ಕಾಸರಗೋಡು: ಅಸ್ತಿತ್ವಂ ಪ್ರತಿಷ್ಠಾನಂ ಕುಂಟಾರು, ಸಂಘ ಮಿತ್ರ ಎಡನೀರು ಹಾಘೂ ಕೆಎಂಸಿ ಆಸ್ಪತ್ರೆ ಅತ್ತಾವರ ಮಂಗಳೂರು ವತಿಯಿಂದ ಆರೋಗ್ಯ ತಪಾಸಣಾ ಉಚಿತ ಶಿಬಿರ ಜು. 17ರಂದು ಬೆಳಗ್ಗೆ 9.30ಕ್ಕೆ ಎಡನೀರು ಸ್ವಾಮೀಜೀಸ್ ಪ್ರೌಢಶಾಲೆಯಲ್ಲಿ ಜರುಗಲಿದೆ.
ಸಾಮಾನ್ಯ ರೋಗ ವಿಭಾಗ, ಕಣ್ಣು, ಹೃದ್ರೋಗ, ಸ್ತ್ರೀರೋಗ, ಸಾಮಾನ್ಯ ಶಸ್ತ್ರಚಿಕಿತ್ಸೆ, ಮಕ್ಕಳ ವಿಭಾಗ, ಎಲುಬು ಮತ್ತು ಕೀಲು ರೋಗ ವಿಭಾಗ, ಇಎನ್ಟಿ, ಗ್ಯಾಸ್ಟ್ರೋಎಂಟರಾಲಜಿ ವಿಭಾಗದಲ್ಲಿ ತಪಾಸಣೆ ನಡೆಯುವುದು. ತಪಾಸಣೆಗೆ ಬರುವವರು ರೇಶನ್ ಕಾರ್ಡಿನ ಜೆರಾಕ್ಸ್ ಪ್ರತಿ ತರಬೇಕು. ಈ ಸಂದರ್ಭ ಮಣಿಪಾಲ್ ಆರೋಗ್ಯ ಕಾರ್ಡು ನೋಂದಾವಣಾ ಶಿಬಿರವೂ ನಡೆಯಲಿರುವುದಾಗಿ ಪ್ರಕಟಣೆ ತಿಳಿಸಿದೆ.