ಕೇವಲ ಪಾರಿವಾಳ ಮಾತ್ರ ಹಾರಾಡಿದರೆ ಸಾಕೇ?: ಕಣ್ಣೂರು ನಗರ ಮಧ್ಯದಲ್ಲಿ ಪ್ರತಿಮೆ ಮೇಲೆ ಕುಳಿತು ಕುಡುಕನ ಉಚಿತ ಪ್ರದರ್ಶನ

     

   
              ಕಣ್ಣೂರು: ಕುಡಿದ ಮತ್ತಿನಲ್ಲಿ ಹುಚ್ಚು ಪ್ರದರ್ಶಿಸುವ ಕೋಪೆÇೀದ್ರಿಕ್ತರು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಅಂತಹದೊಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸ್ಥಳೀಯರನ್ನು ನಗೆಗಡಲಲ್ಲಿ ತೇಲಿಸಿದ ಘಟನೆ ಕಣ್ಣೂರಿನಲ್ಲಿ ನಡೆದಿದೆ.
      ಕುಡಿತದ ಅಮಲಿನಲ್ಲಿ ಪಾರಿವಾಳದ ಪ್ರತಿಮೆಯನ್ನು ಏರಿ ಕುಳಿತುಕೊಂಡು ಹಲಬಿದ ಪ್ರಸಂಗ ವೈರಲ್ ಆಗಿದೆ.  ಕಣ್ಣೂರು ಕ್ಯಾಲ್ಟೆಕ್ಸ್ ಜಂಕ್ಷನ್ ನಲ್ಲಿ ಯುವಕನ ಏಕವ್ಯಕ್ತಿ  ಪ್ರದರ್ಶನ. ಸ್ಥಳೀಯರಿಗೆ ಹಾಗೂ ಪೋಲೀಸರಿಗೆ ಗಂಟೆಗಟ್ಟಲೆ ತಲೆನೋವನ್ನುಂಟು ಮಾಡಿತು.


        ಭಾನುವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ವೀಡಿಯೊದಲ್ಲಿ, ಆ ವ್ಯಕ್ತಿ  ಪಾರಿವಾಳದ ಪ್ರತಿಮೆಯ ಮೇಲೆ ಕುಳಿತು ಹಾದುಹೋಗುವ ವಾಹನಗಳತ್ತ ಕೈ ಬೀಸುತ್ತಿರುವುದನ್ನು ಕಾಣಬಹುದು. ನಡುನಡುವೆ ಮೂರ್ತಿಯ ಮೇಲೆ ನೆಟ್ಟಗೆ ನಿಂತು ಮೀಸೆ ತಿರುವುತ್ತ್ತಾನೆ. ಹಲವಾರು ಗಂಟೆಗಳ ಕಾಲ ನಗರ ಕೇಂದ್ರದಲ್ಲಿ ಪ್ರದರ್ಶನ ನೀಡುತ್ತಿದ್ದ ಆತನನ್ನು ಕೊನೆಗೂ ಹರಸಾಹಸದಿಂದ ಪೋಲೀಸರು ಕೆಳಗಿಳಿಸಿದರು.
        ವೀಡಿಯೋ  ಗಮನಿಸಬಹುದು: വീഡിയോ കാണാം,

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


grama rajya

Qries