HEALTH TIPS

ಯಾವುದು ಕೆಳಜಾತಿ?: ತಮಿಳುನಾಡಿನ ಪೆರಿಯಾರ್ ವಿವಿ ಪರೀಕ್ಷೆಯಲ್ಲಿ ಪ್ರಶ್ನೆ, ವಿವಾದ

            ಚೆನ್ನೈ: ಪೆರಿಯಾರ್ ವಿಶ್ವವಿದ್ಯಾನಿಲಯದ ಎರಡನೇ ಸೆಮಿಸ್ಟರ್‌ನ ಎಂಎ ಪರೀಕ್ಷೆಯ ಇತಿಹಾಸ ಪ್ರಶ್ನೆ ಪತ್ರಿಕೆಯಲ್ಲಿ 'ತಮಿಳುನಾಡಿಗೆ ಸೇರಿದ ಕೆಳಜಾತಿ ಯಾವುದು?' ಎಂದು ಪ್ರಶ್ನೆಯೊಂದನ್ನು ಕೇಳಲಾಗಿದೆ. ಹೀಗಾಗಿ ವಿವಾದ ಉದ್ಭವವಾಗಿದೆ.


               ಈ ವಿಷಯವನ್ನು ಪರಿಶೀಲಿಸಲು ತನಿಖಾ ಸಮಿತಿಯನ್ನು ರಚಿಸುವುದಾಗಿ ವಿವಿ ತಿಳಿಸಿದೆ.

           1880 ರಿಂದ 1947 ರವರೆಗಿನ ತಮಿಳುನಾಡಿನ ಸ್ವಾತಂತ್ರ್ಯ ಚಳವಳಿಯ ಕುರಿತು ಇತಿಹಾಸ ಪ್ರಶ್ನೆ ಪತ್ರಿಕೆಯ ಭಾಗ-'ಎ'ನಲ್ಲಿ ಒಂದು ಅಂಕದ, ಬಹುಆಯ್ಕೆಯ 15 ಪ್ರಶ್ನೆಗಳನ್ನು ಕೇಳಲಾಗಿದೆ. ಈ ಸರಣಿಯ 11ನೇ ಪ್ರಶ್ನೆ ಹೀಗಿದೆ: 'ತಮಿಳುನಾಡಿಗೆ ಸೇರಿದ ಕೆಳಜಾತಿ ಯಾವುದು?' ಎಂದು ಕೇಳಲಾಗಿದೆ.

ಈ ವಿಷಯ ತಮಿಳುನಾಡಿನಲ್ಲಿ ಸದ್ಯ ವಿವಾದ ಹುಟ್ಟು ಹಾಕಿದೆ.

             ತಪ್ಪಿತಸ್ಥರ ವಿರುದ್ಧ ವಿವಿ ಕ್ರಮ ಕೈಗೊಳ್ಳಲಿದೆ ಎಂದು ಪೆರಿಯಾರ್ ವಿಶ್ವವಿದ್ಯಾಲಯದ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.

               ಈ ಪ್ರಶ್ನೆ ಕೇಳಿದ್ದಕ್ಕಾಗಿ ಸಾಮಾಜಿಕ ಮಾಧ್ಯಮದಲ್ಲಿ ವಿಶ್ವವಿದ್ಯಾಲಯ ಮತ್ತು ಅದರ ಇತಿಹಾಸ ವಿಭಾಗವನ್ನು ಟೀಕೆಗೆ ಗುರಿಪಡಿಸಲಾಗಿದೆ.

***

             ನಾವು ಈ ಬಗ್ಗೆ ವಿಚಾರಣೆ ನಡೆಸಿದ್ದೇವೆ. ಪ್ರಶ್ನೆಯು ಪಠ್ಯಕ್ರಮದ ಭಾಗವಾಗಿದೆ ಎಂದು ಪ್ರಶ್ನೆಪತ್ರಿಕೆ ಸಿದ್ಧಪಡಿಸಿದ ಶಿಕ್ಷಕರು ಹೇಳಿದ್ದಾರೆ. ಆದರೆ, ಈ ಪ್ರಶ್ನೆಯನ್ನು ತಪ್ಪಿಸಬಹುದಿತ್ತು.

                                  - ಡಿ.ಗೋಪಿ, ಕುಲಸಚಿವ

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries