HEALTH TIPS

ಅಕ್ರಮ ಡಿಜಿಟಲ್ ಲೋನ್ ಆಯಪ್ ನಡೆಸಿದ ಚೀನಾದ ಮೂವರ ಪತ್ತೆಗೆ ಲುಕ್‌ಔಟ್ ನೋಟಿಸ್

         ನವದೆಹಲಿ: ಭಾರತದಲ್ಲಿ ಅಕ್ರಮವಾಗಿ 'ಡಿಜಿಟಲ್ ಲೋನ್ ಆಯಪ್' ನಡೆಸುತ್ತಿರುವ ಆರೋಪದ ಮೇಲೆ ಮೂವರು ಚೀನಾ ಪ್ರಜೆಗಳ ವಿರುದ್ಧ ವಲಸೆ ವಿಭಾಗವು ಲುಕ್‌ಔಟ್ ನೋಟಿಸ್‌ ಹೊರಡಿಸಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

             ಒಡಿಶಾದ ಆರ್ಥಿಕ ಅಪರಾಧಗಳ ವಿಭಾಗದ ಕೋರಿಕೆ ಮೇರೆಗೆ ಸುತ್ತೋಲೆ ಹೊರಡಿಸಲಾಗಿದೆ. ಈ ತಿಂಗಳ ಆರಂಭದಲ್ಲಿ, ಇದೇ ಆರೋಪದ ಮೇಲೆ ಮತ್ತೊಬ್ಬ ಚೀನಾದ ಪ್ರಜೆಯ ವಿರುದ್ಧ ಲುಕ್‌ಔಟ್ ನೋಟಿಸ್‌ ಹೊರಡಿಸಲಾಗಿತ್ತು.
‌              'ಅಕ್ರಮ ಡಿಜಿಟಲ್‌ ಲೋನ್‌ ಅವ್ಯವಹಾರದಲ್ಲಿ ಅವರು ಮಾಸ್ಟರ್‌ಮೈಂಡ್‌ಗಳಾಗಿದ್ದಾರೆ. ಅವರು ಪ್ರಮುಖ ಆರೋಪಿಗಳು' ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

           ಈ ಆಯಪ್‌ಗೆ ದೇಶದಾದ್ಯಂತ ಒಂದು ಲಕ್ಷಕ್ಕೂ ಅಧಿಕ ಮಂದಿ ಬಲಿಪಶುಗಳಾಗಿದ್ದಾರೆ ಎಂದು ಅ ಸುತ್ತೋಲೆಯಲ್ಲಿ ಹೇಳಲಾಗಿದೆ.

            'ಅವರು ಇಂಡೋನೇಷ್ಯಾ, ಶ್ರೀಲಂಕಾ, ಪಾಕಿಸ್ತಾನ, ನೇಪಾಳ ಮತ್ತು ಬಾಂಗ್ಲಾದೇಶದಂತಹ ದೇಶಗಳಲ್ಲಿ ಇದೇ ರೀತಿಯ ಹಗರಣಗಳಲ್ಲಿ ಭಾಗಿಯಾಗಿದ್ದಾರೆ ಎಂಬುದರ ಬಗ್ಗೆ ಪುರಾವೆಗಳಿವೆ' ಎಂದು ಪ್ರಕಟಣೆ ತಿಳಿಸಿದೆ.

                ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries