೋರ್ಚುಗಲ್, ಬ್ರಿಟನ್ , ಸಿಂಗಪೋರ್, ಅಮೆರಿಕ ದೇಶಗಳಲ್ಲಿ ಡೆಲ್ಟಾ ಪ್ಲಸ್‌ ರೂಪಾಂತರಿಯು ತೀವ್ರವಾಗಿ ಹರಡುತ್ತಿರುವುದು ಪತ್ತೆಯಾಗಿದೆ.
            ಕೋವಾಕ್ಸಿನ್ ಮತ್ತು ಕೋವಿಶೋಲ್ಡ್‌ ಲಸಿಕೆಗಳು ಅಲ್ಪಾ, ಬೀಟಾ, ಗಾಮಾ ಮತ್ತು ಡೆಲ್ಟಾ ರೂಪಾಂತರಿಗಳ ವಿರುದ್ಧ ಪರಿಣಾಮಕಾರಿಯಾಗಿ ಕೆಲಸಮಾಡುತ್ತವೆ. ಆದರೆ ಡೆಲ್ಟಾ ಪ್ಲಸ್‌ ವೇರಿಯಂಟ್ ವಿರುದ್ಧ ಲಸಿಕೆಗಳ ಪ್ರಭಾವ ಕಡಿಮೆಯಾಗಿರುವುದು ಸಂಶೊಧನೆಯಿಂದ ಬಹಿರಂಗಗೊಂಡಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನ ಸಂಸ್ಥೆ ( ICMR)ಯ ಮುಖ್ಯ ನಿರ್ದೇಶಕರಾದ ಡಾ. ಬಲರಾಮ್ ಭಾರ್ಗವ್‌ ತಿಳಿಸಿದ್ದಾರೆ.
                    ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿದ ಡಾ. ಬಲರಾಮ್ ಭಾರ್ಗವ್ ಅವರು, "ಅಲ್ಪಾ, ಬೀಟಾ, ಗಾಮಾ, ಗಾಮಾ ಮತ್ತು ಡೆಲ್ಟಾ ರೂಪಾಂತರಿಗಳು ಹೆಚ್ಚು ಅಪಾಯಕಾರಿಯಾಗಿವೆ. ಡೆಲ್ಟಾ ರೂಪಾಂತರಿಯ ಉಪ ವೈರಸ್‌ ಡೆಲ್ಟಾ ಪ್ಲಸ್ ಈ ಸಂದರ್ಭದಲ್ಲಿ ಹೆಚ್ಚು ಆತಂಕವನ್ನು ಸೃಷ್ಟಿಸಿದೆ" ಎಂದು ತಿಳಿಸಿದ್ದಾರೆ.
         ಮನುಕುಲವನ್ನು ಕಾಡಲಿರುವ ಉಳಿದ 3 ರೂಪಾಂತರಿ ವೈರಸ್​ಗಳ ಮಾಹಿತಿ ಇಲ್ಲಿದೆ:
         1. ಡೆಲ್ಟಾ ಕುಟುಂಬ
ಡೆಲ್ಟಾ ಕುಟುಂಬವು ಮೊದಲು ಭಾರತದಲ್ಲಿ ಹುಟ್ಟಿಕೊಂಡಿತು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದ್ದರಿಂದ, ಇತ್ತೀಚಿನ ಎರಡು ರೂಪಾಂತರಗಳು ದೇಶದಲ್ಲಿ ವ್ಯಾಪಕವಾಗಿ ಹರಡಿವೆ. ಕಪ್ಪಾ (ಬಿ .1.617.1) ರೂಪಾಂತರ, ಡೆಲ್ಟಾ (ಬಿ .1.617.2) ಮತ್ತು ಅದರ ಒತೆಗೆ ಹುಟ್ಟಿದ(ಬಿ .1.617.3) ಎಸ್‌ಎಆರ್​ಎಸ್​-ಕೋವಿ -2, ಬಿ .1.617 ರ ಡಬಲ್ ರೂಪಾಂತರಿತ ರೂಪದಿಂದ ಬಂದಿದ್ದು, ಇದನ್ನು ಮೊದಲು ಮಹಾರಾಷ್ಟ್ರದಲ್ಲಿ ಗುರುತಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಕಪ್ಪಾ ಅಡಿಯಲ್ಲಿ ಬಿ .1.617.3 ರೂಪಾಂತರವನ್ನು ಕ್ಲಬ್ ಮಾಡಿದೆ.
            ಜೂನ್ 22 ರವರೆಗೆ ವಿಶ್ವಾದ್ಯಂತದ ಒಟ್ಟು 161 ರಲ್ಲಿ ಬಿ .1.617.3 ರೂಪಾಂತರದ 148 ಜೀನೋಮ್ ಅನುಕ್ರಮಗಳನ್ನು ಭಾರತ ವರದಿ ಮಾಡಿದೆ. ಇದಲ್ಲದೆ, ಕಪ್ಪಾ ರೂಪಾಂತರದ 3,083 ಅನುಕ್ರಮಗಳನ್ನು ಭಾರತವು ವರದಿ ಮಾಡಿದೆ.
          2. ಬಿ .1.1.318 ರೂಪಾಂತರ ವೈರಸ್
B.1.1.318 ರೂಪಾಂತರವು E484K ಯಿಂದ ರೂಪಾಂತರಗೊಂಡಿದೆ. ಇದನ್ನು ಮೊದಲು ದಕ್ಷಿಣ ಆಫ್ರಿಕಾದ SARS-CoV-2 ಸ್ಟ್ರೈನ್ (B.1.351) ನಲ್ಲಿ ಗುರುತಿಸಲಾಗಿದೆ. ಇದು ಬ್ರೆಜಿಲ್‌ನಿಂದ ಹೊರಹೊಮ್ಮಿದ ರೂಪಾಂತರದಲ್ಲಿಯೂ ಕಂಡುಬರುತ್ತದೆ (ಬಿ .1.1.28).
GISAID ದತ್ತಾಂಶದ ಪ್ರಕಾರ, ಉದಯೋನ್ಮುಖ ರೂಪಾಂತರದ ಉಪಸ್ಥಿತಿಯು ಭಾರತದಲ್ಲಿ ಕಡಿಮೆ ಇದೆ, ಇದು ವಿಶ್ವದಾದ್ಯಂತ ವರದಿಯಾದ ಒಟ್ಟು 173 ರಲ್ಲಿ ಎರಡು ಜೀನೋಮ್ ಅನುಕ್ರಮಗಳನ್ನು ಹೊಂದಿದೆ.

            GISAID ಎನ್ನುವುದು ಜಾಗತಿಕ ವಿಜ್ಞಾನದ ಉಪಕ್ರಮವಾಗಿದ್ದು ಅದು ಎಲ್ಲಾ ಇನ್ಫ್ಲುಯೆನ್ಸ್ ವೈರಸ್‌ಗಳ ಜೀನೋಮಿಕ್ ಡೇಟಾ ಮತ್ತು ಕೊರೊನಾವೈರಸ್‌ಗೆ ಮುಕ್ತ ಪ್ರವೇಶವನ್ನು ಒದಗಿಸುತ್ತದೆ.
             3. ಲ್ಯಾಂಬ್ಡಾ ರೂಪಾಂತರಿ
    ನ್ಯೂಸ್ ಮೆಡಿಕಲ್ ಲೈಫ್ ಸೈನ್ಸಸ್ ಪ್ರಕಾರ, ಲ್ಯಾಂಬ್ಡಾ (ಸಿ .37) ವಂಶಾವಳಿಯು ದಕ್ಷಿಣ ಬ್ರೆಜಿಲ್‌ನಲ್ಲಿ ಮೊದಲು ವರದಿಯಾಗಿದೆ. ಇದು ಪೆರುವಿನಲ್ಲಿ ಹೆಚ್ಚು ಪ್ರಚಲಿತದಲ್ಲಿದೆ ಮತ್ತು ಇದನ್ನು ಉತ್ತರ ಮತ್ತು ದಕ್ಷಿಣ ಅಮೆರಿಕಾ, ಯುರೋಪ್ ಮತ್ತು ಓಷಿಯಾನಿಯಾದಲ್ಲಿ ಗುರುತಿಸಲಾಗಿದೆ.
               ಡಬ್ಲ್ಯುಎಚ್‌ಒ ಇದನ್ನು 2021 ರ ಜೂನ್ 15 ರಂದು ‘ಆಸಕ್ತಿಯ ರೂಪಾಂತರ’ ಎಂದು ವರ್ಗೀಕರಿಸಿತು. ಆದರೆ ಹಲವಾರು ವರದಿಗಳು ಲ್ಯಾಂಬ್ಡಾ ಸ್ಟ್ರೈನ್ ಸಹ ‘ಕಾಳಜಿಯ ರೂಪಾಂತರ’ ಆಗುವ ಸಾಮರ್ಥ್ಯವನ್ನು ಹೊಂದಿದೆ ಎಂದು ಊಹಿಸಲಾಗಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries