ಸಾಮೂಹಿಕ ಅತ್ಯಾಚಾರ: ಮಗುವಿಗೆ ಜನ್ಮ ನೀಡಿದ ಯುವತಿ: ಇಂಟೆಲಿಜೆನ್ಸ್‍ನಿಂದ ತನಿಖೆ           
            ಕುಂಬಳೆ: ಸಾಮೂಹಿಕ ಅತ್ಯಾಚಾರದಿಂದ ಗರ್ಭಿಣಿಯಾಗಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಹಿಂದುಳಿದ ವಿಭಾಗಕ್ಕೊಳಪಟ್ಟ 38ರ ಹರೆಯದ ಯುವತಿಗೆ ಜನರಲ್ ಆಸ್ಪತ್ರೆಯಲ್ಲಿ  ಹೆರಿಗೆಯಾಗಿದ್ದು, ಆರೋಪಿಗಳ ಪತ್ತೆಕಾರ್ಯ ಇನ್ನೂ ಸಾಧ್ಯವಾಗಿಲ್ಲ.
ಗರ್ಭಿಣಿಯಾಗಿ ನಾಲ್ಕು ತಿಂಗಳ ನಂತರ ಲೈಂಗಿಕ ಕಿರುಕುಳಕ್ಕೊಳಗಾದ ವಿಷಯ ಯುವತಿ ಮನೆಯವರಿಗೆ ತಿಳಿದಿದ್ದು, ಈ ಬಗ್ಗೆ ಪೊಲೀಸ್ ಆಗಲಿ, ಸಾಮಾಜಿಕ ಕಲ್ಯಾಣ ಇಲಾಖೆಯಾಗಲಿ ಕೇಸು ದಾಖಲಿಸಲು ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂಬ ದೂರು ವ್ಯಾಪಕವಾಗಿದೆ. ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಅಂಧ ಹಾಗೂ ಅಸೌಖ್ಯಪೀಡಿತರು ಒಳಗೊಂಡ ಮನೆ ಇದಾಗಿದೆ.  
              ತಿಂಗಳುಗಳ ಹಿಂದೆ ಯುವತಿ ಮಾನಸಿಕ ಅಸೌಖ್ಯಪೀಡಿತರಾಗಿರುವುದರಿಂದ ಪೊಲೀಸ್ ಹಾಗೂ ಸಾಮಾಜಿಕ ಕಲ್ಯಾಣ ಇಲಾಖೆ ಅಧಿಕಾರಿಗಳು ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ನಡೆಸಿದಾಗ ಗರ್ಭಿಣಿಯಾಗಿರುವ ಮಾಹಿತಿ ಹೊರಬಂದಿತ್ತು. ಈಕೆಗೆ ಮನೋಚಿಕಿತ್ಸೆ ನೀಡಲು ಅಂದು ವೈದ್ಯರು ಶಿಫಾರಸು ಮಾಡಿದ್ದರು. ಯುವತಿ ಮಗುವಿಗೆ ಜನ್ಮ ನೀಡಿರುವ ವಿಷಯದಲ್ಲಿ ಇಂಟೆಲಿಜೆನ್ಸ್ ವಿಭಾಗ ಮಧ್ಯ ಪ್ರವೇಶಿಸಿ ತನಿಖೆ ಆರಂಭಿಸಿದೆ.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


grama rajya

Qries