HEALTH TIPS

ಹೃದಯ ಕಾಯಿಲೆ ಹೆಚ್ಚಾಗಲು ಏನು ಕಾರಣ ಗೊತ್ತಾ?

 ಇತ್ತೀಚಿನ ದಿನಗಳಲ್ಲಿ ಹೃದಯಘಾತದಿಂದ ಅನೇಕರು ಸಾವನ್ನಪ್ಪುತ್ತಿದ್ದಾರೆ. ಅನೇಕ ಯುವ ಜನತೆ ಹಾರ್ಟ್ ಅಟ್ಯಾಕ್ ಎಂಬ ಸಮಸ್ಯೆಗೆ ಬಲಿಯಾಗುತ್ತಿದ್ದಾರೆ. ಅದಕ್ಕೆ ತಾಜಾ ಉದಾಹರಣೆ ನಮ್ಮ ಸ್ಯಾಂಡಲ್ ವುಡ್ ನ ಪ್ರಸಿದ್ದ ನಟ ಪುನೀತ್ ರಾಜ್ ಕುಮಾರ್, ಹಿಂದಿ ಬಿಗ್ ಬಾಸ್ ತಾರೆ ಸಿದ್ದಾರ್ಥ್ ಶುಕ್ಲಾ ಹಾಗೂ ಅನೇಕರು ಈ ಹೃದ್ರೋಗ ಸಮಸ್ಯೆಯಿಂದ ಪ್ರಾಣ ತೆತ್ತಿದ್ದಾರೆ. ಹೌದು, ಹೃದಯ ಸಂಬಂಧಿ ಕಾಯಿಲೆಯಿಂದ ಅನೇಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅನೇಕರು ಹೃದಯದ ಬಗ್ಗೆ ಕೇರ್ ಮಾಡದೆ ಇರುವುದೇ ಅದಕ್ಕೆ ಪ್ರಮುಖ ಕಾರಣ.

ಹೃದಯ ಕಾಯಿಲೆ ನಮ್ಮ ದೇಹದಲ್ಲಿ ಕೆಲವು ಆರೋಗ್ಯ ಸಮಸ್ಯೆ ನೇರ ಕಾರಣವಾಗಿರುತ್ತದೆ. ಅಲ್ಲದೇ, ನಮ್ಮ ಆಹಾರ ಪದ್ದತಿ, ಜೀವನ ಪದ್ದತಿಯೂ ಹೃದಯ ರೋಗಕ್ಕೆ ಪ್ರಮುಖ ಕಾರಣವಾಗಿದೆ. ಜೊತೆಗೆ ವಯಸ್ಸು, ವಂಶಪಾರಂಪರ್ಯದಿಂದಾಗಿಯೂ ಹೃದಯ ಕಾಯಿಲೆ ಬರುತ್ತದೆ. ವರದಿಗಳ ಪ್ರಕಾರ ಸುಮಾರು ಅರ್ಧದಷ್ಟು ಅಮೆರಿಕನ್ನರು (47%) ಹೃದ್ರೋಗಕ್ಕೆ ಸಂಬಂಧಿಸಿದ 3 ಪ್ರಮುಖ ಅಪಾಯಕಾರಿ ಅಂಶಗಳಲ್ಲಿ ಕನಿಷ್ಠ 1 ಅನ್ನು ಹೊಂದಿದ್ದಾರೆ ಎಂದು ಹೇಳಲಾಗಿದೆ. ಇನ್ನು ಹೃದಯ ಕಾಯಿಲೆಗೆ ಸಂಬಂಧಪಟ್ಟ ಕೆಲವೊಂದು ಅಪಾಯಕಾರಿ ಅಂಶಗಳನ್ನು ನಾವು ತಡೆಗಟ್ಟಬಹುದು.

ಹಾಗಾದರೆ ನಾವು ಏನು ಮಾಡಬೇಕು? ಹೃದ್ರೋಗದಿಂದ ನಾವು ಪಾರಾಗುವುದು ಹೇಗೆ? ಯಾವ ರೀತಿ ನಾವು ಬದುಕಬೇಕು? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.

ಈ ಆರೋಗ್ಯ ಸಮಸ್ಯೆಗಳು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ!

1. ಅಧಿಕ ರಕ್ತದೊತ್ತಡ!

ಅಧಿಕ ರಕ್ತದೊತ್ತಡವು ಹೃದ್ರೋಗಕ್ಕೆ ಪ್ರಮುಖ ಅಪಾಯಕಾರಿ ಅಂಶವಾಗಿದೆ. ಮನುಷ್ಯನ ಅಪಧಮನಿಗಳು ಮತ್ತು ಇತರ ರಕ್ತನಾಳಗಳಲ್ಲಿ ರಕ್ತದ ಒತ್ತಡವು ತುಂಬಾ ಹೆಚ್ಚಾದಾಗ ಇದು ಆರೋಗ್ಯದಲ್ಲಿ ಏರುಪೇರು ಉಂಟುಮಾಡುತ್ತದೆ. ಅಧಿಕ ರಕ್ತದ ಒತ್ತಡವನ್ನು ನೀವು ನಿಯಂತ್ರಿಸದಿದ್ದರೆ, ಹೃದಯ ಮಾತ್ರವಲ್ಲದೇ, ಮನುಷ್ಯನ ಕಿಡ್ನಿ, ಮೆದುಳು ಸೇರಿದಂತೆ ಮಾನವನ ದೇಹದ ಇತರ ಪ್ರಮುಖ ಅಂಗಗಳ ಮೇಲೆ ತೀವ್ರ ತರಹದ ಪರಿಣಾಮ ಬೀರಬಹುದು. ಇನ್ನು ಅಧಿಕ ರಕ್ತದೊತ್ತಡವನ್ನು ಸಾಮಾನ್ಯವಾಗಿ ಸೈಲೆಂಟ್ ಕಿಲ್ಲರ್ ಎಂದು ಕರೆಯಲಾಗುತ್ತದೆ. ಏಕೆಂದರೆ ಇದು ಸಾಮಾನ್ಯವಾಗಿ ಯಾವುದೇ ರೋಗಲಕ್ಷಣಗಳನ್ನು ಹೊಂದಿರುವುದಿಲ್ಲ. ಆದರೆ ಮನುಷ್ಯನ ಜೀವಕ್ಕೆ ಕುತ್ತು ತರುವ ಶಕ್ತಿ ಹೊಂದಿದೆ. ಇನ್ನು ನಮಗೆ ಅಧಿಕ ರಕ್ತದೊತ್ತಡ ಇದೆಯಾ ಎಂದು ತಿಳಿದುಕೊಳ್ಳಲು ನಾವು ರಕ್ತದೊತ್ತಡವನ್ನು ಪರೀಕ್ಷೆ ನಡೆಸಿದರೆ ತಿಳಿಯುತ್ತದೆ. ಹೃದಯಾಘಾತ ಅಥವಾ ಹೃದಯ ಸಂಬಂಧಿ ಕಾಯಿಲೆಯಿಂದ ತಪ್ಪಿಸಿಕೊಳ್ಳಲು ಅಧಿಕ ರಕ್ತದೊತ್ತಡವನ್ನು ಸಮತೋಲನಕ್ಕೆ ತರಬೇಕು. ಅದಕ್ಕೆ ಬೇಕಾದ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು. ಔಷಧಿಗಳಿಂದಲೂ ಅಧಿಕ ರಕ್ತದೊತ್ತಡವನ್ನು ಸಮತೋಲನದಲ್ಲಿಡಬಹುದು.

2. ರಕ್ತದಲ್ಲಿ ಅನಾರೋಗ್ಯಕರ ಕೊಬ್ಬು!

ಕೊಲೆಸ್ಟ್ರಾಲ್ ಎನ್ನುವುದು ಮೇಣದಂಥ, ಕೊಬ್ಬಿನಂತಹ ವಸ್ತುವಾಗಿದ್ದು ಲಿವರ್ ಇದನ್ನು ತಯಾರಿಸುತ್ತದೆ. ವಿವಿಧ ಆಹಾರಗಳಿಂದಲೂ ಕೊಬ್ಬು ಬರುತ್ತದೆ. ಲಿವರ್ ನಮ್ಮ ದೇಹಕ್ಕೆ ಬೇಕಾದಂತಹ ಕೊಬ್ಬನ್ನು ತಯಾರಿಸುತ್ತದೆ. ಆದರೆ ನಾವು ಸೇವಿಸುವ ಆಹಾರದಿಂದ ಹೆಚ್ಚು ಅನಾರೋಗ್ಯಕರ ಕೊಬ್ಬನ್ನು ಪಡೆಯುತ್ತೇವೆ. ಇದು ದೇಹಕ್ಕೆ ಸಮಸ್ಯೆ ಉಂಟು ಮಾಡುತ್ತದೆ. ಇಂತಹ ಹೆಚ್ಚುವರಿ ಕೊಲೆಸ್ಟ್ರಾಲ್ ಅಂಶಗಳು ಅಪಧಮನಿಗಳಲ್ಲಿ ಹಾಗೂ ಹೃದಯದಲ್ಲಿ ಗೋಡೆಯನ್ನು ನಿರ್ಮಿಸುತ್ತದೆ. ಇದರಿಂದಾಗಿ ಅಪದಮನಿಗಳು ಹೋಲ್ ಸಣ್ಣದಾಗುತ್ತದೆ. ಹೀಗಾಗಿ ಹೃದಯ, ಮೆದುಳಿಗೆ ರಕ್ತ ಸರಿಯಾಗಿ ಪರಿಚಲನೆಯಾಗುವುದಿಲ್ಲ. ಇದರಿಂದಾಗಿ ಹೃದಯಾಘಾತದಂತಹ ದುರಂತ ಮನುಷ್ಯನ ಜೀವನದಲ್ಲಿ ಸಂಭವಿಸುತ್ತದೆ. ಹೀಗಾಗಿ ಕೊಬ್ಬಿನಂಶದ ವಸ್ತುಗಳನ್ನು ಕಡಿಮೆ ಸೇವಿಸಿದರೆ ಉತ್ತಮ. ಈ ಮೂಲಕ ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಯಿಂದ ಪಾರಾಗಬಹುದು.

3.ಮಧುಮೇಹ!

ಈ ಜಗತ್ತಿನಲ್ಲಿ ಇದೀಗ ಮಧುಮೇಹ ಕಾಯಿಲೆ ಸಾಮಾನ್ಯವಾಗಿ ಬಿಟ್ಟಿದೆ. ಮಧುಮೇಹಕ್ಕೂ ಹೃದಯಕ್ಕೂ ಅವಿನಾಭಾವ ಸಂಬಂಧವಿದೆ. ಮಧುಮೇಹ ಕಂಟ್ರೋಲ್ ನಲ್ಲಿದ್ದರೆ ಹೃದ್ರೋಗ ಸಮಸ್ಯೆಯಿಂದ ಬಚಾವ್ ಆಗುತ್ತೇವೆ. ಹೌದು, ನಮ್ಮ ದೇಹದ ಶಕ್ತಿಗಾಗಿ ಗ್ಲೂಕೋಸ್ ಆಥವಾ ಸಕ್ಕರೆ ಅವಶ್ಯಕತೆ ಇರುತ್ತದೆ. ಇನ್ಸುಲಿನ್ ಮೇದೋಜ್ಜೀರಕ ಗ್ರಂಥಿಯಲ್ಲಿ ಉತ್ಪತ್ತಿಯಾಗುವ ಹಾರ್ಮೋನ್ ಆಗಿದ್ದು, ನೀವು ಸೇವಿಸುವ ಆಹಾರದಿಂದ ಗ್ಲೂಕೋಸ್ ಅನ್ನು ಶಕ್ತಿಗಾಗಿ ನಿಮ್ಮ ದೇಹದ ಜೀವಕೋಶಗಳಿಗೆ ಹರಿಸಲು ಇನ್ಸುಲಿನ್ ಸಹಾಯ ಮಾಡುತ್ತದೆ. ಆದರೆ ನಿಮಗೆ ಮಧುಮೇಹ ಇದ್ದರೆ, ನಿಮ್ಮ ದೇಹವು ಸಾಕಷ್ಟು ಇನ್ಸುಲಿನ್ ಅನ್ನು ತಯಾರಿಸುವುದಿಲ್ಲ. ಹೀಗಾಗಿ ನಿಮ್ಮಲ್ಲಿರುವ ಮಧುಮೇಹ ಖಾಯಿಲೆಯು ಸಕ್ಕರೆಯನ್ನು ದೇಹದಲ್ಲಿ ಉತ್ಪಾದಿಸುತ್ತದೆ. ಹೀಗೆ ನೀವು ಸಂಪೂರ್ಣವಾಗಿ ಮಧುಮೇಹ ರೋಗದಿಂದ ಬಳಲುತ್ತೀರಿ. ಮಧುಮೇಹ ನಿಮಗೆ ಇದ್ದರೆ ಇದನ್ನು ನೀವು ಆದಷ್ಟೂ ಸಮತೋಲನದಲ್ಲಿ ಇಡುವುದು ಒಳ್ಳೆಯದು. ಯಾಕೆಂದರೆ ಮಧುಮೇಹವಿರುವ ಅನೇಕರು ಹೃದಯಾಘಾತಕ್ಕೊಳಗಾಗುತ್ತಿದ್ದಾರೆ. ಹೀಗಾಗಿ ಇಂಥ ಅಪಾಯಕಾರಿ ಅಂಶದಿಂದ ದೂರ ಇರುವುದು ಒಳ್ಳೆಯದು.

4.ಸ್ಥೂಲಕಾಯತೆ ಯಿಂದ ಹೃದ್ರೋಗ

ಇಂದಿನ ಕಾಲದಲ್ಲಿ ಬೊಜ್ಜು ಅಥವಾ ಸ್ಥೂಲಕಾಯ ದೊಡ್ಡ ಸಮಸ್ಯೆಯಾಗಿದೆ. ಈ ಕಾರಣದಿಂದಾಗಿ ಮಧುಮೇಹ, ಹೃದ್ರೋಗ, ಅನೇಕ ರೀತಿಯ ಕ್ಯಾನ್ಸರ್ ಮತ್ತು ಪಾರ್ಶ್ವವಾಯು ಮುಂತಾದ ಅನೇಕ ಕಾಯಿಲೆಗಳು ಬರುವ ಸಾಧ್ಯತೆಯಿದೆ. ಅದರಲ್ಲೂ ಹೃದ್ರೋಗ ಸಮಸ್ಯೆ ಬೇಗ ಬೊಜ್ಜು ಇರುವ ಮನುಷ್ಯರಿಗೆ ಬರುತ್ತದೆ. ಊಸಿರಾಟದ ತೊಂದರೆಯನ್ನು ಕೂಡ ಅವರು ಅನುಭವಿಸುತ್ತಾರೆ. ಹೀಗಾಗಿ ಸ್ಥೂಲಕಾಯತೆಗೆ ನಿಮ್ಮ ವೈದ್ಯರ ಬಳಿ ಸಲಹೆ ಕೇಳಿ ಸಮತೋಲನ ಕಾಪಾಡಿಕೊಳ್ಳಬೇಕು. ಈ ಮೂಲಕ ಹೃದ್ರೋಗ ಸಮಸ್ಯೆಯಿಂದ ದೂರ ಇರಬಹುದು.

ಹೃದಯದ ಆರೋಗ್ಯಕ್ಕೆ ಈ ರೀತಿ ಮುನ್ನೆಚ್ಚರಿಕೆವಹಿಸಿ

1.ಈ ಆಹಾರ ತಿನ್ನುವ ಮುಂಚೆ ಯೋಚಿಸಿ!

ಸ್ಯಾಚುರೇಟೆಡ್ ಫ್ಯಾಟ್, ಟ್ರಾನ್ಸ್ ಫ್ಯಾಟ್ ಮತ್ತು ಕೊಬ್ಬು ಹೆಚ್ಚಿರುವ ಆಹಾರವನ್ನು ಸೇವಿಸುವುದರಿಂದ ಹೃದ್ರೋಗದಂತಹ ಸಮಸ್ಯೆ ಬೇಗ ಮನುಷ್ಯನಿಗೆ ಅಂಟುಕೊಳ್ಳುತ್ತದೆ. ಅಲ್ಲದೇ ಇನ್ನಿತರ ರೋಗಕ್ಕೂ ಕಾರಣವಾಗುತ್ತದೆ. ಹೀಗಾಗಿ ಇಂತಹ ಆಹಾರಗಳಿಂದ ದೂರವಿರಿ. ಅಲ್ಲದೇ, ಆಹಾರದಲ್ಲಿ ಹೆಚ್ಚು ಉಪ್ಪು (ಸೋಡಿಯಂ) ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಹೀಗಾಗಿ ಹಿತ ಮಿತ ಆಹಾರವನ್ನು ಸೇವಿಸಿ.

2. ದೈಹಿಕ ಚಟುವಟಿಕೆ ಮಾಡದಿರುವುದು

ದೈಹಿಕ ಚಟುವಟಿಕೆ ಮನುಷ್ಯನ ಜೀವನದಲ್ಲಿ ಅತ್ಯಂತ ಮುಖ್ಯ ಏಕೆಂದರೆ, ದೈಹಿಕ ಚಟುವಟಿಕೆ ಮಾಡುವುದರಿಂದ ಮನಸ್ಸು ಶಾಂತಿಯಾಗುತ್ತದೆ, ದೇಹಕ್ಕೆ ಸಾಮರ್ಥ್ಯ ಬರುತ್ತದೆ, ಹಾರ್ಮೋನ್ ಗಳು, ಇನ್ನಿತರ ದೇಹದ ಭಾಗಗಳು ಜೀವ ಪಡೆದುಕೊಳ್ಳುತ್ತದೆ. ಹೀಗಾಗಿ ವ್ಯಾಯಾಮ, ಯೋಗ, ವಾಕಿಂಗ್ ನಂತಹ ದೈಹಿಕ ಚಟುವಟಿಕೆ ನಡೆಸಬೇಕು. ಅಲ್ಲದೇ, ಯೋಗ, ವ್ಯಾಯಾಮ ಹೃದ್ರೋಗಕ್ಕೆ ಹೇಳಿ ಮಾಡಿಸಿದ ಉತ್ತಮ ಚಟುವಟಿಕೆ. ಉಸಿರಾಟವೂ ಉತ್ತಮವಾಗುತ್ತದೆ. ಹೀಗಾಗಿ ಹೃದ್ರೋಗದಿಂದ ದೂರವಿರಲು ದೈಹಿಕ ಚಟುವಟಿಕೆ ನಡೆಸಬೇಕು.

3. ಮದ್ಯಪಾನಕ್ಕೆ ಬ್ರೇಕ್ ಹಾಕಿ!

ಮದ್ಯಪಾನ ಮಾಡುವುದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎನ್ನುವುದು ಎಲ್ಲರಿಗೂ ಗೊತ್ತು. ಮದ್ಯಪಾನದಿಂದ ಬಿಪಿ, ಶುಗರ್ ನಂತಹ ರೋಗ ಮನುಷ್ಯನನ್ನು ಆವರಿಸುತ್ತದೆ. ಇದು ಹೃದ್ರೋಗದಂತಹ ಸಮಸ್ಯೆಗೆ ಮುನ್ನುಡಿ ಬರೆಯಲಿದೆ. ಹೀಗಾಗಿ ಉತ್ತಮ ಆರೋಗ್ಯಕ್ಕಾಗಿ ಮದ್ಯಪಾನ ಬ್ರೇಕ್ ಹಾಕುವುದು ಒಳ್ಳೆಯದು. ಇನ್ನು ಮದ್ಯಪಾನ ಕುಡಿಯಲೇ ಬೇಕು ಅನ್ನುವವರು ಇತಿ ಮಿತಿಯಲ್ಲಿ ಕುಡಿಯಬೇಕು.

4. ಧೂಮಪಾನ ಹೃದ್ರೋಗಕ್ಕೆ ಮಾರಕ!

ಧೂಮಪಾನ ಹೃದ್ರೋಗ ಮತ್ತು ಹೃದಯಾಘಾತಕ್ಕೆ ನೇರ ಕಾರಣವಾಗಬಹುದು. ಹೌದು, ಸಿಗರೇಟ್ ಸೇವನೆಯು ಹೃದಯ ಮತ್ತು ರಕ್ತನಾಳಗಳನ್ನು ಹಾನಿಗೊಳಿಸುತ್ತದೆ, ಇದು ಹೃದಯಾಘಾತಕ್ಕೆ ಕಾರಣವಾಗುತ್ತದೆ. ಇನ್ನು ನಿಕೋಟಿನ್ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಇನ್ನು ಸಿಗರೇಟ್ ಹೊಗೆಯಿಂದ ಬರುವ ಕಾರ್ಬನ್ ಮಾನಾಕ್ಸೈಡ್ ನಿಮ್ಮ ರಕ್ತದಲ್ಲಿರುವ ಆಮ್ಲಜನಕದ ಪ್ರಮಾಣವನ್ನು ಕುಗ್ಗಿಸುತ್ತದೆ. ಇವೆಲ್ಲ ಹೃದಯಕ್ಕೆ ಡ್ಯಾಮೇಜ್ ಮಾಡುವ ಕಾರ್ಯಗಳು. ಹೀಗಾಗಿ ಧೂಮಪಾನದಿಂದ ದೂರವಿರಿ.

ಅನುವಂಶಿಕವಾಗಿ, ಕುಟುಂಬದ ಹಿನ್ನಲೆಯಿಂದ ಹೃದ್ರೋಗ ಬರುತ್ತದೆಯೇ?

ಹೌದು, ಅನುವಂಶಿಕವಾಗಿ ಹಾಗೂ ಕುಟುಂಬದಲ್ಲಿ ಯಾರಿಗಾದರೂ ಹಾರ್ಟ್ ಅಟ್ಯಾಕ್ ನಂತಹ ಆರೋಗ್ಯ ಸಮಸ್ಯೆ ಉಂಟಾಗಿದ್ದರೆ ಖಂಡಿತವಾಗಿಯೂ ಅಂತವರು ಎಚ್ಚರಿಕೆಯಿಂದ ಇರುವುದು ಒಳ್ಳೆಯದು ಎನ್ನುತ್ತಾರೆ ವೈದ್ಯರು. ಮೋಸ್ಟ್ ಆಫ್ ದಿ ಕೇಸಸ್ ನಲ್ಲಿ ಈ ರೀತಿ ಕುಟುಂಬದ ಹಿನ್ನಲೆಯಿಂದ ಹೃದಯಾಘಾತ ಸಂಭವಿಸಿದ ನಿದರ್ಶನಗಳು ಇದೆ ಎಂದಿದ್ದಾರೆ ವೈದ್ಯರು. ಆದರೆ ಏಕಾಏಕಿ ಕುಟುಂಬದ ಹಿನ್ನೆಲೆ ಹಾಗೂ ಅನುವಂಶಿಕವಾಗಿ ಉಂಟಾಗುವುದಿಲ್ಲ. ಅವರ ಜೀವನ ಪದ್ದತಿ, ಆರೋಗ್ಯದ ಪದ್ದತಿ ಮೇಲೆ ಇದು ನಿಂತಿರುತ್ತೆ. ಹೀಗಾಗಿ ಕುಟುಂಬದಲ್ಲಿ ಇಂತಹ ಘಟನೆ ನಡೆದಿದ್ದರೆ ಹೃದ್ರೋಗದ ಸಮಸ್ಯೆ ಸಂಭವಿಸಬಹುದಾದ ಅಪಾಯಕಾರಿ ಅಂಶಗಳಿಂದ ದೂರ ಇದ್ದರೆ ಸಾಕು.

ವಯಸ್ಸು-ಲಿಂಗ ಮತ್ತು ಹೃದ್ರೋಗಕ್ಕೆ ಸಂಬಂಧ ಇದ್ಯಾ?

ಖಂಡಿತಾ ಇಲ್ಲ, ಹೃದ್ರೋಗವು ಪುರುಷರು ಮತ್ತು ಮಹಿಳೆ ಎಂಬ ಭೇದಭಾವ ಇಲ್ಲ. ಯಾರಿಗೂ ಬೇಕಾದ್ರೂ ಹೃದ್ರೋಗ ಬರಬಹುದು. ಇನ್ನು ಇನ್ನು ಹೃದ್ರೋಗಕ್ಕೆ ವಯಸ್ಸಿನಲ್ಲಿ ಚಿಕ್ಕವರಿದೂ, ದೊಡ್ಡವರಿಗೂ ಹೃದಯ ಖಾಯಿಲೆ ಬರುತ್ತದೆ. ಆದರೆ, ವಯಸ್ಸಾದಂತೆ ಹೃದ್ರೋಗದ ಅಪಾಯ ಜಾಸ್ತಿ ಅಷ್ಟೇ.


Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries