ಕೇರಳದಲ್ಲಿ ಹೆಚ್ಚಳಗೊಂಡ ಹೆಣ್ಣು ಮಕ್ಕಳ ಜನನ ಪ್ರಮಾಣ: ಪ್ರತಿ 1000 ಪುರುಷರಿಗೆ 968 ಮಹಿಳೆಯರು: ಅಂಕಿಅಂಶ ಬಿಡುಗಡೆ

 

            ರಾಜ್ಯದಲ್ಲಿ 2020ರ ವಾರ್ಷಿಕ ಅಂಕಿಅಂಶಗಳ ಪ್ರಕಾರ ಹೆಣ್ಣು ಶಿಶುಗಳ ಜನನ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಹೆಣ್ಣು ಮತ್ತು ಪುರುಷ ಅನುಪಾತವು 1000 ಪುರುಷರಿಗೆ 968 ಮಹಿಳೆಯರು ಎಂಬ ಗ್ರಾಫ್ ನಂತಿದೆ. ಇದು ದಶಕದಲ್ಲೇ ಗರಿಷ್ಠ ದರವಾಗಿದೆ.

                  2019, 2018 ಮತ್ತು 2011 ರಲ್ಲಿ ಅನುಕ್ರಮವಾಗಿ 1000 ಪುರುಷರಿಗೆ 960, 963 ಮತ್ತು 939 ರಷ್ಟಿತ್ತು. 2020ರಲ್ಲಿ ಒಟ್ಟು 4,46,891 ಮಕ್ಕಳು ಜನಿಸಿದ್ದಾರೆ. ಈ ಪೈಕಿ 2,27,053 ಗಂಡು ಮಕ್ಕಳು ಮತ್ತು 2,19,809 ಹೆಣ್ಮಕ್ಕಳು ಜನಿಸಿದ್ದಾರೆ. 29 ಮಕ್ಕಳ ಲಿಂಗವನ್ನು ದಾಖಲಿಸಲಾಗಿಲ್ಲ. ನಗರ ಪ್ರದೇಶಗಳಲ್ಲಿ ಹೆಚ್ಚಿನ ಜನನ ಪ್ರಮಾಣ ದಾಖಲಾಗಿದೆ.

             2020ರಲ್ಲಿ ಗ್ರಾಮೀಣ ಪ್ರದೇಶದಲ್ಲಿ 1,38,910 ಶಿಶುಗಳು ಜನಿಸಿದ್ದರೆ, ನಗರ ಪ್ರದೇಶದಲ್ಲಿ 3,07,981 ಶಿಶುಗಳು ಜನಿಸಿವೆ. ಹೆಚ್ಚಿನ ಜನನಗಳು ಜೂನ್ ಮತ್ತು ನವೆಂಬರ್‍ನಲ್ಲಿ ಸಂಭವಿಸಿವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ನಡೆದ ಒಟ್ಟು ಹೆರಿಗೆಗಳಲ್ಲಿ ಶೇ.57.69 ರಷ್ಟು ಶಸ್ತ್ರಚಿಕಿತ್ಸಾರಹಿತವಾಗಿವೆ. ಖಾಸಗಿ ಆಸ್ಪತ್ರೆಗಳಲ್ಲಿ ಶೇ.42.93ರಷ್ಟು ಶಿಶುಗಳು ಶಸ್ತ್ರಚಿಕಿತ್ಸೆಯ ಮೂಲಕ ಜನಿಸಿವೆ. ಗರ್ಭಿಣಿಯಾಗುವ 19 ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರ ಸಂಖ್ಯೆಯಲ್ಲಿಯೂ ಇಳಿಮುಖವಾಗಿದೆ. 2019 ರಲ್ಲಿ ಇದು 20,998 ಮತ್ತು 2020 ರಲ್ಲಿ 17,202 ಕ್ಕೆ ಕಡಿಮೆಯಾಗಿದೆ.

                ಇಂಟರ್ ನ್ಯಾಶನಲ್ ಇನ್‍ಸ್ಟಿಟ್ಯೂಟ್ ಆಫ್ ಮೈಗ್ರೇಷನ್ ಅಂಡ್ ಡೆವಲಪ್ ಮೆಂಟ್‍ನ ಅಧ್ಯಕ್ಷ ಇರುದಯ ರಾಜನ್, ಇಡೀ ಜನಸಂಖ್ಯೆಯ ಲಿಂಗ ಅನುಪಾತವು ಜನನದ ಲಿಂಗ ಅನುಪಾತಕ್ಕಿಂತ ಭಿನ್ನವಾಗಿರಬಹುದು ಏಕೆಂದರೆ ಮಹಿಳೆಯರು ಪುರುಷರಿಗಿಂತ ಹೆಚ್ಚು ಕಾಲ ಬದುಕುತ್ತಾರೆ ಎಂದಿರುವರು.

              ನವೆಂಬರ್ 2021 ರಲ್ಲಿ ಬಿಡುಗಡೆಯಾದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ (ವರ್ಷ 2019-21), ದೇಶದ ಸ್ತ್ರೀ-ಪುರುಷ ಅನುಪಾತವು 1000 ಪುರುಷರಿಗೆ 1020 ಮಹಿಳೆಯರು. ಆದರೆ ಮಹಿಳೆಗೆ ಜನಿಸಿದ ಶಿಶುಗಳ ಸರಾಸರಿ ಸಂಖ್ಯೆ ಎರಡಕ್ಕೆ ಇಳಿದಿದೆ ಎಂದು ಅದು ಪತ್ತೆಮಾಡಿದೆ. 2015-16ರಲ್ಲಿ ರಾಷ್ಟ್ರೀಯ ಫಲವತ್ತತೆ ದರ 2.2 ಆಗಿತ್ತು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


grama rajya

Qries