HEALTH TIPS

ಎಡನೀರಿನಲ್ಲಿ ರಂಜಿಸಿದ ಸಿರಿಬಾಗಿಲು ಪ್ರತಿಷ್ಠಾನದ ಯಕ್ಷಗಾನ ನಾಗೋದ್ದರಣ


               ಬದಿಯಡ್ಕ: ಜಗದ್ಗುರು ಶ್ರೀ ಶಂಕರಾಚಾರ್ಯ.ಎಡನೀರು ಸಂಸ್ಥಾನಾಧೀಶ್ವರ  ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ದ್ವಿತೀಯ ಚಾತುರ್ಮಾಸ್ಯ ಸಂದರ್ಭದಲ್ಲಿ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿμÁ್ಠನದ ವತಿಯಿಂದ ಬುಧವಾರ ಸಂಜೆ ನಾಗೋದ್ದರಣ ಪ್ರಸಂಗದ ಯಕ್ಷಗಾನ ಪ್ರದರ್ಶನ ನಡೆಯಿತು. ಪ್ರಸಿದ್ದ ಕಲಾವಿದರ ಕೂಡುವಿಕೆಯಿಂದ ನಡೆದ ನಾಗೋದ್ದರಣ ಪ್ರಸಂಗ ಯಕ್ಷಗಾನಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ.
               ಆರಂಭದಲ್ಲಿ ಸರ್ಪಾದಿಗಳಾಗಿ ಮಣಿಪಾಲ ಕೆ.ಯಂ.ಸಿ.ಯ ಪ್ರಸಿದ್ದ ವೈದ್ಯ  ಡಾ.ಸುನೀಲ್ ಮುಂಡ್ಕೂರು, ಕಟೀಲು ಮೇಳದ ಕಲಾವಿದ ಡಾ.ಶ್ರುತಕೀರ್ತಿರಾಜ್, ಕಿಶೋರ್ ಕೂಡ್ಲು, ಉಪಾಸನ ಮತ್ತು ಕಿಶನ್ ನೆಲ್ಲಿಕ್ಕಟ್ಟೆ, ಗರುಡನಾಗಿ ಹರಿನಾರಾಯಣ ಎಡನೀರು, ಕಾಳಿಂಗನಾಗಿ ಹರೀಶ್ ಶಟ್ಟಿ ಮಣ್ಣಾಪು, ಕಾಳಿಂಗ ದೂತ ಬಾಲಕೃಷ್ಣ ಮಣಿಯಾಣಿ ಮವ್ವಾರು ರಂಜಿಸಿದರು. ಮತ್ಸ್ಯರಾಜನಾಗಿ ಹಿರಿಯ ಕಲಾವಿದ ವಸಂತ ಗೌಡ ಕಾಯರ್ತಡ್ಕ, ಮತ್ಸ್ಯಕನ್ಯೆಯರಾಗಿ ಅರುಣ್ ಕೋಟ್ಯಾನ್, ಸಂಜಯ ಪೂಜಾರಿ, ಸೌಭರಿ ಋಷಿ ಯಾಗಿ ಬಾಲಕೃಷ್ಣ ಮಣಿಯಾಣಿ ಮವ್ವಾರು ಭಾಗವಹಿಸಿದರು. ಶ್ರೀಕೃಷ್ಣ ನಾಗಿ ಉಡುಪಿಯ ಕುಮಾರಿ ವಿಂದ್ಯಾ ಆಚಾರ್ಯ, ಬಲರಾಮನಾಗಿ ವನ್ಯಶ್ರೀ ಉಡುಪಿ, ಗೋಪಾಲಕನಾಗಿ ಪೆರುವೂಡಿ ಸುಬ್ರಹ್ಮಣ್ಯ ಭಟ್ ರಂಜಿಸಿದರು. ದಕ್ಷಿಣಾಮೂರ್ತಿ ಶ್ರೀ ಗೋಪಾಲಕೃಷ್ಣ ದೇವರ ಸನ್ನಿದಾನದದಲ್ಲಿ ಪೂಜ್ಯ ಶ್ರೀಗಳವರ ಆಶೀರ್ವಾದದಿಂದ ಯಶಸ್ವಿ ಉತ್ತಮ ಪ್ರದರ್ಶನವಾಗಿ ರಂಜಿಸಿತು. ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದ ಬೃಹತ್ ಯೋಜನೆ ಕಾರ್ಯಗತ ಗೊಳಿಸುವ ಶತಪ್ರಯತ್ನದಲ್ಲಿರುವ ಸಿರಿಬಾಗಿಲು ಪ್ರತಿμÁ್ಠನದ ಸಂಯೋಜನೆಯು ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries