ಪ್ಯಾಕೆಟ್ ಅಕ್ಕಿಗೆ ಜಿಎಸ್ ಟಿ; ಕೇರಳದಲ್ಲಿ ಜಾರಿಯಾಗುವುದಿಲ್ಲ ಎಂಬ ಮುಖ್ಯಮಂತ್ರಿಗಳ ಮಾತು ಕೇವಲ ಹೇಳಿಕೆ: ವಾರದ ಹಿಂದೆಯೇ ತೆರಿಗೆ ಸಂಗ್ರಹ ಆರಂಭ: ವರದಿ                 ತಿರುವನಂತಪುರಂ: ಪ್ಯಾಕೆಟ್‍ನಲ್ಲಿರುವ ಅಕ್ಕಿ ಸೇರಿದಂತೆ ಅಗತ್ಯ ವಸ್ತುಗಳ ಮೇಲೆ ಜಿಎಸ್‍ಟಿ ಜಾರಿ ಮಾಡುವುದಿಲ್ಲ ಎಂಬ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭರವಸೆ ಕೇವಲ ಹೇಳಿಕೆ ಎಂದು ವರದಿಯಾಗಿದೆ.
                    ಕೇಂದ್ರ ಸರ್ಕಾರ ಘೋಷಣೆ ಮಾಡಿದ ಬೆನ್ನಲ್ಲೇ ರಾಜ್ಯದಲ್ಲೂ ಜಿಎಸ್‍ಟಿ ಸಂಗ್ರಹ ಆರಂಭವಾಗಿದೆ ಎಂಬ ವರದಿಗಳು ಬರುತ್ತಿವೆ. ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವ ಕೆ. ಎನ್ ಬಾಲಗೋಪಾಲ್ ಕೂಡ ಸ್ಪಷ್ಟಪಡಿಸಿದ್ದಾರೆ. ಆದರೆ ಇದೆಲ್ಲಾ ಕೇವಲ ಜನರನ್ನು ಮೂರ್ಖರನ್ನಾಗಿಸುವ ಮಾತು ಎಂಬ ಮಾಹಿತಿ ಹೊರಬಿದ್ದಿದೆ.
      ಒಂದು ವಾರದ ಹಿಂದೆ, ರಾಜ್ಯವು ಪ್ಯಾಕೆಟ್‍ಗಳಲ್ಲಿ ಬರುವ ಅಕ್ಕಿ ಸೇರಿದಂತೆ ಅಗತ್ಯ ವಸ್ತುಗಳ ಮೇಲೆ ಐದು ಶೇಕಡಾ ಜಿಎಸ್‍ಟಿ ವಿಧಿಸಲು ಪ್ರಾರಂಭಿಸಿತು. ಈ ಕುರಿತು ಸರಕಾರ ಇದೇ ತಿಂಗಳ 18ರಂದು ತೆರಿಗೆ ಇಲಾಖೆಗೆ ಅಧಿಸೂಚನೆಯನ್ನು ಹಸ್ತಾಂತರಿಸಿತ್ತು. ಇದರ ಆಧಾರದ ಮೇಲೆ ತೆರಿಗೆ ಇಲಾಖೆ ಜಿಎಸ್‍ಟಿ ವಿಧಿಸಲು ಆರಂಭಿಸಿತ್ತು. ಮುಖ್ಯಮಂತ್ರಿ ಹೇಳುವಂತೆ ಇನ್ನು ಮುಂದೆ ತೆರಿಗೆ ವಸೂಲಿ ಮಾಡದೇ ಇರಲು ರಾಜ್ಯಕ್ಕೆ ಸಾಧ್ಯವಿಲ್ಲ. ಇದು ಸಂಕೀರ್ಣ ತಾಂತ್ರಿಕ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದಿದ್ದರು.  
        ರಾಜ್ಯವು ತೆರಿಗೆಯನ್ನು ತೆಗೆದುಹಾಕಲು ಬಯಸಿದರೆ, ಸರ್ಕಾರವು ಪ್ರಸ್ತುತ ಅಧಿಸೂಚನೆಯನ್ನು ಹಿಂಪಡೆಯಬೇಕು. ಆದರೆ ತೆರಿಗೆ ವಿಧಿಸಲು ಆರಂಭಿಸಿರುವುದರಿಂದ ಇದು ಪ್ರಾಯೋಗಿಕವಾಗದು.  ಹೀಗಿರುವಾಗ ಜಿಎಸ್‍ಟಿ ಕೌನ್ಸಿಲ್‍ನ ಮೇಲೆ ಒತ್ತಡ ಹೇರಿ ತೆರಿಗೆ ಮನ್ನಾ ಮಾಡುವಂತೆ ಇತರ ರಾಜ್ಯಗಳನ್ನು ಕೇರಳ ಕೇಳಬಹುದು.
        ಸುಪ್ರೀಂ ಕೋರ್ಟ್ ನ ಆದೇಶದ ಪ್ರಕಾರ ಕೇರಳ ಬೇಕಿದ್ದರೆ ಕೆಎಸ್ ಜಿಎಸ್ ಟಿ ಕಾಯ್ದೆಗೆ ತಿದ್ದುಪಡಿ ತರಬಹುದು. ಆದರೆ ಈ ಮೂಲಕ ಸರ್ಕಾರವು ರಾಜ್ಯ ಜಿಎಸ್‍ಟಿಯನ್ನು ಮಾತ್ರ ರದ್ದುಗೊಳಿಸಬಹುದು. ಪ್ರಸ್ತುತ ಕೇಂದ್ರೀಯ ಜಿಎಸ್‍ಟಿಯನ್ನು ಸರ್ಕಾರ ತೆಗೆದುಹಾಕಲು ಸಾಧ್ಯವಿಲ್ಲ. ಕೇರಳ ರಾಜ್ಯವನ್ನು ಜಿಎಸ್‍ಟಿಯಿಂದ ವಿನಾಯಿತಿ ನೀಡುವ ಮಸೂದೆಯನ್ನು ತಂದರೂ ರಾಜ್ಯಪಾಲರು ಅದನ್ನು ತಿರಸ್ಕರಿಸಬಹುದು ಅಥವಾ ರಾಷ್ಟ್ರಪತಿಗಳ ಪರಿಗಣನೆಗೆ ಕಳುಹಿಸಬಹುದು.
          ಜಿಎಸ್‍ಟಿಎನ್ ಸಾಫ್ಟ್‍ವೇರ್ ಬಳಸಿ ವ್ಯಾಪಾರಿಗಳು ಜಿಎಸ್‍ಟಿ ರಿಟನ್ರ್ಸ್ ಸಲ್ಲಿಸುತ್ತಾರೆ. ಮುಂದಿನ ಬದಲಾವಣೆಯು ಇದಕ್ಕೆ ಸಂಬಂಧಿಸಿದ ಕ್ರಮಗಳ ಮೇಲೂ ಪರಿಣಾಮ ಬೀರುತ್ತದೆ. ಅಂದರೆ ಕೇರಳಕ್ಕೆ ಸದ್ಯ ವಿಧಿಸಿರುವ ಜಿಎಸ್‍ಟಿಯಿಂದ ಮುಕ್ತಿ ಪಡೆಯುವುದು ಅಸಾಧ್ಯ ಎನ್ನಲಾಗಿದೆ. 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


grama rajya

Qries