ಅಮೆರಿಕದಲ್ಲಿದ್ದ ಭಾರತೀಯ ವಿದ್ಯಾರ್ಥಿನಿ 3 ವರ್ಷಗಳಿಂದ ನಾಪತ್ತೆ! ಕುಟುಂಬಸ್ಥರಿಂದ ತನಿಖಾ ಸಂಸ್ಥೆ ಮೊರೆ

            ನ್ಯೂಯಾರ್ಕ್​: ಅಮೆರಿಕಗೆ ವಿದ್ಯಾಭ್ಯಾಸಕ್ಕಾಗಿ ತೆರಳಿದ ಭಾರತೀಯ ವಿದ್ಯಾರ್ಥಿನಿ ಕಳೆದ 3 ವರ್ಷಗಳಿಂದ ನಾಪತ್ತೆಯಾಗಿರುವ ಘಟನೆ ನಡೆದಿದ್ದು, ಈಕೆಯನ್ನು ಹುಡುಕಿಕೊಡಿ ಎಂದು ಕುಟುಂಬಸ್ಥರು ಅಮೆರಿಕದ ತನಿಖಾ ಸಂಸ್ಥೆ ಮೊರೆ ಹೋಗಿದ್ದಾರೆ.

            28 ವರ್ಷದ ಮಯೂಶಿ ಭಗತ್​​ ಕಾಣೆಯಾದ ಯುವತಿ. 2019 ಏಪ್ರಿಲ್​ 29ರಂದು ಕೊನೇ ಬಾರಿ ಕಾಣಿಸಿಕೊಂಡ ಈಕೆ ಈವರೆಗೆ ಎಲ್ಲಿದ್ದಾರೆ ಎಂಬುದೇ ತಿಳಿದುಬಂದಿಲ್ಲ. ನಾಪತ್ತೆಯಾದ ದಿನದಂದು ನ್ಯೂಯಾರ್ಕ್​ನ ಜೆರ್ಸಿ ಸಿಟಿಯಲ್ಲಿ ಅಪಾರ್ಟ್​ಮೆಂಟ್​ನಿಂದ ಹೊರಹೋದ ಈಕೆ ಈವರೆಗೆ ಪತ್ತೆಯಾಗಿಲ್ಲ.

                ಕಲರ್​ಫುಲ್​ ಪೈಜಾಮ ಮತ್ತು ಕಪ್ಪು ಟಿ ಶರ್ಟ್​​ ಧರಿಸಿ ಹೊರಹೋದ ಈಕೆ ನಂತರ ಎಲ್ಲಿಗೆ ಹೋದಳು ಎಂಬುದೇ ಯಾರಿಗೂ ಗೊತ್ತಿಲ್ಲ. ಮೇ 1 2019ರಲ್ಲೇ ಈಕೆ ನಾಪತ್ತೆಯಾಗಿರುವ ಬಗ್ಗೆ ದೂರು ಕೂಡ ದಾಖಲಿಸಲಾಗಿದ್ದು, ಈವರೆಗೂ ಈಕೆಯನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಇದೀಗ ಸ್ವತಃ ಅಮೆರಿಕ ತನಿಖಾ ಸಂಸ್ಥೆಯೇ ಈ ಬಗ್ಗೆ ಮಾಹಿತಿ ನೀಡಿದೆ.

             2016ರಲ್ಲಿ ಅಮೆರಿಕಗೆ ಬಂದಿದ್ದ ಮಯೂಶಿ ಭಗತ್​ ಇಲ್ಲಿನ ಹ್ಯಾಂಪ್​ಶೈರ್​ ಮತ್ತು ನ್ಯೂಯಾರ್ಕ್​​ ಇನ್ಸ್​ಸ್ಟಿಟ್ಯೂಟ್​ ಆಫ್​ ಟೆಕ್ನಾಲಜಿಯಲ್ಲಿ ದಾಖಲಾತಿ ಪಡೆದಿದ್ದರು. ಆ ಬಳಿಕ ಅಲ್ಲಿಯೇ ವಾಸವಿದ್ದರು. ಇದೀಗ ಮೂರು ವರ್ಷಗಳಿಂದ ನಾಪತ್ತೆಯಾಗಿರುವ ಮಗಳನ್ನು ನೆನೆದು ಕುಟುಂಬ ಕಣ್ಣೀರಲ್ಲಿ ಕೈತೊಳೆಯುತ್ತಿದೆ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


grama rajya

Qries