HEALTH TIPS

ಖಾಸಗಿ ಕಾಲೇಜುಗಳಿಗಿಂತ ಹೆಚ್ಚು ಸರ್ಕಾರಿ ಎಂಬಿಬಿಎಸ್ ಸೀಟುಗಳಿವೆ: ಕೇಂದ್ರ ಸರ್ಕಾರ

         ನವದೆಹಲಿ: ಸತತ ಮೂರು ವರ್ಷಗಳಿಂದ ಖಾಸಗಿ ಕಾಲೇಜುಗಳಲ್ಲಿರುವ ಎಂಬಿಬಿಎಸ್‌ ಸೀಟುಗಳಿಗಿಂತ ಹೆಚ್ಚು ಸರ್ಕಾರಿ ಕಾಲೇಜುಗಳಲ್ಲಿ ಲಭ್ಯ ಇವೆ. ಇದು ವೈದ್ಯಕೀಯ ಶಿಕ್ಷಣವು ಎಲ್ಲರ ಕೈಗೆಟುಕುವ ಭರವಸೆಯನ್ನು ಹುಟ್ಟುಹಾಕಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

             2022-23ರಲ್ಲಿ ದೇಶದಲ್ಲಿ ಒಟ್ಟು 91,927 ಎಂಬಿಬಿಎಸ್‌ ಸೀಟುಗಳು ಲಭ್ಯ ಇವೆ. ಈ ಪೈಕಿ ಖಾಸಗಿ ಕಾಲೇಜುಗಳಲ್ಲಿ 43,915 ಮತ್ತು ಸರ್ಕಾರಿ ಕಾಲೇಜುಗಳಲ್ಲಿ 48,212 ಸೀಟುಗಳು ಇವೆ. ಎರಡರ ನಡುವೆ 4,297 ಸೀಟುಗಳ ಅಂತರವಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನಸುಖ್‌ ಮಾಂಡವೀಯ ಲೋಕಸಭೆಗೆ ಶುಕ್ರವಾರ ಲಿಖಿತ ಪ್ರತಿಕ್ರಿಯೆ ನೀಡಿದ್ದಾರೆ.

               2019-20 ಹಾಗೂ 2021-2022ರಲ್ಲಿಯೂ ಇದೇ ಪ್ರವೃತ್ತಿ ಇತ್ತು. ಇಂತಹ ಪ್ರವೃತ್ತಿಯು ಸಮಾಜದ ಹೆಚ್ಚಿನ ವರ್ಗಕ್ಕೆ ವೈದ್ಯಕೀಯ ಶಿಕ್ಷಣವು ಕೈಗೆಟುಕುವಂತೆ ಮಾಡಲಿದೆ. ಇದರಿಂದಾಗಿ ಕೆಲವು ಎಂಬಿಬಿಎಸ್‌ ಪದವೀಧರರು ತಾಲ್ಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಲು ನಿರ್ಧರಿಸಬಹುದು ಎಂದು 'ಅಬ್ಸರ್ವರ್‌ ರೀಸರ್ಚ್‌ ಫೌಂಡೇಷನ್‌'ನಲ್ಲಿರುವ ಆರೋಗ್ಯ ಸಮಸ್ಯೆಗಳ ಕುರಿತ ಹಿರಿಯ ಸಂಶೋದಕ ಉಮ್ಮನ್ ಕುರಿಯನ್ ಹೇಳಿದ್ದಾರೆ.

                2019-20 ಮತ್ತು 2020-21ರಲ್ಲಿ ಸರ್ಕಾರಿ ಕಾಲೇಜುಗಳಲ್ಲಿ ಕ್ರಮವಾಗಿ 42,222 ಹಾಗೂ 43,435 ಸೀಟುಗಳು ಲಭ್ಯವಿದ್ದವು. ಇದೇ ಅವಧಿಯಲ್ಲಿ ಖಾಸಗಿ ಕಾಲೇಜುಗಳಲ್ಲಿ ಕ್ರಮವಾಗಿ 38,090 ಮತ್ತು 39,840 ಸೀಟುಗಳಿದ್ದವು.

             'ಉತ್ತಮ ಮೂಲ ಸೌಕರ್ಯ ಹಾಗೂ ಸಾರ್ವಜನಿಕ ವಲಯದಲ್ಲಿನ ಹೆಚ್ಚಿನ ಸೀಟುಗಳು ದೊರೆಯುವುದು, ಸದ್ಯ ಸಣ್ಣ ಮತ್ತು ದೊಡ್ಡ ನಗರಗಳಲ್ಲಿ ಅಥವಾ ಹಳ್ಳಿಗಳಲ್ಲಿ ಲಭ್ಯವಿರುವ ವೈದ್ಯರ ನಡುವೆ ಇರುವ ಅಂತರವನ್ನು ತೊಡೆದುಹಾಕಲು ಸಹಕಾರಿಯಾಗಬಲ್ಲದು' ಎಂದು ಕುರಿಯನ್ ಅಭಿಪ್ರಾಯಪಟ್ಟಿದ್ದಾರೆ.

                  ಸದ್ಯ ದೇಶದಲ್ಲಿ 13,08,009 ಆಲೋಪಥಿ ವೈದ್ಯರು ರಾಷ್ಟ್ರೀಯ ವೈದ್ಯಕೀಯ ಮಂಡಳಿಯಿಂದ ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ ಶೇ 80 ರಷ್ಟು ಮಂದಿ ಲಭ್ಯರಿದ್ದಾರೆ ಎಂದು ಪರಿಗಣಿಸಿದರೂ, ಭಾರತದ 140 ಕೋಟಿ ಜನಸಂಖ್ಯೆಗೆ ಇರುವ ವೈದ್ಯರ ಸಂಖ್ಯೆ 10.5 ಲಕ್ಷವಾಗುತ್ತದೆ. ಇದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಮಾನದಂಡ 1:1000 ವೈದ್ಯರು-ರೋಗಿಗಳ ಅನುಪಾತಕ್ಕಿಂತ ಕಡಿಮೆ ಇದೆ.

                                                  3,945 ಸೀಟುಗಳಿಗೆ ಹೆಚ್ಚಳಕ್ಕೆ ಅನುಮೋದನೆ
              ಕರ್ನಾಟಕದಲ್ಲಿ 550 ಸೀಟುಗಳೂ ಸೇರಿದಂತೆ 16 ರಾಜ್ಯಗಳ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಹೆಚ್ಚುವರಿಯಾಗಿ ಒಟ್ಟು 3,945 ಸೀಟುಗಳಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ಮಾಂಡವೀಯ ಹೇಳಿದ್ದಾರೆ.

                ಸೀಟುಗಳ ಹೆಚ್ಚಳಕ್ಕೆ ಯೋಜನೆ ಕೈಗೊಳ್ಳಲಾಗಿದೆಯಾದರೂ ಕರ್ನಾಟಕದ ಸರ್ಕಾರಿ ಕಾಲೇಜುಗಳಲ್ಲಿ ಲಭ್ಯವಿರುವ ಎಂಬಿಬಿಎಸ್‌ ಸೀಟುಗಳ ಪ್ರಮಾಣ ಖಾಸಗಿ ಕಾಲೇಜುಗಳಿಗೆ ಹೋಲಿಸಿದರೆ ಶೇ 50ಕ್ಕಿಂತಲೂ ಕಡಿಮೆ ಇದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries