HEALTH TIPS

ಜಿಲ್ಲಾ ಉತ್ತಮ ವರದಿಗಾರರಿಗೆ ಮಾಧ್ಯಮ ಪ್ರಶಸ್ತಿ : ಮಂಜೇಶ್ವರ ತಾಲೂಕಲ್ಲಿ ರಹ್ಮಾನ್ ಉದ್ಯಾವರಿಗೆ ಒಲಿದ ಗೌರವ

  
            ಕಾಸರಗೋಡು: ಜಿಲ್ಲೆಯ ಎಂಡೋ ಸಲ್ಫಾನ್ ಪೀಡಿತರಿಗಾಗಿ ಹೋರಾಟವನ್ನು ನಡೆಸಿ ಅವರಿಗೆ ಸÀರ್ಕಾರದಿಂದ ಲಭಿಸುವ ಗರಿಷ್ಠ ಸವಲತ್ತುಗಳನ್ನು ಒದಗಿಸಿ ಕೊಡಲು ಸತತ ಪ್ರಯತ್ನ ನಡೆಸುತ್ತಿರುವ ಅತಿ ಜೀವನ ಚ್ಯಾರಿಟೇಬಲ್ ಸೊಸೈಟಿ ಹಾಗೂ ಒರುಮ ಕೂಟಾಯಿಮ ಎಂಬೀ ಸಂಘಟನೆಯ ಸಂಯುಕ್ತಾಶ್ರಯದಲ್ಲಿ ಕಾಸರಗೋಡು ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿರುವ ಉತ್ತಮ ಪ್ರಾದೇಶಿಕ ವರದಿಗಾರರನ್ನು ಆಯ್ಕೆ ಮಾಡಿ ಮಾದ್ಯಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.
        ಮಂಜೇಶ್ವರದಿಂದ ಹಿರಿಯ ಅನುಭವಿ ಪತ್ರಕರ್ತ ರಹ್ಮಾನ್ ಉದ್ಯಾವರ, ಕಾಸರಗೋಡಿನಿಂದ ಉತ್ತರ ದೇಶಂ ವರದಿಗಾರ ಶಾಫಿ ತೆರುವತ್ತ್, ವೆಳ್ಳರಿ ಕುಂಡ್ ನಿಂದ ಮನೋರಮ ವರದಿಗಾರ ರಾಘವನ್ ಹಾಗೂ ಹೊಸದುರ್ಗದಿಂದ ಕಾರವಲ್ ವರದಿಗಾರ ಬಾಬು ಎಂಬಿವರಿಗೆ ಮಾಧ್ಯಮ ಪ್ರಶಶ್ತಿ ನೀಡಿ ಗೌರವಿಸಲಾಯಿತು.
         ಎಂಡೋ ಸಲ್ಫಾನ್ ಪೀಡಿತರ ಬಗ್ಗೆ ಅತೀ ಹೆಚ್ಚಿನ ವರದಿ ಮಾಡಿ ಸÀರ್ಕಾರದ ಗಮನ ಸೆಳೆದ ಜಿಲ್ಲೆಯ ಮಾದ್ಯಮ ವರದಿಗಾರರಾದ ಉರ್ಮೀಶ್ ಹಾಗೂ ಸುಕುಮಾರ ಎಂಬಿವರಿಗೂ ಪ್ರಶಶ್ತಿ ನೀಡಲಾಗಿದೆ.
        ಭಾನುವಾರ ಬೆಳಿಗ್ಗೆ ಕಾಞಂಗಾಡಿನ ಪುದಿಯಕೋಟ ಸೂರ್ಯವಂಶಿ ಅಡಿಟೋರಿಯಂನಲ್ಲಿ ನಡೆದ ಸಮಾರಂಭದಲ್ಲಿ ಕಾಸರಗೋಡು ಶಾಸಕ ಎನ್ ಎ ನೆಲ್ಲಿಕುನ್ನು ಪ್ರಶಸ್ತಿ ಪ್ರದಾನಮಾಡಿದರು.
          ಈ ಸಂದರ್ಭ ಸಂಘಟನೆಯ ಪ್ರಮುಖರು, ಜನಪ್ರತಿನಿಧಿಗಳು, ಸಮಾಜ ಸೇವಾ ಕಾರ್ಯಕರ್ತರು ಸೇರಿದಂತೆ ಹಲವಾರು ಮಂದಿ ಪಾಲ್ಗೊಂಡರು.
     ರೆಹ್ಮಾನ್ ಉದ್ಯಾವರ ಅವರು ಕಳೆದ ಎರಡು ದಶಕಗಳಿಂದ ಜಿಲ್ಲೆಯ ಚುರುಕಿನ ಪತ್ರಕರ್ತರಾಗಿ ಗುರುತಿಸಿಕೊಂಡಿದ್ದಾರೆ. ಕರಾವಳಿ ಅಲೆ ಕಾಸರಗೋಡು ಜಿಲ್ಲಾ ವರದಿಗಾರರಾಗಿರುವ ಅವರು ವಿ4 ನ್ಯೂಸ್, ಕಾಸರಗೋಡಿನ ಕೆಸಿಎನ್ ಚಾನೆಲ್ ವರದಿಗಾರರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.  ಪತ್ರಿಕೋದ್ಯಮದ ಜೊತೆಗೆ ಸಾಮಾಜಿಕ ಚಟುವಟಿಕೆಗಳಲ್ಲೂ ಸಕ್ರಿಯರಾಗಿರುವ ರಹ್ಮಾನ್ ಮಂಜೇಶ್ವರ ಬಳಕೆದಾರರ ಸಂಘಟನೆಯ ಕಾಯದರ್ಶಿಯೂ ಹೌದು. ಗಲ್ಫ್ ರಾಷ್ಟ್ರದಲ್ಲೂ ಒಂದಷ್ಟು ಕಾಲ ದುಡಿದಿದ್ದ ಅವರು ಅಲ್ಲಿಯ ಅರೆಬಿ ಚಾನಲ್ ಒಂದರಲ್ಲೂ ಕಾರ್ಯನಿರ್ವಹಿಸಿದ್ದಾರೆ ಎಂಬುದು ಅವರ ಹೆಗ್ಗಳಿಕೆ.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries