ಪುರಾತನ ಕಲೆಗಳ ಮೂಲಕ ಧರ್ಮ ಹಸಿರಾಗಿರುತ್ತದೆ: ಎಡನೀರು ಶ್ರೀ: ಗಮಕ ಶ್ರಾವಣಕ್ಕೆ ಚಾಲನೆ ನೀಡಿ ಅಭಿಮತ


              ಬದಿಯಡ್ಕ: ಸನಾತನ ಸಂಸ್ಕøತಿಯ ಅತ್ಯಂತ ಪುರಾತನವಾದ ಗಮಕ ಕಲೆಯ ಮೂಲಕ ರಾಮಾಯಣದ ಕಥೆಯನ್ನು ಪ್ರಸ್ತುತ ಪಡಿಸುತ್ತಿರುವುದು ಅತ್ಯಂತ ಪುಣ್ಯವಾದ ಕೆಲಸ. ರಾಮರಾಜ್ಯ, ರಾಮನಂತ ವ್ಯಕ್ತಿ ಎಲ್ಲಡೆ ಇರಬೇಕು ಎಂಬುದು ಎಲ್ಲರ ಆಶಯವಾಗಿದೆ. ಕಲೆಗಳ ಮೂಲಕ ಧಾರ್ಮಿಕ ತಿಳುವಳಿಕೆ ಜನಮಾನಸದೆಡೆಗೆ ತಲುಪುವುದಲ್ಲದೆ ಧರ್ಮ ಹಸಿರಾಗಿರುತ್ತದೆ ಎಂದು ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವದಿಸಿದರು.
          ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು ಕೇರಳ ಗಡಿನಾಡ ಘಟಕ ಕಾಸರಗೋಡು ಮತ್ತು ಸಿರಿಗನ್ನಡ ವೇದಿಕೆ ಬೆಂಗಳೂರು ಕೇರಳ ಗಡಿನಾಡ ಘಟಕ ಕಾಸರಗೋಡು ಇವುಗಳ ಸಂಯುಕ್ತ ಆಶ್ರಯದಲ್ಲಿ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ಚಾತುರ್ಮಾಸದ ಪರ್ವಕಾಲದಲ್ಲಿ ಶ್ರೀ ಎಡನೀರು ಮಠದಲ್ಲಿ ಆಯೋಜಿಸಲಾದ ಗಮಕ ಶ್ರಾವಣ ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
      ಮುಖ್ಯ ಅತಿಥಿಯಾಗಿ ಶ್ರೀಮಠದ ವ್ಯವಸ್ಥಾಪಕ ರಾಜೇಂದ್ರ ಕಲ್ಲೂರಾಯ ಮಾತನಾಡಿ ಸಂಸ್ಕøತಿಯ ಬೆನ್ನೆಲುಬಾಗಿ ಕಾವ್ಯಗಳು ಇವೆ. ಅದರಲ್ಲಿ ಅಡಕವಾಗಿರುವ ಸದ್ವಿಚಾರಗಳನ್ನು ಜನರೆಡೆಗೆ ತಲುಪಿಸಲು ಕಲೆಗಳು ಕಾರಣವಾಗಿದೆ. ಧರ್ಮ ಯಾವುದು ಅಧರ್ಮ ಯಾವುದು ಎಂಬುದನ್ನು ಕಲೆಯ ಮೂಲಕ ತಿಳಿಯಬಹುದಾಗಿದೆ. ಗಮಕ ಕಲೆಯು ಮುಂದಿನ ಪೀಳಿಗೆಗೆ ತಲುಪಬೇಕಾಗಿದೆ ಎಂದರು.
          ಶ್ರೀಮದ್ವಾಲ್ಮೀಕೀ ರಾಮಾಯಣದ ಆಯ್ದಭಾಗ ಸಂಸ್ಕøತ ವಾಚನದಲ್ಲಿ ನಾರಾಯಣ ಜಿ ಹೆಗ್ಡೆ ವಾಚನದಲ್ಲಿ, ಡಾ. ಸದಾಶಿವ ಭಟ್ ಸರವು ವ್ಯಾಖ್ಯಾನದಲ್ಲಿ, ತೊರವೆ ರಾಮಾಯಣದ ಆಯ್ದಭಾಗ ಕನ್ನಡ ವಾಚನದಲ್ಲಿ ಡಾ. ಸತೀಶ ಪುಣಿಂಚಿತ್ತಾಯ ಪೆರ್ಲ, ವ್ಯಾಖ್ಯಾನದಲ್ಲಿ ಡಾ. ಶ್ರೀಶಕುಮಾರ ಪಂಜಿತ್ತಡ್ಕ ಸಹಕರಿಸಿದರು. ವಿ.ಬಿ.ಕುಳಮರ್ವ, ತೆಕ್ಕೇಕರೆ ಶಂಕರನಾರಾಯಣ ಭಟ್ ನೇತೃತ್ವ ವಹಿಸಿದ್ದರು. 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


grama rajya

Qries