HEALTH TIPS

ಕಾಸರಗೋಡು ಬ್ಲಾಕ್ ಮಟ್ಟದ ಆರೋಗ್ಯ ಮೇಳ: ಆಕರ್ಷಣೆಗೆ ಕಾರಣವಾದ ಮೆರವಣಿಗೆ

           ಕಾಸರಗೋಡು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆರೋಗ್ಯ ಯೋಜನೆಗಳು ಮತ್ತು ಸೇವೆಗಳನ್ನು ಜನತೆಗೆ ತಲುಪಿಸುವ ನಿಟ್ಟಿನಲ್ಲಿ ಕಾಸರಗೋಡು ಬ್ಲಾಕ್ ಪಂಚಾಯಿತಿ ವತಿಯಿಂದ ಆರೋಗ್ಯ ಮೇಳ  ಶನಿವಾರ  ಚೆರ್ಕಳ ಐಮ್ಯಾಕ್ಸ್ ಆಡಿಟೋರಿಯಂನಲ್ಲಿ ನಡೆಯಿತು. ಕೇರಳ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.  ಕಾರ್ಯಕ್ರಮದ ಪೂರ್ವಭಾವಿಯಾಗಿ ಚೆರ್ಕಳ ಬಸ್ ನಿಲ್ದಾಣದಿಂದ ಸಭಾಂಗಣ ವರೆಗೆ ವೈವಿಧ್ಯಪೂರ್ಣ ಮೆರವಣಿಗೆ ನಡೆಯಿತು. ಸಿಂಗಾರಿ ಚೆಂಡೆಮೇಳ, ಯಕ್ಷಗಾನ ವೇಷಧಾರಿಗಳು, ಮಹಾಬಲಿ ಪಾತ್ರಧಾರಿ ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿ, ಕುಟುಂಬಶ್ರೀ ಸದಸ್ಯರು, ಶುಚಿತ್ವ ಮಿಷನ್ ಸದಸ್ಯರು ಮೆರವೀಗೆಯಲ್ಲಿ ಪಾಲ್ಗೊಂಡಿದ್ದರು. ಶಾಸಕ ಸಿ,ಎಚ್ ಕಕುಞಂಬು ಮೇಳ ಉದ್ಘಾಟಿಸಿದರು.  

          ಕಾಸರಗೋಡು ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಸೈಮಾ ಸಿ.ಎ ಅಧ್ಯಕ್ಷತೆ ವಹಿಸಿದ್ದರು. ಜನಪ್ರತಿನಿಧಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳು, ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.  ಮೇಳದಲ್ಲಿ ವಿಕಲಚೇತನ ವ್ಯಕ್ತಿಗಳಿಗೆ ವಿಶಿಷ್ಟ ಗುರುತಿನ ಚೀಟಿ(ಯುಡಿಐಡಿ)ಗೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರಕ್ಕಾಗಿ ವಿಶೇಷ ಶಿಬಿರ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯಿಂದ ಜಾರಿಗೊಳಿಸಲಾದ ವಿವಿಧ ಯೋಜನೆಗಳಲ್ಲಿ ಮಾಡರ್ನ್ ಮೆಡಿಸಿನ್, ಆಯುರ್ವೇದ, ಹೋಮಿಯೋ, ಯುನಾನಿ ವೈದ್ಯಕೀಯ ಶಿಬಿರಗಳು ಸೇರಿದಂತೆ 20ಕ್ಕೂ ಹೆಚ್ಚು ಪ್ರದರ್ಶನ ಮಳಿಗೆಗಳು ಕಾರ್ಯಾಚರಿಸಿತು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries