HEALTH TIPS

ಮುಳುಗಿದ ಸೇತುವೆಯ ಮೂಲಕ ಬಸ್ ಸವಾರಿ; ವಿಡಿಯೋ ವೈರಲ್: ದಂಡ ವಿಧಿಸಿದ ಸಂಚಾರಿ ಪೋಲೀಸರು

                ಪಾಲಕ್ಕಾಡ್: ಮುಳುಗಿದ ಸೇತುವೆಯ ಮೂಲಕ ಸಾಹಸಿಕವಾಗಿ ಬಸ್ ಚಲಾಯಿಸಿದ್ದಕ್ಕೆ ಸಂಚಾರ ಪೋಲೀಸರು ದಂಡ ವಿಧಿಸಿದ್ದಾರೆ. ಮನ್ನಾಕ್ರ್ಕಾಡ್ ಟ್ರಾಫಿಕ್ ಪೋಲೀಸರು ಪ್ರಯಾಣಿಕರಿಗೆ ಅಪಾಯವನ್ನುಂಟುಮಾಡುವ ಚಾಲನೆಗಾಗಿ ದಂಡ ವಿಧಿಸಿದ್ದಾರೆ.

             ಪಾಲಕ್ಕಾಡ್ ಚೆಕ್ಕರಾಕಡವ್ ಪಂಪ್ರಾ ಸೇತುವೆ ಮೂಲಕ ಸಂಚರಿಸಿದ ಬಸ್ ಮತ್ತು ಜೀಪುಗಳಿಗೆ ಪೋಲೀಸರು ದಂಡ ವಿಧಿಸಿದ್ದಾರೆ. ಏತನ್ಮಧ್ಯೆ, ಮುಳುಗಿದ ಸೇತುವೆಯ ಮೂಲಕ ಬಸ್ ಚಾಲನೆ ಮಾಡುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

               ಈ ನಡುವೆ ಬೆಟ್ಟದ ನೀರಿನಲ್ಲಿ ಹರಿಯುವ ಮರದ ದಿಮ್ಮಿಗಳ ಮೇಲೆ ಜಿಗಿಯುವವರ ವಿರುದ್ಧವೂ ಪೋಲೀಸರು ಕ್ರಮ ಕೈಗೊಂಡಿದ್ದಾರೆ. ರಭಸದಿಂದ ಹರಿಯುವ ನೀರಿಗೆ ಹಾರಿ ಪ್ರಾಣ ಅಪಾಯಕ್ಕೆ ಸಿಲುಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪೋಲೀಸರು ಸಿದ್ಧತೆ ನಡೆಸಿದ್ದಾರೆ. ಮಲಪ್ಪುರಂ ಜಿಲ್ಲೆಯ ವಿವಿಧಡೆಗಳಲ್ಲಿ 'ಮುಲ್ಲಂಕೊಲ್ಲಿ ವೇಲಾಯುಧರ್ ಗಳು'( ಮರದ ಧಿಮ್ಮಿಗಳನ್ನು ಎಸೆದು ಜಾಲಿಯಾಡುವವರು) ಕಂಡುಬಂದಿದ್ದು ಕಠಿಣ ಕ್ರಮಕ್ಕೆ ಪೋಲೀಸರು ಕ್ರಮಗೊಂಡಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries